ಪ್ರಗತಿವಾಹಿನಿ ಸುದ್ದಿ; ಜೈಪುರ: ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವ ಕಾಮುಕರು ವಿಡಿಯೋ ಮಾಡಿಟ್ಟು ಬ್ಲ್ಯಾಕ್ ಮೇಲ್ ನಡೆಸುತ್ತಿರುವ ಘಟನೆ ರಜಸ್ಥಾನದ ಭೀವಂಡಿ ಪ್ರದೇಶದಲ್ಲಿ ನಡೆದಿದೆ.
17 ವರ್ಷದ ಬಾಲಕಿ ಮೇಲೆ 8 ಜನರ ಗುಂಪು ಗ್ಯಾಂಗ್ ರೇಪ್ ನಡೆಸಿ ಪೈಶಾಚಿಕ ಕೃತ್ಯವೆಸಗಿದೆ. ಅಲ್ಲದೇ ಕೃತ್ಯದ ವಿಡಿಯೋ ರೆಕಾರ್ಡ್ ಮಾಡಿಕೊಂಡು ದುರುಳರು ಇದೀಗ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ.
2021ರ ಡಿಸೆಂಬರ್ ನಲ್ಲಿ 8 ಜನ ಕಾಮುಕರು ಬಾಲಕಿ ಮೇಲೆ ಅತ್ಯಾಚಾರ ನಡೆಸಿದ್ದು, ವಿಡಿಯೋ ಬಿಡುಗಡೆ ಮಾಡಬಾರದು ಎಂದರೆ 50 ಸಾವಿರ ರೂಪಾಯಿ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದರು. ಬ್ಲ್ಯಾಕ್ ಮೇಲ್ ಗೆ ಹೆದರಿದ ಬಾಲಕಿ ಹಾಗೂ ಕುಟುಂಬ ಹಣ ನೀಡಿದೆ.
ಅಷ್ಟಕ್ಕೇ ಸುಮ್ಮನಾಗದ ಕಾಮುಕರು ಮತ್ತೆ ವಿಡಿಯೋ ಬಿಡುಗಡೆ ಮಾಡುವುದಾಗಿ ಹೆದರಿಸಿ 2.5 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾರೆ. ಅತ್ಯಾಚಾರಿಗಳ ಬ್ಲ್ಯಾಕ್ ಮೇಲ್ ಗೆ ಬೇಸತ್ತ ಯುವತಿ ಹಾಗೂ ಕುಟುಂಬ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಶಿಕ್ಷಕನಿಂದಲೇ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ
https://pragati.taskdun.com/latest/davanagereteachersexual-harassment/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ