ಪ್ರಗತಿವಾಹಿನಿ ಸುದ್ದಿ: ಹುವಿಸಕಂನಿ ವತಿಯಿಂದ ತುರ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುತ್ತಿರುವುದರಿಂದ ಅ.5 ರಂದು ಬೆಳಿಗ್ಗೆ 10 ಘಂಟೆಯಿಂದ ಸಂಜೆ 5 ಘಂಟೆಯವರೆಗೆ 110 ಕೆ.ವಿ. ಸುವರ್ಣ ಸೌಧ ಉಪಕೇಂದ್ರದಿಂದ ವಿತರಣೆಯಾಗುವ ವಿದ್ಯುತ್ ಬಸ್ತವಾಡ, ಶಗನಮಟ್ಟಿ, ಮಾಸ್ತಮರಡಿ, ಬಸರಿಕಟ್ಟಿ, ಶಿಂಧೋಳ್ಳಿ, ಮುತಗಾ, ಶ್ರೀರಾಮ ಕಾಲನಿ, ಸಾರಿಗೆ ನಗರ, ಮಹಾಲಕ್ಷ್ಮೀ ಪುರಂ, ಸಾಯಿ ನಗರ, ಭರತೇಶ ಕಾಲೇಜ, ಶಿಂಧೋಳ್ಳಿ ಕ್ರಾಸ್, ನಿಲಜಿ ಕ್ರಾಸ್ ಗ್ರಾಮಗಳಿಗೆ ಹಾಗೂ ಸದರಿ ಗ್ರಾಮಗಳ ನೀರಾವರಿ ಪಂಪ್‌ಸೆಟ್‌ಗಳ ಏರಿಯಾಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಕಾರ್ಯನಿರ್ವಾಹಕ ಇಂಜಿನೀಯರರು(ವಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
10 ಗಂಟೆಯಿಂದ ಸಂಜೆ 4 ಗಂಟೆವರೆಗೆ ವಿದ್ಯುತ್ ವ್ಯತ್ಯಯ
ಕ.ವಿ.ಪ್ರ.ನಿ.ನಿ ವತಿಯಿಂದ ಮೂರನೇಯ ತ್ರೈಮಾಸಿಕ ಹಾಗೂ ಇತರೆ ತುರ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುತ್ತಿರುವುದರಿಂದ ಅ.5 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆವರೆಗೆ 110 ಕೆ.ವಿ. ಹುದಲಿ ಉಪಕೇಂದ್ರದಿಂದ ವಿದ್ಯುತ್ ಸರಬರಾಜುನಲ್ಲಿ ವ್ಯತ್ಯಯ ಉಂಟಾಗಲಿದೆ.
ಹುದಲಿ, ನಂದಿ ಕುಡಿಯುವ ನೀರಿನ ಘಟಕ, ಕುಮರಿ, ರಂಗದೋಳಿ, ತುಮ್ಮರಗುದ್ದಿ, ಸೋಮನಟ್ಟಿ, ಕಬಲಾಪೂರ, ಚಂದೂರ, ಖನಗಾಂವ ಕೆ.ಎಚ್, ಖನಗಾಂವ ಬಿ.ಕೆ, ಅಷ್ಟೆ, ಮುಚ್ಚಂಡಿ, ಕಲಕಾಂಬ ಗ್ರಾಮಗಳಿಗೆ ಹಾಗೂ ಸದರಿ ಗ್ರಾಮಗಳ ನೀರಾವರಿ ಪಂಪ್‌ಸೆಟ್‌ಗಳ ಏರಿಯಾಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂಬ ಕಾರ್ಯನಿರ್ವಾಹಕ ಇಂಜಿನೀಯರರು(ವಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ