Kannada NewsLatest

ಮ್ಯಾಗ್ನಂ ಸಿನಿಮಾಸ್ ಚಿತ್ರಮಂದಿರ ಉದ್ಘಾಟಿಸಿದ ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಸಂಸದ ಅಣ್ಣಾಸಾಹೇಬ ಜೊಲ್ಲೆ

ಪ್ರಗತಿವಾಹಿನಿ ಸುದ್ದಿ; ಚಿಕ್ಕೋಡಿ: ‘ಕ್ಷೇತ್ರದಲ್ಲಿ ಮೂಲ ಸೌಕರ್ಯಗಳಾದ ರಸ್ತೆ, ನೀರಿನ ಯೋಜನೆ, ಮಾಲ್, ಆಧುನಿಕ ಚಿತ್ರಮಂದಿರ, ಈಜುಕೊಳ, ಉದ್ಯಾನ, ಟ್ವಾಯ್ ಟ್ರೇನ್ ನಂತಹ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಹಾಗಾಗಿ ಆಧುನಿಕ ಸೌಲಭ್ಯಗಳ ನಿಪ್ಪಾಣಿಗರ ಕನಸು ನನಸಾಗುತ್ತಿದೆ. ತಾಲೂಕಿನ ಅಭಿವೃದ್ಧಿಯ ಇನ್ನಷ್ಟು ಕಾರ್ಯಗಳು ಭರದಿಂದ ಸಾಗಲಿದೆ’ ಎಂದು ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

ನಗರದಲ್ಲಿ ಅತ್ಯಾಧುನಿಕ ತಂತ್ರಜ್ಞಾನದಿಂದ ನಿರ್ಮಾಣಗೊಂಡ ಮ್ಯಾಗ್ನಂ ಸಿನಿಮಾ ಚಿತ್ರಮಂದಿರವನ್ನು ಸೋಮವಾರ ಉದ್ಘಾಟಿಸಿ ಅವರು ಮಾತವಾಡಿದರು. ‘86 ಶಾಲಾ ಕಟ್ಟಡಗಳು ಮತ್ತು 60 ಅಂಗನವಾಡಿ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಕ್ಷೇತ್ರದ ಹಲವಾರು ಗ್ರಾಮಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಜನರು ಮನೊರಂಜನೆಗಾಗಿ ನಗರದಲ್ಲಿ ಏನಾದರೂ ಮಾಡಬೇಕಾಗಿ ವಿನಂತಿಸುತ್ತಿದ್ದರು. ಹಾಗಾಗಿ ಇಲ್ಲಿ ಜೊಲ್ಲೆ ಸಮೂಹದಿಂದ ಚಿತ್ರಮಂದಿರವನ್ನು ಪ್ರಾರಂಭಿಸಲಾಗಿದೆ. ನಾಗರಿಕರ ಅಪೇಕ್ಷೆಯಂತೆ ಸೌಲಭ್ಯಗಳನ್ನು ಒದಗಿಸಲಾಗುವುದು. ಬರುವ ದಿನಗಳಲ್ಲಿ ಕ್ರೀಡಾ ಮೈದಾನದ ಜೊತೆಗೆ ರಸ್ತೆಗಳೆಲ್ಲ ಮಿಂಚಲಿವೆ’ ಎಂದರು.

ಬಸವಜ್ಯೋತಿ ಯುಥ್ ಫೌಂಡೇಶನ್ ಅಧ್ಯಕ್ಷ ಬಸವಪ್ರಸಾದ ಜೊಲ್ಲೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, 30 ವರ್ಷಗಳ ಹಿಂದೆ ಸ್ಥಾಪನೆಯಾದ ಜೊಲ್ಲೆ ಉದ್ಯೊಗ ಸಮೂಹ ಈಗ ಹೆಮ್ಮರವಾಗಿ ಬೆಳೆದಿದೆ. 153 ಶಾಖೆಗಳ ಬಿರೇಶ್ವರ ಸಂಸ್ಥೆ ಈಗ ಕರ್ನಾಟಕ ಮತ್ತು ಮಹಾರಾಷ್ಟ್ರ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಶಾಖೆಗಳನ್ನು ಹೊಂದಿದೆ. ಜೊಲ್ಲೆ ಉದ್ಯೊಗ ಸಮೂಹ ಸಹಕಾರ, ಶಿಕ್ಷಣ, ಫೈನಾನ್ಸ್, ರಿಯಲ್ ಇಸ್ಟೆಟ್, ರಿಟೇಲಿಂಗ್, ಹಾಸ್ಪಿಟಾಲಿಟಿ, ಎಂಟರ್‌ಟೇನಮೆಂಟ್ ಮತ್ತು ಗ್ಲಾಸ್ ಉದ್ಯಮ ಮುಖಾಂತರ 8 ವರ್ಟಿಕಲ್‌ಗಳ ಮೂಲಕ 2500 ಜನರಿಗೆ ಉದ್ಯೋಗವಕಾಶ ಕಲ್ಪಿಸಿದೆ’ ಎಂದರು.

ಉಪವಿಭಾಗಾಧಿಕಾರಿ ಶಶಿಧರ ಬಗಲಿ ಜೊಲ್ಲೆ ಉದ್ಯೊಗ ಸಮೂಹದ ಕಾರ್ಯಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರಾರಂಭದಲ್ಲಿ ಸಚಿವೆ ಶಶಿಕಲಾ ಜೊಲ್ಲೆ, ಸಂಸದ ಅಣ್ಣಾಸಾಹೇಬ ಜೊಲ್ಲೆ, ಬಸವಪ್ರಸಾದ ಜೊಲ್ಲೆ, ಜ್ಯೋತಿಪ್ರಸಾದ ಜೊಲ್ಲೆ ಮತ್ತು ಗಣ್ಯರು ದೀಪ ಪ್ರಜ್ವಲಣೆ ಮೂಲಕ ಚಿತ್ರಮಂದಿರವನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಸ್ಥಳೀಯ ಶ್ರೀ ಹಾಲಸಿದ್ದನಾಥ ಸಹಕಾರಿ ಸಕ್ಕರೆ ಕಾರಖಾನೆಯ ಚೇಅರಮನ್ ಚಂದ್ರಕಾAತ ಕೋಠಿವಾಲೆ, ಡಾ. ಎಸ್.ಎಸ್. ಗಡಾದ. ನಗರಸಭೆ ಪೌರಾಯುಕ್ತ ಜಗದೀಶ ಹುಲಿಗೆಜ್ಜೆ, ಎಂಜಿಎಂ ಸಿಎಮ್‌ಓ ಡಾ. ಸೀಮಾ ಗುಂಜಾಳ, ಪಿಎಲ್‌ಡಿಎ ಬ್ಯಾಂಕ್ ಅಧ್ಯಕ್ಷ ಎಸ್.ಎಸ್. ದವಣೆ, ಸಿದ್ಧು ನರಾಟೆ, ಸಿಪಿಐ ಸಂಗಮೇಶ ಶಿವಯೋಗಿ, ರೆ ಎಂಟರ್‌ಟೇನ್‌ಮೆAಟ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಅಶ್ವಿನ್ ಅಂಚಲ್, ವಿವೇಕಾನಂದ ಬಂಕೊಳಿ, ನಗರಸಭೆ ಸದಸ್ಯರು, ನಾನಾ ಸಂಘಟನೆಗಳ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು. ರಮೇಶ ಪಾಟೀಲ ನಿರೂಪಿಸಿ ವಂದಿಸಿದರು.
ಅತಿಥಿ ಉಪನ್ಯಾಸಕರ ಪ್ರತಿಭಟನೆ; ಸಚಿವ ಡಾ.ಅಶ್ವತ್ಥನಾರಾಯಣ ಭೇಟಿಯಾದ ಪರಿಷತ್ ಸದಸ್ಯರು

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button