ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕಾಂಗ್ರೆಸ್ ಯುವ ನಾಯಕಿ ನವ್ಯಶ್ರೀ ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದ್ದು, ಆಕೆ ತನ್ನ ಪತ್ನಿಯಲ್ಲ, ಮದುವೆ ಬಗ್ಗೆ ಸಾಕ್ಷಿಯೇ ಇಲ್ಲ ಎಂದು ತೋಟಗಾರಿಕಾ ಇಲಾಖೆ ಅಧಿಕಾರಿ ರಾಜಕುಮಾರ್ ತಾಕಳೆ ತಿಳಿಸಿದ್ದಾರೆ.
ರಾಜಕುಮಾರ್ ಟಾಕಳೆ ನನ್ನ ಗಂಡ ಎಂಬ ನವ್ಯಶ್ರೀ ಹೇಳಿಕೆಗೆ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಜಕುಮಾರ್ ಟಾಕಳೆ, ನವ್ಯಶ್ರೀ ನನ್ನ ಪತ್ನಿಯಲ್ಲ, ಮದುವೆಯಾಗಿಯೇ ಇಲ್ಲ ಎಂದ ಮೇಲೆ ಹೆಂಡತಿ ಹೇಗೆ? ಆಕೆ ಪದೇ ಪದೇ ನನ್ನನ್ನು ಗಂಡ ಎಂದು ಹೇಳುತ್ತಿರುವುದು ನನನಗೆ ಮಾನಸಿಕ ಹಿಂಸೆಯಾಗಿದೆ. ಆಕೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾಳೆ ನನಗೆ ಕಳೆದ 5-6 ತಿಂಗಳಿಂದ ನವ್ಯಶ್ರೀ ಮಾನಸಿಕ ಕಿರುಕುಳ ನೀಡುತ್ತಿದ್ದಾಳೆ. ನನಗೆ ಹೆಂಡತಿ, ಮಕ್ಕಳು ಇದ್ದಾರೆ. ಅವರ ಸಹಕಾರದಿಂದಲೇ ಈಗ ನವ್ಯಶ್ರೀ ವಿರುದ್ಧ ದೂರು ದಾಖಲಿಸಿದ್ದೇನೆ ಎಂದರು.
ನವ್ಯಶ್ರೀ ಕಷ್ಟ ಇದೆ ಎಂದು ಹೇಳಿಕೊಂಡಿದ್ದರು. ನಮ್ಮದೇ ಸಮಾಜದವರು ಎಂಬ ಕಾರಣಕ್ಕೆ ಅವರ ಕಷ್ಟಕ್ಕೆ ಸ್ಪಂದಿಸಿ, ಮನೆಯಲ್ಲಿ ಇರಲು ಹೇಳಿದ್ದೆ. 50 ಲಕ್ಷ ಹಣಕ್ಕೆ ಬೇಡಿಕೆ ಇಟ್ಟು ಬ್ಲ್ಯಾಕ್ ಮೇಲ್ ಮಾಡಿದ್ದಾರೆ. ಈಗಾಗಲೇ 2 ಲಕ್ಷ ಹಣವನ್ನು ಪಡೆದಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಹಿಂದೆ ನೀಡಿದ್ದಾರೆ. ನನಗೆ ಮದುವೆಯಾಗಿದೆ ಎಂದು ಗೊತ್ತಾಗುತ್ತಿದ್ದಂತೆ ಬ್ಲ್ಯಾಕ್ ಮಾಡುತ್ತಿದ್ದಾರೆ. ನನ್ನ ಹೆಂಡತಿ ಮಕ್ಕಳು ಜೊತೆಯಲ್ಲಿ ನಾವಿದ್ದೇವೆ ದೂರು ದಾಖಲಿಸುವಂತೆ ಹೇಳಿದ್ದರು. ಹೆಂಡತಿ ಸಹಕಾರದಿಂದಲೇ ಬೆಳಗಾವಿ ಎಪಿಎಂಸಿ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ ಎಂದರು.
ನವ್ಯಶ್ರೀ ಬಳಿ ಯಾವ ದಾಖಲೆ ಇದ್ದರೂ ಬಿಡಿಗಡೆ ಮಾಡಲಿ. ಇಂತಹ ಬ್ಲ್ಯಾಕ್ ಮೇಲ್ ಗೆ ಯಾರೂ ಒಳಗಾಗಬಾರದು. ಇದು ಸಮಾಜಕ್ಕೆ ಒಂದು ಸಂದೇಶವಾಗಲಿ. ನನಗೆ ನ್ಯಾಯ ಸಿಗುವ ಭರವಸೆಯಿದೆ. ಯಾರೂ ಕೂಡ ಬ್ಲ್ಯಾಕ್ ಮೇಲ್ ಗೆ ಒಳಗಾಗಬಾರದು. ಪ್ರಕರಣದ ಬಗ್ಗೆ ತನಿಖೆ ನಡೆದು ಸತ್ಯಾಸತ್ಯತೆ ಜನರಿಗೆ ಗೊತ್ತಾಗಲಿ ಎಂದು ಹೇಳಿದರು.
ಶೃಂಗೇರಿ ಶ್ರೀಗಳಿಗೆ ಅವಮಾನ; ಆರೋಪಿಗೆ 3 ವರ್ಷ ಜೈಲು ಶಿಕ್ಷೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ