ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಐರನ್ ಮ್ಯಾನ್ ಬಿರುದು ಪಡೆದ ಕರ್ನಾಟಕದ ಮೊದಲ ಪೊಲೀಸ್ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಪೊಲೀಸ್ ಇನ್ಸ್‌ಪೆಕ್ಟರ್ ಮುರಗೇಶ ಚನ್ನಣ್ಣವರ ಅವರನ್ನು ಇಂದು ಬೆಳಗಾವಿ ಜಿಲ್ಲಾ ಪೊಲೀಸ್ ಕ್ರೀಡಾ ಕೂಟ ಮುಕ್ತಾಯ ಸಮಾರಂಭದಲ್ಲಿ ಸನ್ಮಾನಿಸಲಾಯಿತು.
ಮುರಗೇಶ ಚನ್ನಣ್ಣವರ 2005 ನೇ ಸಾಲಿನಲ್ಲಿ ಪಿಎಸ್‌ಐ ರಾಗಿದ್ದು 2016ರಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಹುದ್ದೆಗೆ ಮುಂಬಡ್ತಿ ಹೊಂದಿ ಹಾಲಿ ಹೆಸ್ಕಾಂ ಜಾಗೃತ ದಳ, ಹುಬ್ಬಳ್ಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 2021 ರಲ್ಲಿ ಇತ್ತೀಚೆಗೆ ಓರಿಸಾದ ಕೋನಾರ್ಕ್ ನಲ್ಲಿ Full Iron Man ಅಂದರೆ 3.8 8.20. dea, 180 8.20. ಸೈಕ್ಲಿಂಗ್ ಮತ್ತು 42.2 ಕಿ.ಮಿ. ರನ್ನಿಂಗ್ ಮೂರನ್ನು ಸತತವಾಗಿ 15 ಗಂಟೆ 56 ನಿಮಿಷಗಳಲ್ಲಿ ಪೂರ್ಣಗೊಳಿಸಿ Iron Man ಬಿರುದು ಪಡೆದ ಕರ್ನಾಟಕದ ಮೊದಲ ಪೊಲೀಸ್ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಚೆನ್ನಣ್ಣವರ ಸಾಹಸ ನಮ್ಮ ಪೊಲೀಸ್ ವಿಭಾಗಕ್ಕೆ, ರಾಜ್ಯಕ್ಕೆ ಹೆಸರು, ಕೀರ್ತಿಯನ್ನು ತಂದಿದ್ದು, ಇಂದು ಬೆಳಗಾವಿ ಜಿಲ್ಲಾ ಪೊಲೀಸ್ ಕ್ರೀಡಾ ಕೂಟ ಮುಕ್ತಾಯ ಸಮಾರಂಭದಲ್ಲಿ ಬೆಳಗಾವಿ ಉತ್ತರ ವಲಯ ಐ.ಪಿ.ಎಸ್ ಆರಕ್ಷಕ ಮಾಹಾನಿರೀಕ್ಷಕ ಎಚ್. ಜಿ. ರಾಘವೇಂದ್ರ ಸುಹಾಸ, ಬೆಳಗಾವಿ ನಗರ ಐಪಿಎಸ್ ಪೊಲೀಸ್ ಆಯುಕ್ತ ಡಾ: ಕೆ. ತ್ಯಾಗರಾಜನ್ ಹಾಗೂ ಬೆಳಗಾವಿ ಜಿಲ್ಲೆ ಐಪಿಎಸ್ ಆರಕ್ಷಕ ಅಧೀಕ್ಷಕ ಲಕ್ಷ್ಮಣ ಬ. ನಿಂಬರಗಿಯವರು ಸನ್ಮಾನಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ