Latest

ಕಿವಿಯನ್ನೇ ಕತ್ತರಿಸಿದ ಪತ್ನಿ: ಬಾಟಲ್ ನಲ್ಲಿ ತಂದ ಪತಿ

ಪ್ರಗತಿವಾಹಿನಿ ಸುದ್ದಿ; ಚಿತ್ರದುರ್ಗ: ತನ್ನ ಮೇಲೆ ಸದಾ ಅನುಮಾನ ವ್ಯಕ್ತಪಡಿಸುತ್ತಿದ್ದ ಪತಿಯವರ್ತನೆಗೆ ಬೇಸತ್ತ ಪತ್ನಿ ಗಂಡನ ಕಿವಿಯನ್ನೇ ಕತ್ತರಿಸಿದ ಘಟನೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆಯ ಗಾಂಧಿನಗರದಲ್ಲಿ ನಡೆದಿದೆ.

ಮೈಲಾರಿ ಪತ್ನಿಯಿಂದ ಹಲ್ಲೆಗೊಳಗಾದ ವ್ಯಕ್ತಿ. ಪತ್ನಿ ಬೇರೆಯವರ ಜೊತೆ ಓಡಾಡುತ್ತಿದ್ದಳು ಎಂದು ಮೈಲಾರಿ ಹೆಂದೆ ಹಲವುಬಾರಿ ಎಚ್ಚರಿಕೆ ನೀಡಿದ್ದಾನೆ ಎನ್ನಲಾಗಿದೆ. ಗಂಡನ ಅನುಮಾನಕ್ಕೆ ಬೇಸತ್ತು ಪತ್ನಿ ತನ್ನ ಸಹೋದರನ ಜೊತೆಗೂಡಿ ಗಂಡನ ಕಿವಿಯನ್ನೇ ಕತ್ತರಿಸಿದ್ದಾಳೆ.

Home add -Advt

ತುಂಡಾದ ಕಿವಿಯನ್ನು ಬಾಟಲ್ ನಲ್ಲಿ ತುಂಬಿಕೊಂಡು ತಂದಿರುವ ಮೈಲಾರಿ ಚಿತ್ರದುರ್ಗ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಚಳ್ಳಕೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Related Articles

Back to top button