ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಡಿಸೆಂಬರ್ 13ರಿಂದ 24ರ ವರೆಗೆ ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ವಿಧಾನ ಮಂಡಲ ಅಧಿವೇಶನ ಕಾಲಕ್ಕೆ ಪ್ರತಿಭಟನೆ ಕೈಗೊಳ್ಳಲು ಹಾಗೂ ಮನವಿಯನ್ನು ಸಲ್ಲಿಸುವವರು ಮುಂಚಿತವಾಗಿಯೇ ಬೆಳಗಾವಿ ಪೊಲೀಸ್ ಕಮೀಷನರ ಕಛೇರಿಯಲ್ಲಿ, ಈ ಕೆಳಗೆ ನಮೂದಿಸಿದ ವಿಳಾಸಕ್ಕೆ ಸಂಪರ್ಕಿಸಿ ತಮ್ಮ ಅರ್ಜಿಯನ್ನು ನೀಡಿ ಪೂರ್ವಾನುಮತಿಯನ್ನು ಪಡೆದುಕೊಳ್ಳುವಂತೆ ಸಾರ್ವಜನಿಕರಲ್ಲಿ ತಿಳಿಸಲಾಗಿದೆ.
ಮೊದಲು ಬಂದವರಿಗೆ ಪ್ರಾಶಸ್ತ್ಯ ನೀಡಲಾಗುವುದು. (ಅರ್ಜಿ ಸಲ್ಲಿಸುವವರು ಸಂಘಟನೆಯ ಅಧ್ಯಕ್ಷರು/ಮುಖ್ಯಸ್ಥರ ಪೂರ್ಣ ಹೆಸರು, ವಿಳಾಸ, ಮೋಬೈಲ್ ಸಂಖ್ಯೆ ಮತ್ತು ಇ-ಮೇಲ್ ವಿಳಾಸವನ್ನು ಕಡ್ಡಾಯವಾಗಿ ನಮೂದಿಸುವುದು.) ಪ್ರತಿಭಟನೆ ನಡೆಸಲು ಹಾಗೂ ಮನವಿ ಸಲ್ಲಿಸುವವರಿಗೆ ಸುವರ್ಣ ಸೌಧದ ಪಕ್ಕದಲ್ಲಿರುವ ಸುವರ್ಣ ಗಾರ್ಡನ್ ಪ್ರತಿಭಟನಾ ಸ್ಥಳ ಹಾಗೂ ನಿಗಧಿಪಡಿಸಿದ ಟೆಂಟ್ಗಳಲ್ಲಿ ಸ್ಥಳವಕಾಶ ನೀಡಿ, ದಿನಾಂಕವನ್ನು ಪೊಲೀಸ್ ಆಯುಕ್ತರು, ಬೆಳಗಾವಿ ನಗರ ಕಛೇರಿಯಿಂದ ನಿಗಧಿಪಡಿಸಲಾಗುವುದು.
ಈ ಕಛೇರಿಯ ಅನುಮತಿ ಪತ್ರ ಇಲ್ಲದೇ ಯಾವುದೇ ರೀತಿಯ ಪ್ರತಿಭಟನೆ ಮತ್ತು ಮನವಿ ಸಲ್ಲಿಸಲು ಅವಕಾಶ ಇರುವುದಿಲ್ಲ. ಇದನ್ನು ಹೊರತುಪಡಿಸಿ ಧರಣಿ /ಉಪವಾಸ ಸತ್ಯಾಗೃಹ/ ರ್ಯಾಲಿ/ ಇತ್ಯಾದಿಗಳಿಗೆ ಅವಕಾಶ ಇರುವುದಿಲ್ಲವೆಂದು ಈ ಮೂಲಕ ತಿಳಿಸಲಾಗಿದೆ.
ಸಂಪರ್ಕಿಸ ಬೇಕಾದ ವಿಳಾಸ ಮತ್ತು ಫೋನ್ ನಂಬರ್: ಸಹಾಯಕ ಪೊಲೀಸ್ ಆಯುಕ್ತರು, ಅಪರಾಧ, ಬೆಳಗಾವಿ ನಗರ
ದೂ. ಸಂ. 0831-2471577 & ಮೋಬೈಲ್ ಸಂಖ್ಯೆ-9480804109
ಪೊಲೀಸ್ ಇನ್ಸಪೆಕ್ಟರ್, ಸಿಸಿಆರ್ಬಿ ವಿಭಾಗ, ಬೆಳಗಾವಿ ನಗರಮೋಬೈಲ್ ಸಂಖ್ಯೆ-9448185837
ಪೊಲೀಸ್ ಕಂಟ್ರೋಲ್ ರೂಂ. ಬೆಳಗಾವಿ ನಗರ ದೂ. ಸಂ. 0831-2405233, 2452131
ಪೊಲೀಸ್ ಆಯುಕ್ತರು, ಬೆಳಗಾವಿ ನಗರ ಈ ವಿಳಾಸ ಸಂಪರ್ಕಿಸಲು ಕೋರಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ