Kannada NewsLatest

ಶನಿವಾರವೂ ಹಲವೆಡೆ ಪ್ರತಿಭಟನೆಗೆ ಸಜ್ಜಾದ ರಮೇಶ್ ಜಾರಕಿಹೊಳಿ ಅಭಿಮಾನಿಗಳು

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ನಕಲಿ ಸಿಡಿ ತಯಾರಿಸಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ತೇಜೋವಧೆ ಮಾಡಲಾಗಿದೆ ಎಂದು ದಿನೇಶ್ ಕಲ್ಲಹಳ್ಳಿ ವಿರುದ್ಧ ರಮೇಶ್ ಜಾರಕಿಹೊಳಿ ಅಭಿಮಾನಿಗಳು ಶನಿವಾರವೂ ಪ್ರತಿಭಟನೆ ನಡೆಸಲಿದ್ದಾರೆ.

ಮಧ್ಯಾಹ್ನ 12 ಗಂಟೆಗೆ ಗೋಕಾಕ್ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಬಸವೇಶ್ವರ ವೃತ್ತದವರೆಗೆ ಪಾದಯಾತ್ರೆ ನಡೆಸಿ ತಹಶೀಲ್ದಾರರ ಮುಖಾಂತರ ಸರಕಾರಕ್ಕೆ ಮನವಿ ಸಲ್ಲಿಸಿ ಬಸವೇಶ್ವರ ವೃತ್ತದಲ್ಲಿ ಸಾಂಕೇತಿಕ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ನಗರ ಘಟಕದ ಅಧ್ಯಕ್ಷ ಭಿಮಶಿ ಭರಮಣ್ಣವರ ತಿಳಿಸಿದ್ದಾರೆ.

ಗೋಕಾಕ ಮತಕ್ಷೇತ್ರದ ವ್ಯಾಪ್ತಿಯ ಅಂಕಲಗಿ ಗ್ರಾಮದಲ್ಲಿ 10 ಗಂಟೆಗೆ ಸಾವಿರಾರು ಕಾರ್ಯಕರ್ತರು ಅಂಕಲಗಿ ಬಸ್ಸು ನಿಲ್ದಾಣದಲ್ಲಿ ಸಾಹುಕಾರ್ ಅಭಿಮಾನಿಗಳು ಪ್ರತಿಭಟನೆ ನಡೆಸಲಿದ್ದಾರೆ. ಮಮದಾಪುರ ಗ್ರಾಮದಲ್ಲಿ 10 ಗಂಟೆಗೆ ಸಾವಿರಾರು ಕಾರ್ಯಕರ್ತರು ಮಮದಾಪುರ ಕ್ರಾಸ್ ಯರಗಟ್ಟಿ-ಸಂಕೇಶ್ವರ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಿದ್ದಾರೆ ಎಂದು ಭೀಮಗೌಡ ಪೊಲೀಸ್ ಗೌಡರ ತಿಳಿಸಿದ್ದಾರೆ.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button