ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬಿಜೆಪಿಯಲ್ಲಿಯೇ ಇದ್ದು, ಬಿಜೆಪಿ ನಾಯಕರ ವಿರುದ್ಧವೇ ಆತ ಮಾತನಾಡುವುದಾದರೆ ಪಕ್ಷಕ್ಕೆ ರಾಜೀನಾಮೆ ಕೊಟ್ಟು ಮಾತನಾಡಲಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಸಚಿವ ಮುರುಗೇಶ್ ನಿರಾಣಿ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನಿರಾಣಿ, ಬಿಜೆಪಿ ಸಿಂಬಾಲ್ ಮೇಲೆ ಆರಿಸಿ ಬಂದು ನಮ್ಮ ರಾಜ್ಯ, ರಾಷ್ಟ್ರೀಯ ನಾಯಕರ ಫೋಟೋ ಹಾಕಿಕೊಂಡು ಆ ಪಕ್ಷಕ್ಕೇ ಅನ್ಯಾಯ ಮಾಡುವುದು ಎಂದರೆ ಉಂಡ ಮನೆಗೆ ದ್ರೋಹ ಬಗೆದಂತೆ. ಹೀಗಾಗಿ ಇನ್ಮುಂದೆ ಯತ್ನಾಳ್ ಬಾಯಿ ಮುಚ್ಚಿಕೊಂಡಿದ್ದರೆ ಒಳ್ಳೆಯದು ಇಲ್ಲ ರಾಜೀನಾಮೆ ಕೊಡುವುದು ಉತ್ತಮ ಎಂದರು.
ಅತ್ಯಂತ ನಾಲಾಯಕ್ ರಾಜಕಾರಣಿ ಯಾರಾದರೂ ಇದ್ದರೆ ಅದು ಬಿಜೆಪಿ ಶಾಸಕ ಯತ್ನಾಳ್. ಅವನಿಗೆ ಮಾತನಾಡಲು ಬಿಟ್ಟಿದ್ದು ಯಾರು? ಈ ಹಿಂದೆ ಶೆಟ್ಟರ್ ಪಟ್ಟರ್ ಎಂದು ಎರಡ್ಮುರು ವರ್ಷ ಇದೇ ಶಬ್ಧಗಳನ್ನು ಬಳಸಿಕೊಂಡು ಮಾತಾಡಿದ್ದರು. ವಿ.ಸೋಮಣ್ಣ ಬಗ್ಗೆಯೂ ಮಾತಾಡಿದ್ದಾರೆ. ಈಗ ಸಿಎಂ ಯಡಿಯೂರಪ್ಪ, ವಿಜಯೇಂದ್ರ ಎಲ್ಲರ ಬಗ್ಗೆಯೂ ಮಾತನಾಡುತ್ತಿದ್ದಾರೆ. ಆತನಿಗೆ ಮಾನವಿಯತೆ ಎಂಬುದು ಇದ್ದರೆ ಮೊದಲು ರಾಜೀನಾಮೆ ಕೊಟ್ಟು ಮಾತಾಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ