ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ ಜೆಡಿ ಎಸ್ ಪಂಚರತ್ನ ರಥಯಾತ್ರೆ ಆರಂಭವಾಗಿದ್ದು, ರಾಯಬಾಗ ಹಾಗೂ ಕುಡಚಿ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಬೃಹತ್ ಶಕ್ತಿ ಪ್ರದರ್ಶನ ನಡೆಸಿದೆ.
ಕುಡಚಿ ವಿಧಾನಸಭಾ ಕ್ಷೇತ್ರದ ಕುರಬಗೋಡಿ ಸಮಾವೇಶದಲ್ಲಿ ಮಾತದಾಡಿದ ಹೆಚ್.ಡಿ.ಕುಮಾರಸ್ವಾಮಿ, ಕಳೆದ ನವೆಂಬರ್ 18 ರಂದು ಆರಂಭವಾದ ಜೆಡಿಎಸ್ ಪಂಚರತ್ನ ಯಾತ್ರೆ ಇಂದು ಬೆಳಗಾವಿ ಜಿಲ್ಲೆಗೆ ಬಂದು ತಲುಪಿದೆ ಎಂದರು.
ಪ್ರತಿನಿತ್ಯ ನನ್ನ ಬಳಿ ನೂರಾರು ಜನ ಬರ್ತಾರೆ. ಬೇರೆ ಬೇರೆ ಕಾಯಿಲೆಗಳಿಂದ ಬಳಲುತ್ತಿರುತ್ತಾರೆ, ಅವರಿಗೆ ಹಣಕಾಸಿನ ನೆರವು ಅಗತ್ಯ. ಬೇರೆ ಯಾರ ಮನೆಯೂ ಜನ ಹೋಗೊದಿಲ್ಲ. ನನ್ನ ಮನೆಗೆ ಬರ್ತಾರೆ. ಬಡ ಜನರಿಗೆ ಬಹಳ ಸುಲಭವಾಗಿ ಸಿಗುವ ವ್ಯಕ್ತಿ ನಾನು. ಒಂದು ಭಾರೀ ಜೆಡಿಎಸ್ ಗೆ ಬಹುಮತ ನೀಡಿ. ಈ ರಾಜ್ಯದ ಜನರ ಋಣ ತೀರಿಸುವ ಕೆಲಸ ಮಾಡುವೆ. ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ನನ್ನ ಬೆನ್ನೆಲುಬಾಗಿ ನಿಂತಿದ್ದಾರೆ ಎಂದು ಹೇಳಿದರು.
ಜೆಡಿಎಸ್ ಗೆ ಒಂದು ಭಾರೀ ಅವಕಾಶ ಕೊಟ್ಟು ಅಧಿಕಾರಕ್ಕೆ ತಂದರೆ 1 ರಿಂದ 12 ನೇ ತರಗತಿವರೆಗೆ ಉಚಿತ ಶಿಕ್ಷಣ, ಯಾವುದೇ ಪ್ರೈವೇಟ್ ಶಾಲೆಗಳಿಗೆ ಕಡಿಮೆಯಿಲ್ಲದಂತೆ ಶಾಲೆಗಳನ್ನ ತೆರೆಯುತ್ತೇವೆ ಎಂದು ಘೋಷಿಸಿದರು.
ಆರೋಗ್ಯ ಸಮಸ್ಯೆ ಎದುರಾದಾಗ ಸರ್ಕಾರವೇ ನೇರವಾಗಿ ಆಸ್ಪತ್ರೆ ಬಿಲ್ ಕಟ್ಟುವ ಕೆಲಸವನ್ನ ಸರ್ಕಾರ ಮಾಡಲಿದೆ. ಪ್ರತಿ ಗ್ರಾಮ ಪಂಚಾಯತಿಗೆ ಹೈಟೆಕ್ ಆಸ್ಪತ್ರೆ ನಿರ್ಮಾಣ. ಮೂವರು ತಜ್ಞ ವೈದ್ಯರು ಸೇರಿದಂತೆ 30 ಜನ ವೈದ್ಯಕೀಯ ಸಿಬ್ಬಂದಿ ನೇಮಿಸಿ, ಗ್ರಾಮೀಣ ಜನತೆಯ ಆರೋಗ್ಯಕ್ಕೆ ಒತ್ತು ನೀಡಲಾಗುವುದು ಎಂದು ತಿಳಿಸಿದರು.
ಇದಕ್ಕೂ ಮುನ್ನ ಬೆಳಗಾವಿ ಜಿಲ್ಲೆ ಖಾನಾಪೂರ ಕ್ಷೇತ್ರದ ಹಲಸಿ ಗ್ರಾಮದಲ್ಲಿ ಇಂದು ಬೆಳಗ್ಗೆ ಕದಂಬರ ಕಾಲದ ಐತಿಹಾಸಿಕ ಶ್ರೀ ನಾರಾಯಣ ಮತ್ತು ಶ್ರೀ ನರಸಿಂಹ ದೇವರ ಆಲಯಕ್ಕೆ ತೆರಳಿ ಹೆಚ್.ಡಿ.ಕುಮಾರಸ್ವಾಮಿ ಅವರು ಪೂಜೆ ಸಲ್ಲಿಸಿದರು. ನಿನ್ನೆ ರಾತ್ರಿ ಅವರು ಇದೇ ಗ್ರಾಮದಲ್ಲಿ ಪಂಚರತ್ನ ರಥಯಾತ್ರೆಯ ಗ್ರಾಮ ವಾಸ್ತವ್ಯ ಹೂಡಿದ್ದರು.
*ರೈತರ ಬದುಕನ್ನು ಬದಲಿಸುವ ಶಕ್ತಿ ಕಾಂಗ್ರೆಸ್ ಪಕ್ಷಕ್ಕೆ ಇದೆ: ಡಿ.ಕೆ. ಶಿವಕುಮಾರ್*
https://pragati.taskdun.com/d-k-shivakumarmadduruprajadhwani/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ