
ಪ್ರಗತಿವಾಹಿನಿ ಸುದ್ದಿ: ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಸರಾಯಿ ಸೇವನೆ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬೆಳಗಾವಿಯ ಕ್ಯಾಂಪ್ ಠಾಣೆ ಪೊಲೀಸರು, ಸರಾಯಿ ಸೇವಿಸುತ್ತಿದ್ದ ಅಫ್ಜಲ ಇಬ್ರಾಹಿಂ ಫಿರಜಾದೆ (೨೭) ಎಂಬಾತನನ್ನು ಬಂಧಿಸಿದ್ದಾರೆ.
ಸಾರ್ವಜನಿಕ ಸ್ಥಳಗಳಲ್ಲಿ ಮಧ್ಯಪಾನ ನಿಷೇಧವಿದ್ದರೂ ಕೂಡ ಆರೋಪಿ, ಬೆಳಗಾವಿಯ ಕ್ಯಾಂಪ್‌ನ ಐನಾಕ್ಷ್ ಟಾಕೀಜ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಸರಾಯಿ ಸೇವನೆ ಮಾಡುತ್ತಿದ್ದಾಗ ಎಎಸ್‌ಐ ಎಸ್ ವ್ಹಿ. ಪಾಟೀಲ ಹಾಗೂ ಸಿಬ್ಬಂದಿಗಳು ಬಂಧಿಸಿದ್ದಾರೆ. ಅಬಕಾರಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.




