Kannada NewsLatest

ರಸ್ತೆ ತಡೆ ನೆಪದಲ್ಲಿ ವಾಹನ ಸವಾರರ ಮೇಲೆ ಹಲ್ಲೆ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಸಿಡಿ ಪ್ರಕರಣದ ಬೆನ್ನಲ್ಲೇ ರಮೇಶ್ ಜಾರಕಿಹೊಳಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದಾಗಿನಿಂದ ಬೆಂಬಲಿಗರ ಪ್ರತಿಭಟನೆ ತೀವ್ರಗೊಂಡಿದ್ದು, ಪ್ರಕರಣ ಸಂಬಂಧ ಸಿಬಿಐ ತನಿಖೆಗೆ ಆಗ್ರಹಿಸಿ ಇಂದು ಬೆಳಗಾವಿ ಜಿಲ್ಲೆ ಅಂಕಲಗಿ ಗ್ರಾಮ ಬಂದ್ ಗೆ ಕರೆ ನೀಡಲಾಗಿದೆ.

ಗೋಕಾಕ್ ತಾಲೂಕಿನ ಅಂಕಲಗಿ ಗ್ರಾಮ ಬಂದ್ ಮಾಡಿ ರಮೇಶ್ ಬೆಂಬಲಿಗರು ಪ್ರತಿಭಟನೆ ನಡೆಸಿದ್ದು, ಇಡೀ ಗ್ರಾಮ ಸ್ಥಬ್ದವಾಗಿದೆ. ಸಿಡಿ ದೂರುದಾರ ದಿನೇಶ್ ಕಲ್ಲಹಳ್ಳಿ ಬಂಧನಕ್ಕೆ ಆಗ್ರಹಿಸಿರುವ ಅಭಿಮಾನಿಗಳು ರಸ್ತೆಯಲ್ಲಿ ಟೈಯರ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನೊಂದೆಡೆ ಮಮದಾಪುರ ಕ್ರಾಸ್ ನಲ್ಲಿ ರಮೇಶ್ ಜಾರಕಿಹೊಳಿ ಬೆಂಬಲಿಗರು ರಸ್ತೆ ತಡೆ ನೆಪದಲ್ಲಿ   ವಾಹನ ಸವಾರರ ಮೇಲೆ ಹಲ್ಲೆ ನಡೆಸಿದ್ದಾರೆ.

ಶನಿವಾರವೂ ಹಲವೆಡೆ ಪ್ರತಿಭಟನೆಗೆ ಸಜ್ಜಾದ ರಮೇಶ್ ಜಾರಕಿಹೊಳಿ ಅಭಿಮಾನಿಗಳು

Home add -Advt

ಇನ್ನೂ 6 ಸಚಿವರು ಇಂದು ನ್ಯಾಯಾಲಯಕ್ಕೆ : ಮುಂಬೈಗೆ ಹೋದವರೆಲ್ಲ ಕೋರ್ಟ್ ಗೆ

Related Articles

Back to top button