Kannada NewsLatest

ವಿದ್ಯಾರ್ಥಿಗಳು ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಲಿ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ

ಪ್ರಗತಿವಾಹಿನಿ ಸುದ್ದಿ; ಯಮಕನಮರಡಿ: ವಿದ್ಯಾರ್ಥಿಗಳು ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಿ ಸಾಧನೆ ಮಾಡಲು ವಿದ್ಯಾರ್ಥಿಗಳು ಮುಂದಾಗಬೇಕು ಎಂದು ಶಾಸಕ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ಹೇಳಿದರು.

ಮಾವನೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭ ಹಾಗೂ ಶಾಲಾ ವಾರ್ಷಿಕ ಸ್ವೇಹ ಸಮ್ಮೇಳನ ಮತ್ತು ಪರೀಕ್ಷೆ ಒಂದು ಹಬ್ಬ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜೀವನದಲ್ಲಿ ಎಲ್ಲ ವಸ್ತುಗಳನ್ನು ಕದಿಯಬಹುದು, ಆದರೆ ತೆಲೆಯಲ್ಲಿರುವ ಜ್ಙಾನವನ್ನು ಕದಿಯಲು ಯಾರಿಂದಲೂ ಸಾಧ್ಯವಿಲ್ಲ. ಇತಿಹಾಸದಲ್ಲಿರುವ ನಾಯಕರು ಶಿಕ್ಷಣಕ್ಕೆ ಸಾಕಷ್ಟು ಒತ್ತನ್ನು ಕೊಟ್ಟಿದ್ದಾರೆ. ಸರ್ಕಾರ ಕೂಡಾ ಶಿಕ್ಷಣಕ್ಕೆ ಸಾಕಷ್ಟುಸವಲತ್ತು ಕೊಡೊ ವ್ಯವಸ್ಥೆ ಮಾಡಿದೆ. ಆದ್ದರಿಂದ ವಿದ್ಯಾರ್ಥಿಗಳು ಮುಂಬರುವ ಸವಾಲಗಳನ್ನು ಮೇಟ್ಟಿ ನಿಂತು, ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ ಸಾಧನೆ ಮಾಡಲು ಮುಂದಾಗಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.

ಇದೇ ವೇಳೆ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ವೃಂದದಿಂದ ಶಾಸಕ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರನ್ನು ಸನ್ಮಾನಿಸಲಾಯಿತು. ಇದೇ ವೇಳೆ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರವನ್ನು ವಿತರಿಸಲಾಯಿತು.

Home add -Advt

ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕ ಎಸ್.ಬಿ. ಖಜೂರಿ, ದೈಹಿಕ ಶಿಕ್ಷಕ ಎಸ್.‌ ಎಫ್.‌ ಕಡಾಡಿ, ಎಸ್.‌ ಬಿ. ಲೋಕಾಪೂರೆ, ವಿ.ಎಸ್.‌ ಲೋಖಂಡೆ, ಮೌನೇಶ ಬಡಿಗೇರ, ಕಲ್ಲಪ್ಪ ಕಳಸಪ್ಪಗೋಳ, ಎ.ಕೆ. ವಿಬೂತಿ, ರಗತ್ನವ್ವಾ ಜಿರಲಿ, ಎಂ.ಎಸ್.‌ ನಾವಲಗಟ್ಟಿ, ಜಿ.ಎಂ. ಗುಡಗನಟ್ಟಿ, ಎ.ಬಿ. ಅಂಬಲಿ ಸೇರಿದಂತೆ ಇತರರು ಇದ್ದರು.

ಹಿಜಾಬ್‌ಗೂ ಹಿಂದೂ ಸ್ವಾಮೀಜಿಗಳಿಗೂ ಏನು ಸಂಬಂಧ?; ಓಲೈಕೆಗೂ ಒಂದು ಮಿತಿಯಿದೆ ಎಂದು ಗುಡುಗಿದ ಬಿಜೆಪಿ

Related Articles

Back to top button