ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕಳೆದ ಒಂದು ವಾರದಿಂದ ರಾಜ್ಯಾದ್ಯಂತ ಸುರಿಯುತ್ತಿರುವ ಧಾರಾಕಾರ ಮಳೆಗೆ ಹಲವು ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ.
ಈ ನಡುವೆ ರೋಗಿಯೊಬ್ಬರು ಶಸ್ತ್ರಚಿಕಿತ್ಸೆಗಾಗಿ ಪುಣಾದಿಂದ ಆಗಮಿಸುತ್ತಿದ್ದ ಮಾರ್ಗಮಧ್ಯೆಯೇ ಸಿಲುಕಿ ಸಂಕಷ್ಟಕ್ಕೀಡಾಗಿದ್ದು, ಎನ್ ಡಿ ಆರ್ ಎಫ್ ತಂಡದ ಸಹಾಯದಿಂದ ಆಂಬುಲೆನ್ಸ್ ಮೂಲಕ ಹುಬ್ಬಳ್ಳಿಗೆ ರವಾನಿಸಿರುವ ಘಟನೆ ನಡೆದಿದೆ.
ಧಾರಾಕಾರ ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ನೀರು ನಿಂತು ರಸ್ತೆ ಸಂಪೂರ್ಣ ಜಲಾವೃತಗೊಂಡಿದ್ದರಿಂದ ವಾಹನ ಸಂಚಾರಕ್ಕೆ ಅಡ್ದಿಯುಂಟಾಗಿದೆ. ಪುಣಾದಿಂದ ಹುಬ್ಬಳ್ಳಿಗೆ ತೆರಳುತ್ತಿದ್ದ ರೋಗಿಗೆ ಹುಬ್ಬಳ್ಳಿ ತಲುಪಲು ಸಾಧ್ಯವಾಗದೇ ಎನ್ ಹೆಚ್ 4ರ ಮಧ್ಯೆ ಸಿಲುಕಿಕೊಂಡಿದ್ದಾರೆ. ತಕ್ಷಣ ರಕ್ಷಣಾ ಕಾರ್ಯಾಚರಣೆ ನಡೆಸಿದ ಎನ್ ಡಿ ಆರ್ ಎಫ್, ರೋಗಿಯನ್ನು ರಕ್ಷಿಸಿ ಆಂಬುಲೆನ್ಸ್ ಮೂಲಕ ಹುಬ್ಬಳ್ಳಿ ಆಸ್ಪತ್ರೆಗೆ ಶಿಫ್ಟ್ ಮಾಡಿದೆ.
ಪ್ರವಾಹದಲ್ಲಿ ನಡುವೆ ಮಂಗೂರು ಪಥದಲ್ಲಿ ಸಿಲುಕಿದ್ದ ಹಲವರನ್ನು ಪಿಎಸ್ ಐ ದೊಡವಾಡ ನೇತೃತ್ವದಲ್ಲಿ ಎನ್ ಡಿ ಆರ್ ಎಫ್ ತಂಡ ರಕ್ಷಿಸಿ ಯಮಗರಣಿಗೆ ಸ್ಥಳಾಂತರಿಸಿದೆ.
ಕಲ್ಲೋಳ ಗ್ರಾಮದ ಕಮತೆ ತೋಟದಲ್ಲಿ ಕೃಷ್ಣಾನದಿಯ ಪ್ರವಾಹದಿಂದ ನೀರು ಬಂದು ಸಾಜನೆರವರ ಮನೆಯ ಸುತ್ತುವರೆದಿದ್ದು ಮಾಹಿತಿ ಬಂದ ಕೂಡಲೇ ಎನ್ ಡಿಆರ್ ಎಫ್ ಅವರ ಸಹಾಯದಿಂದಅವರನ್ನು ರಕ್ಷಣೆ ಮಾಡಲಾಗಿದೆ.
1) ಜೋಕ್ ಸದಾಶಿವ ಸಾಜನೆ
2) ಅಶ್ವಿನಿ ಸದಾಶಿವ ಸಾಜನೆ
3) ಚಂದ್ರ ಬೈಕ್ ಸದಾಶಿವ ಸಾಜನೆ
4) ಅನಿತಾ ಸದಾಶಿವ ಸಾಜನೆ
ಇವರೆಲ್ಲರನ್ನೂ NDRF ಸಹಾಯದಿಂದ ಪಿಎಸ್ ಐ ಅಂಕಲಿ ನೆರವಿನೊಂದಿಗೆ ಯಡೂರ ಗ್ರಾಮಕ್ಕೆ ತಂದು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ