Belagavi NewsBelgaum News

*ಹಬ್ಬದ ದಿನವೇ ಆಸ್ತಿಗಾಗಿ ಮಾರಾಮಾರಿ: ಅಣ್ಣನಿಂದಲೇ ತಮ್ಮನ ಕುಟುಂಬದವರ ಮೇಲೆ ಮಾರಣಾಂತಿಕ ಹಲ್ಲೆ*

ಪ್ರಗತಿವಾಹಿನಿ ಸುದ್ದಿ: ಆಸ್ತಿಗಾಗಿ ಅಣ್ಣ-ತಮ್ಮಂದಿರ ನಡುವೆ ಮಾರಾಮಾರಿ ನಡೆದಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಅಲಕನೂರು ಗ್ರಾಮದಲ್ಲಿ ನಡೆದಿದೆ.

ಆಸ್ತಿಯನ್ನು ತಮ್ಮ ಹೆಸರಿಗೆ ಮಾಡುವಂತೆ ಅಣ್ಣ ಕರೆಪ್ಪನನ್ನು ತಮ್ಮ ಹಾಗೂ ಆತನ ಮಕ್ಕಳು ಒತ್ತಾಯಿಸಿದ್ದರು. ಆದರೆ ಅಣ್ಣ ಕರೆಪ್ಪ ಎಲ್ಲಾ ಆಸ್ತಿಯನ್ನು ತನ್ನ ಹೆಸರಿಗೆ ಮಾಡಿಕೊಂಡಿದ್ದ. ಇದರಿಂದ ಸಹೋದರ ಗೋಪಾಲ್ ಹಾಗೂ ಆತನ ಮಕ್ಕಳು ಆಸ್ತಿಯಲ್ಲಿ ಪಾಲು ಕೇಳಿದ್ದರು.

Home add -Advt

ಈ ವೇಳೆ ಮಾತಿಗೆ ಮಾತು ಬೆಳೆದು ಮಾರಾಮಾರಿ ನಡೆದಿದೆ. ಕರೆಪ್ಪ ತಮ್ಮ ಹಾಗೂ ಆತನ ಕುಟುಂಬದವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.

ಗೋಪಾಲ್ ಮಾಂಗ, ಶೈನಪ್ಪ ಮಾಂಗ, ಆನಂದ್ ಮಾಂಗ, ಪುಲಾಬಾಯಿ ಮಾಂಗ, ಬಸವರಾಜ್ ಮಾಂಗ ಎಂಬುವವರ ಮೆಲೆ ಹಲ್ಲೆ ನಡೆಸಿದ್ದು, ಗಾಯಾಳುಗಳನ್ನು ಹಾರುಗೇರಿ ಖಾಸಗಿ ಆಸ್ಪತ್ರೆಗೆ ದಾಖಲುಸಲಾಗಿದೆ. ಕರೆಪ್ಪ ಹಾಗೂ ಮಕ್ಕಳಿಂದ ಹಲ್ಲೆ ನಡೆದಿದ್ದು, ಘಟನೆ ಬಳಿಕ ಆರೋಪಿಗಳು ನಾಪತ್ತೆಯಾಗಿದ್ದಾರೆ.

ಹಾರೂಗೇರಿ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button