Kannada NewsKarnataka NewsLatest

*60ಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಸೇರ್ಪಡೆ*

ಪ್ರಗತಿವಾಹಿನಿ ಸುದ್ದಿ; ನಿಪ್ಪಾಣಿ: ತಾಲೂಕಿನ ಹುನ್ನರಗಿ ಗ್ರಾಮದ ಸುಮಾರು 40ಕ್ಕೂ ಅಧಿಕ ಕಾರ್ಯಕರ್ತರು ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಸಂಸದ ಅಣ್ಣಾಸಾಹೇಬ ಜೊಲ್ಲೆಯವರ ಸಮ್ಮುಖದಲ್ಲಿ ತಾಲೂಕಿನ ಭಿವಶಿ ಗ್ರಾಮದ ಕಾರ್ಯಾಲಯದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.

ವಿಶ್ವನಾಥ ಪಾಟೀಲ, ಮಹಾದೇವ ಸ್ವಾಮಿ, ರಘುನಾಥ ಪಾಟೀಲ, ಪ್ರಭಾಕರ ದೇಸಾಯಿ, ಸಂಜಯ ಪಾಟೀಲ, ರಮೇಶ ಕಿಲ್ಲೇದಾರ, ಮೊದಲಾದವರು ಸೇರಿದಂತೆ ಹುರಗಿ ಗ್ರಾಮದ 40ಕ್ಕೂ ಅಧಿಕ ಕೈ ಕಾರ್ಯಕರ್ತರನ್ನು ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಸಂಸದ ಅಣ್ಣಾಸಾಹೇಬ ಜೊಲ್ಲೆ ಪಕ್ಷದ ಶಾಲು ಹಾಕಿ ಬರಮಾಡಿಕೊಂಡರು.

ಈ ಸಂದರ್ಭದಲ್ಲಿ ರಘುನಾಥ ಪಾಟೀಲ ಮಾತನಾಡಿ ‘ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅಭಿವೃದ್ಧಿ ಹಾಗೂ ಸಚಿವೆ ಶಶಿಕಲಾ ಜೊಲ್ಲೆ ಮತ್ತು ಸಂಸದ ಅಣ್ಣಾಸಾಹೇಬ ಜೊಲ್ಲೆಯವರ ಅಭಿವೃದ್ಧಿ ಕಾರ್ಯಗಳನ್ನು ಗಮನಿಸಿ ಬಿಜೆಪಿಗೆ ಸೇರ್ಪಡೆಗೊಂಡಿದ್ದೇವೆ’ ಎಂದರು.

ಗಳತಗಾ ಕಾರ್ಯಕರ್ತರ ಸೇರ್ಪಡೆ:
ಗಳತಗಾ ಗ್ರಾಮದ ಸುಭಾಷ ಹೆಗಡೆ, ಸಿದ್ಧಾ ಹಿರವೆ, ನಿಂಗಪ್ಪ ಹಿರವೆ, ಭರತ ಶಹಾಮಾನೆ, ಅಲ್ತಾಫ್ ಮುಲ್ಲಾ, ಮೊದಲಾದವರು ಸೇರಿದಂತೆ ಸುಮಾರು 20ಕ್ಕೂ ಅಧಿಕ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆಗೊಂಡರು. ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರನ್ನು ಪಕ್ಷದ ಸ್ಕಾರ್ಫ್ ಹಾಕಿ ಸ್ವಾಗತಿಸಿದರು.

Home add -Advt
https://pragati.taskdun.com/bjp-candidates3rd-listannounced/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button