
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕರ್ನಾಟಕ, ಕನ್ನಡಿಗರ ವಿರುದ್ಧವೇ ನಾಡದ್ರೋಹಿ ಚಟುವಟಿಕೆ ನಡೆಸುವ ಶಿವಸೇನೆಗೆ ಕರ್ನಾಟಕದ ನೆಲದಲ್ಲಿಯೇ ಕಾರ್ಯಾಲಯ ನಡೆಸಲು ಅವಕಾಶ ನೀಡಬಾರದು. ಶಿವಸೇನೆ ಕಾರ್ಯಾಲಯ ಮುಚ್ಚಿಸಬೇಕು ಎಂದು ಆಗ್ರಹಿಸಿ ಕನ್ನಡ ಕ್ರಿಯಾಸಮಿತಿ ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಿದೆ.
ಕನ್ನಡಿಗರ ವಿರುದ್ಧವೇ ನಾಡದ್ರೋಹಿ ಚಟುವಟಿಕೆ ನಡೆಸುವ ಶಿವಸೇನೆಗೆ ನಮ್ಮ ನೆಲದಲ್ಲಿ ಕಾರ್ಯಾಲಯ ತೆರೆಯಲು ಅವಕಾಶ ನೀಡಿದ್ದು ಎಷ್ಟು ಸರಿ? ನಮ್ಮ ವಿರುದ್ಧವೇ ಪಿತೂರಿ ನಡೆಸುವ ಇಂಥ ಸಂಘಟನೆಯ ವಾಹನಗಳು ನಮ್ಮ ಮುಂದೆಯೇ ನಾಮಫಲಕ ಹಾಕಿಕೊಂಡು ಸಂಚರಿಸಲು ಅವಕಾಶ ಮಾಡಿಕೊಡುವದು ಎಷ್ಟು ಸಮಂಜಸ? ಎಂದು ಕನ್ನಡ ಕ್ರಿಯಾ ಸಮಿತಿ ಸದಸ್ಯರು ಪ್ರಶ್ನಿಸಿದ್ದಾರೆ.
ಕೂಡಲೇ ಶಿವಸೇನೆಯ ಬೆಳಗಾವಿ ಕಾರ್ಯಾಲಯವನ್ನು ಮುಚ್ಚಿಸಬೇಕು ಮತ್ತು ಈ ಸಂಘಟನೆಯ ವಾಹನಗಳನ್ನು ಜಪ್ತಿ ಮಾಡಬೇಕೆಂದು ಆಗ್ರಹಿಸಿ ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಇಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿತು.
ಈ ಮನವಿಯ ಪ್ರತಿಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಗೃಹಸಚಿವ ಬಸವರಾಜ ಬೊಮ್ಮಾಯಿ ಅವರಿಗೂ ಕಳಿಸಲಾಗಿದೆ.
ಲೋಕಸಭೆಯಲ್ಲಿ ಬೆಳಗಾವಿ ಗಡಿ ವಿವಾದ ಪ್ರಸ್ತಾಪಿಸಿದ ಸಂಸದ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ