ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ವಿಷಾಹಾರ ಸೇವನೆಯಿಂದ ತಾಯಿ ಹಾಗೂ ಮಗ ಇಬ್ಬರೂ ಸಾವನ್ನಪ್ಪಿರುವ ಘಟನೆ ಬೆಳಗಾವಿಯ ಹುದಲಿ ಗ್ರಾಮದಲ್ಲಿ ನಡೆದಿದೆ.
ಪಾರ್ವತಿ ಮಳಗಳಿ (53) ಹಾಗೂ ಸೋಮನಿಂಗಪ್ಪ ಮಳಗಳಿ (28) ಮೃತರು. ಭಾನುವಾರ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಹೊಲಕ್ಕೆ ಹೋಗಿ ಮನೆಗೆ ವಾಪಸ್ ಆಗಿದ್ದ ತಾಯಿ, ಮಗ ಇಬ್ಬರೂ ಮನೆಯಲ್ಲಿ ಬಜ್ಜಿ ಸೇವಿಸಿದ್ದಾರೆ. ಬಜ್ಜಿ ತಿಂದ ಕೆಲ ಹೊತ್ತಲ್ಲೇ ಇಬ್ಬರಿಗೂ ವಾಂತಿ ಶುರುವಾಗಿದ್ದು, ತೀವ್ರ ಅಸ್ವಸ್ಥಗೊಂಡಿದ್ದಾರೆ.
ತಾಯಿ ಹಾಗೂ ಮಗ ಇಬ್ಬರನ್ನೂ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಬ್ಬರೂ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ವಿಷಾಹಾರ ಸೇವನೆಯೇ ಇಬ್ಬರ ಸಾವಿಗೆ ಕಾರಣ ಎನ್ನಲಾಗಿದೆ.
ಮಾರಿಹಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಒಂದೇ ಗ್ರಾಮದಲ್ಲಿ ಮೂವರು ಬಾಲಕಿರು ಸಾವು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ