ಪ್ರಗತಿವಾಹಿನಿ ಸುದ್ದಿ; ಚಿಕ್ಕೋಡಿ: ನಿಪ್ಪಾಣಿ ಮತಕ್ಷೇತ್ರದ ಮಮದಾಪುರ ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ಅಂಬಿಕಾ ದೇವಸ್ಥಾನಕ್ಕೆ ಮುಜರಾಯಿ ಹಜ್ ಮತ್ತು ವಕ್ಫ್ ಇಲಾಖೆ ಸಚಿವರಾದ ಶಶಿಕಲಾ ಜೊಲ್ಲೆ ಭೇಟಿ ನೀಡಿ, ಶ್ರೀ ಮಾತೆಗೆ ವಿಶೇಷ ಪೂಜೆ ಸಲ್ಲಿಸಿ, ಆಶೀರ್ವಾದ ಪಡೆದು, ನಾಡಿನೆಲ್ಲಡೆ ಸುಖ, ಶಾಂತಿ ಸಮೃದ್ಧಿಯನ್ನು ದಯಪಾಲಿಸಲಿ ಎಂದು ಪ್ರಾರ್ಥಿಸಿದರು.
ಶನಿವಾರ ಮಮದಾಪುರ ಗ್ರಾಮದಲ್ಲಿ ಹುಟ್ಟು ಹಬ್ಬ ನಿಮಿತ್ಯ ಭಾಗವಹಿಸಿದ ಕಾರ್ಯಕ್ರಮ ನಿಜಕ್ಕೂ ನನ್ನ ಜೀವನದಲ್ಲಿ ಅವಿಸ್ಮರಣೀಯ. ಕಳೆದ 20 ದಿನಗಳ ಹಿಂದೆ ರಸ್ತೆ ಬದಿಯಲ್ಲಿ ಬಿಟ್ಟುಹೋಗಿದ್ದ ಮಗುವಿಗೆ ಮುಜರಾಯಿ ಹಜ್ ಮತ್ತು ವಕ್ಫ್ ಇಲಾಖೆ ಸಚಿವರಾದ ಶಶಿಕಲಾ ಜೊಲ್ಲೆಯವರು ನಾಮಕರಣ ಮಾಡಿದರು.
ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ ನನ್ನ ಹುಟ್ಟುಹಬ್ಬದ ದಿನವನ್ನು ಅರ್ಥಪೂರ್ಣವಾಗಿ ಕಳೆದ ಸಂತೃಪ್ತಿ ನನಗಿದೆ. ತಾಯಿಯ ಬೆಚ್ಚಗಿನ ಮಡಿಲಲ್ಲಿರುವಬೇಕಿದ್ದ ಈ ಪುಟ್ಟ ಕಂದಮ್ಮ ರಸ್ತೆ ಬದಿ ಅನಾಥವಾಗಿ ಮಲಗಿತ್ತು. ಆಗಿನ್ನು ಆ ಕಂದಮ್ಮ ಹೊಸ ಪ್ರಪಂಚಕ್ಕೆ ಕಾಲಿಟ್ಟು 10 ದಿನಗಳಾಗಿತ್ತಷ್ಟೇ. ಈ ಸಂದರ್ಭದಲ್ಲಿ ಅನಾಥ ಮಗುವಿನ ಬಾಳಿಗೆ ಬೆಳಕಾದವರು ಶ್ರೀ ಅಮರ ಪವಾರ ಮತ್ತು ಶ್ರೀಮತಿ ಶುಭಾಂಗಿ ಪವಾರ ದಂಪತಿ. ಇವರು ಹಸುಗೂಸನ್ನು ರಕ್ಷಿಸಿ, ಆ ಕಂದಮ್ಮಳ ಬಾಳಿಗೆ ತಂದೆ-ತಾಯಿಯಾಗಿ, ಆಸರೆ ನೀಡುತ್ತಿದ್ದಾರೆ. ಇಂದು ಪ್ರೀತಿ ಹಾಗೂ ಅಭಿಮಾನದಿಂದ ನನ್ನನ್ನು ಆಹ್ವಾನಿಸಿ, ಈ ಕೂಸಿಗೆ “ವೈಷ್ಣವಿ” ಎಂದು ನಾಮಕರಣ ಮಾಡಿದರು. ಪವಾರ ದಂಪತಿ ಇಂತಹ ಹಲವು ಅನಾಥ ಮಕ್ಕಳನ್ನು ಸಾಕಿ ಸಲಹುತ್ತಿದ್ದಾರೆ. ಇದರೊಂದಿಗೆ ವೃದ್ಧರಿಗೂ ಆಶ್ರಯ ನೀಡುತ್ತಿದ್ದು, ಅವರ ಈ ಮಾನವೀಯ ಕಾರ್ಯ ನಿಜಕ್ಕೂ ಶ್ಲಾಘನೀಯ.
ಅತಿವೃಷ್ಟಿ: ಸೂಕ್ತ ಪರಿಹಾರಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ