Latest

ಪ್ರವಚನ ಮಾಡುವಾಗಲೇ ತೀವ್ರ ಹೃದಯಾಘಾತ; ವೇದಿಕೆ ಮೇಲೇಯೇ ಲಿಂಗೈಕ್ಯರಾದ ಸಂಗನಬಸವ ಮಹಾಸ್ವಾಮೀಜಿ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಜನ್ಮದಿನದ ಪ್ರಯುಕ್ತ ಭಕ್ತರಿಗೆ ಪ್ರವಚನ ಮಾಡುತ್ತಿದ್ದಾಗ ವೇದಿಕೆ ಮೇಲೆ ಏಕಾಏಕಿ ಹೃದಯಾಘಾತಕ್ಕೊಳಗಾದ ಸ್ವಾಮೀಜಿ ಓರ್ವರು ವಿಧಿವಶರಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಬಳೋಬಾಳಗ ಗ್ರಾಮದಲ್ಲಿ ನಡೆದಿದೆ.

ಬಸವಯೋಗ ಮಂಟಪ ಟ್ರಸ್ಟ್ ಬಳೋಬಾಳ್ ಮಠದ ಸಂಗನಬಸವ ಮಹಾಸ್ವಾಮೀಜಿ ವೇದಿಕೆಯ ಮೇಲೆ ಕುಸಿದು ಬಿದ್ದಿದ್ದು, ಲಿಂಗೈಕ್ಯರಾಗಿದ್ದಾರೆ ಅವರಿಗೆ 53 ವರ್ಷ ವಯಸ್ಸಾಗಿತ್ತು.

ನವೆಂಬರ್ 6ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಅಂದು ಸ್ವಾಮೀಜಿಯವರ ಹುಟ್ಟುಹಬ್ಬವಾಗಿದ್ದು, ಜನ್ಮದಿನದ ಆಚರಣೆ ಬಳಿಕ ಭಕ್ತರಿಗೆ ಆಶಿರ್ವಚನ ನೀಡುತ್ತಿದ್ದರು. ಈ ವೇಳೆ ಹೃದಯಾಘಾತದಿಂದ ಏಕಾಏಕಿ ಮೃತಪಟ್ಟಿದ್ದಾರೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಅಂತ್ಯಕ್ರಿಯೆ ಮುಗಿಸಿ ಬರುವಾಗ ಭಿಕರ ಅಪಘಾತ; 6 ಜನರ ದುರ್ಮರಣ

Home add -Advt

Related Articles

Back to top button