ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಐಸಿಯುಗೆ ದಾಖಲಾಗಿದ್ದ ವೃದ್ಧೆಯನ್ನು ಆಸ್ತಿ ಪತ್ರ ಸಹಿ ಮಾಡಿಸಿಕೊಳ್ಳಲು ಕುಟುಂಬದವರು ಸಬ್ ರಿಜಿಸ್ಟ್ರಾರ್ ಕಚೇರಿಗೆ ಕರೆತಂದಿರುವ ಅಮಾನವೀಯ ಘಟನೆ ಬೆಳಗಾವಿಯಲ್ಲಿ ಬೆಳಕಿಗೆ ಬಂದಿದೆ.
ಮಾನವೀಯತೆ, ಮನುಷತ್ವವನ್ನೂ ಮರೆತ ಸಬ್ ರಿಜಿಸ್ಟ್ರಾರ್ ಕಚೇರಿ ಸಿಬ್ಬಂದಿ ಹಾಗೂ ವೃದ್ಧೆಯ ಕುಟುಂಬ ಸದಸ್ಯರ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಸ್ಪತ್ರೆಗೆ ದಾಖಲಾಗಿದ್ದ 80 ವರ್ಷದ ವೃದ್ಧೆ ಮಹಾದೇವಿ ಐಸಿಯುನಿಂದ ಸ್ಟ್ರೆಚರ್ ನಲ್ಲಿಯೇ ಸಬ್ ರಿಜಿಸ್ಟ್ರಾರ್ ಕಚೇರಿಗೆ ಬಂದಿದ್ದಾರೆ. ಆಸ್ತಿ ಹಂಚಿಕೆ, ಆಸ್ತಿ ಹಕ್ಕು ಪತ್ರಕ್ಕೆ ಸಹಿ ಹಾಕುವ ವಿಚಾರಕ್ಕೆ ನೋಂದಣಿ ಮಾಡಲು ವೃದ್ಧೆಯನ್ನು ಕರೆ ತರಲಾಗಿದೆ.
ಐಸಿಯುನಲ್ಲಿದ್ದ ವೃದ್ಧೆ ಬಳಿ ಸಹಿ ಹಾಕಿಸಿಕೊಂಡು ನೋಂದಣಿ ಮಾಡಲು ಆಸ್ಪತ್ರೆಗೆ ಬರುವಂತೆ ಕುಟುಂಬದವರು ಉಪನೋಂದಣಾಧಿಕಾರಿ ಪದ್ಮನಾಭ್ ಗುಡಿ ಅವರಿಗೆ ಮನವಿ ಮಾಡಿದ್ದಾರೆ. ಆದರೆ ಉಪನೋಂದಣಾಧಿಕಾರಿ ಇದಕ್ಕೆ ಒಪ್ಪಿಲ್ಲ, ಆಸ್ಪತ್ರೆಗೆ ಬಂದು ವೃದ್ಧೆ ಸಹಿ ಪಡೆಯಲು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಹಣ ನೀಡಲು ನಿರಾಕರಿಸಿದ ಕುಟುಂಬದವರು ಇದೀಗ ವೃದ್ಧಿಯನ್ನು ಐಸಿಯುನಿಂದ ಸ್ಟ್ರೆಚರ್ ನಲ್ಲಿಯೇ ಸಬ್ ರಿಜಿಸ್ಟ್ರಾರ್ ಕಚೇರಿಗೆ ಕರೆತಂದಿದ್ದಾರೆ.
ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯಸಭಾ ವಿಪಕ್ಷ ನಾಯಕ ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ ರಾಜೀನಾಮೆ
https://pragati.taskdun.com/politics/mallikarjuna-khargeresignleader-of-opposition-rajya-sabha/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ