
ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ನಗರದ ರಾಣಿ ಚನ್ನಮ್ಮ ನಗರ ಬಡಾವಣೆಯ ಎಸ್. ಬಿ. ಆಯ್ ಪ್ರಮುಖ ರಸ್ತೆಯ ಕಟ್ಟಡದಲ್ಲಿ ಪ್ರಮೋದಾತ್ಮ ಸಹಕಾರಿ ಸಂಘದ ಕಛೇರಿಯನ್ನು ಉತ್ತರಾದಿ ಮಠಾಧೀಶರಾದ ಶ್ರೀಸತ್ಯಾತ್ಮತೀರ್ಥ ಶ್ರೀಪಾದರು ದೀಪ ಪ್ರಜ್ವನೆ ಮೂಲಕ ಉದ್ಘಾಟನೆ ನೆರವೇರಿಸಿದರು.
ಪ್ರಸ್ತುತ ಸಂಘದ ಅಧ್ಯಕ್ಷರಾದ ಶ್ರೀನಿವಾಸ ಶಿವಣಿಗಿಯವರು ಸಹಕಾರಿ ಸಂಘದ ಧ್ಯೇಯ ಉದ್ದೇಶಗಳನ್ನು ವಿವರಿಸಿದರು. ಆರ್ಥಿಕವಾಗಿ ಸಾರ್ವಜನಿಕರಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಪ್ರಾರಂಭ ಮಾಡುತ್ತಿರುವ ಸಂಘದ ಚಾಲನೆ ಬಗ್ಗೆ ತಮ್ಮ ಹರ್ಷ ವ್ಯಕ್ತಪಡಿಸಿದ ಶ್ರೀ ಪಾದಂಗಳವರು ಸಂಘದ ಎಲ್ಲ ಚಾಲಕರನ್ನು ಅಭಿನಂದಸಿ ಸಂಘವು ಉತ್ತರೊತ್ತರ ಬೆಳವಣಿಗೆಯಾಗಲಿ ಎಂದು ಆಶೀರ್ವಾದಿಸಿದರು. ಉಧ್ಗಾಟನಾ ಕಾರ್ಯಕ್ರಮದಲ್ಲಿ ಶ್ರಿನಿವಾಸ ಶಿವಣಗಿ, ಪಂ. ಪ್ರಮೋದಾಚಾರ್ಯ ಕಟ್ಟಿ, ಆರ್ ವಿ ದೇಶಪಾಂಡೆ, ಅರವಿಂದ ತೆಲಂಗ, ಜಿ. ಕೆ. ಕುಲಕರ್ಣಿ, ಕೇಶವ ಮಾಹುಲಿ, ಶ್ರೀ. ವ್ಯಾಸಾಚಾರ್ಯ ಅಂಬೇಕರ, ಅಚ್ಚುತ ಪ್ರಯಾಗ, ರಾಜೀವ ಜೋಶಿ, ಸಂತೋಷ ಕಟ್ಟಿ, ರಾಜೇಂದ್ರ ಕುಲಕರ್ಣಿ,ಸೌ. ಕವಿತಾ ಮಜಲಿಕರ ಸತ್ಯವತಿ ಶಿವಣಗಿ, ಅನಘಾ ಪ್ರಯಾಗ, ಅಮೃತಾ ಪ್ರಯಾಗ, ವಿದ್ಯಾ ಮಾಹುಲಿ, ಅರ್ಚನಾ ತೆಲಂಗ, ಆನಂದ ಪ್ರಯಾಗ ಮತ್ತು ಉತ್ಕರ್ಷ ವಿಪ್ರ ವೇದಿಕೆಯ ಸದಸ್ಯರು ಉಪಸ್ಥಿತರಿದ್ದರು.