ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಚಲಿಸುತ್ತಿದ್ದ ರೈಲಿನಡಿ ಆಕಸ್ಮಿಕವಾಗಿ ಸಿಲುಕಿ ಎರಡು ಕಾಲುಗಳನ್ನು ಕಳೆದುಕೊಂಡಿದ್ದ ವ್ಯಕ್ತಿಯ ಚಿಕಿತ್ಸೆಗೆ ನೆರವಾಗುವ ಮೂಲಕ ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಅವರು ಮಾನವೀಯತೆ ಮೆರೆದಿದ್ದಾರೆ.
ಯಮಕನಮರಡಿ ಮತಕ್ಷೇತ್ರದ ಪಾಶ್ಚಾಪುರ ಗ್ರಾಮದಲ್ಲಿನ ಅಕಾನಿಬಾಷಾ ದರ್ಗಾದ ಜೀರ್ಣೋದ್ಧಾರ ಕೆಲಸಕ್ಕಾಗಿ ಕೆಲ ದಿನಗಳ ಹಿಂದೆ ಮಹಾರಾಷ್ಟ್ರದ ಅಮರಾವತಿಯಿಂದ ಬಂದಿದ್ದ ಕಾರ್ಮಿಕ ವಿಜಯ ಆಸೂರಕರ್, ಕೆಲಸ ಮುಗಿಸಿ ವಾಪಸ್ ತನ್ನೂರಿಗೆ ರೈಲಿನಲ್ಲಿ ತೆರಳುತ್ತಿದ್ದಾಗ ದುರ್ಘಟನೆ ನಡೆದಿತ್ತು.
ಚಲಿಸುತ್ತಿದ್ದ ರೈಲಿನಿಂದ ಆಕಸ್ಮಿಕವಾಗಿ ಬಿದ್ದ ಕಾರ್ಮಿಕ ಗಂಭೀರವಾಗಿ ಗಾಯಗೊಂಡು, ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದ. ಈ ವಿಷಯ ತಿಳಿದ ಶಾಸಕ ಸತೀಶ ಜಾರಕಿಹೊಳಿ ಅವರು, ತಮ್ಮ ಕಾರ್ಯಕರ್ತರ ಸಹಾಯದಿಂದ ಆತನನ್ನು ಆ್ಯಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಸೇರಿಸಿದ್ದರು.
ಒಂದು ಲಕ್ಷ ರೂ. ಧನಸಹಾಯ ಮಾಡಿದ ಸಾಹುಕಾರ್:
ಗಂಭೀರವಾಗಿ ಗಾಯಗೊಂಡಿದ್ದ ಕಾರ್ಮಿಕನ ಚಿಕಿತ್ಸೆಯ ಸಂಪೂರ್ಣ ಖರ್ಚನ್ನು ಸತೀಶ ಜಾರಕಿಹೊಳಿ ಅವರೇ ನೋಡಿಕೊಂಡಿದ್ದರು. ಕಾರ್ಮಿಕನಿಗೆ ಸದ್ಯ ಸಂಪೂರ್ಣ ಗುಣವಾಗಿದೆ. ಆದರೆ, ಆತ ತನ್ನ ಎರಡು ಕಾಲುಗಳನ್ನು ಕಳೆದುಕೊಂಡಿದ್ದಾನೆ. ಹೆಚ್ಚಿನ ಚಿಕಿತ್ಸೆ ಹಾಗೂ ಮುಂದಿನ ಜೀವನಕ್ಕಾಗಿ ಅನುಕೂಲವಾಗುವ ನಿಟ್ಟಿನಲ್ಲಿ ಸತೀಶ ಜಾರಕಿಹೊಳಿ ಅವರು ಕಾರ್ಮಿಕನಿಗೆ 1,00,000 ರೂ. ಧನಸಹಾಯ ನೀಡಿ, ಮಾನವೀಯತೆ ಮೆರೆದಿದ್ದಾರೆ.
ಶಾಸಕ ಸತೀಶ ಅವರ ಮಾರ್ಗದರ್ಶನದಲ್ಲಿ ಪಾಶ್ಚಾಪೂರ ಗ್ರಾಮದ ಸಮಾಜ ಸೇವಕರಾದ ಖಲೀಲ ಪೀರಜಾದೆ, ಸಯೀದ ಮಕಾನದಾರ, ಅಶ್ಪಾಕ್ ದರ್ಗಾ, ಫಜಲ್ ಮಕಾನದಾರ, ಬಾಬಾಸಾಬ ದಗಾ೯, ರಪೀಕ ಪೀರಜಾದೆ, ಜಾಕೀರ ದರ್ಗಾಅವರು ಗಾಯಗೊಂಡಿದ್ದ ಕಾರ್ಮಿಕ ಚೇತರಿಸಿಕೊಳ್ಳಲು ನೆರವಾಗಿದ್ದರು.
ಸತೀಶ ಅವರ ಮಾನವೀಯ ಕಾರ್ಯಕ್ಕೆ ಮೆಚ್ಚುಗೆ:
ಗಾಯಗೊಂಡ ವ್ಯಕ್ತಿ ಬೇರೆ ಮತಕ್ಷೇತ್ರ, ಬೇರೆ ರಾಜ್ಯದವನು ಎಂದು ನೋಡದೇ, ಮಾನವೀಯತೆ ದೃಷ್ಟಿಯಿಂದ ಸಹಾಯ ಮಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಶಾಸಕ ಸತೀಶ ಜಾರಕಿಹೊಳಿ ಅವರಿಗೆ ಪಾಶ್ಚಾಪುರ ಗ್ರಾಮಸ್ಥರು ಅಭಿನಂದ ನೆ ಸಲ್ಲಿಸಿದ್ದಾರೆ.
ನೊಂದವರ ಕಣ್ಣೀರು ಒರೆಸುವ ಜನನಾಯಕ ಸತೀಶ ಅವರ ಕಾರ್ಯಕ್ಕೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ದೇಶದ ಜನರಿಗೆ ಉಚಿತ ಲಸಿಕೆ ಘೋಷಣೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ