Latest

ಇನ್ನು 4 ದಿನಗಳಲ್ಲಿ ಎಲ್ಲವೂ ನಿರ್ಧಾರ; ಶಾಸಕ ಶ್ರೀಮಂತ ಪಾಟೀಲ್

ಪ್ರಗತಿವಾಹಿನಿ ಸುದ್ದಿ; ಮಂಗಳೂರು: ಮರಾಠಿ ಸಮುದಾಯಕ್ಕೆ ಸಚಿವ ಸ್ಥಾನ ಸಿಗದ ವಿಚಾರವಾಗಿ ಬೇಸರ ವ್ಯಕ್ತಪಡಿಸಿರುವ ಶಾಸಕ ಶ್ರೀಮಂತ ಪಾಟೀಲ್, ಇನ್ನೂ ಸಾಕಷ್ಟು ಸಮಯಗಳಿವೆ, ಸಚಿವ ಸ್ಥಾನ ಕೊಡಬಹುದು ಮರಾಠಾ ಸಮುದಾಯದವರು ಬೇಸರ ಮಾಡಿಕೊಳ್ಳಬೇಡಿ ಎಂದಿದ್ದಾರೆ.

ಬೆಳಗಾವಿಯಲ್ಲಿ ಮಾತನಾಡಿದ ಅವರು, ಇನ್ನು ನಾಲ್ಕು ದಿನಗಳಲ್ಲಿ ಎಲ್ಲವೂ ನಿರ್ಧಾರವಾಗುತ್ತೆ, ಜವಾಬ್ದಾರಿ ಕೊಡುತ್ತಾರೆ, ನನಗೆ ಸಚಿವ ಸ್ಥಾನ ಕೊಡದಿದ್ದಕ್ಕೆ ಏನೂ ಕಾರಣ ಹೇಳಿಲ್ಲ, ಆದರೆ ಬೇರೆ ಜವಾಬ್ದಾರಿ ಕೊಡುವುದಾಗಿ ಸಿಎಂ ಭರವಸೆ ನೀಡಿದ್ದಾರೆ. ಹಾಗಾಗಿ ಬೇರೆ ಜವಾಬ್ದಾರಿ ಕೊಡಬಹುದು ಎಂದರು.

ಇದೇ ವೇಳೆ ಕೇಳಿದ ಖಾತೆ ಕೊಡದಿದ್ದಕ್ಕೆ ಆನಂದ್ ಸಿಂಗ್ ಕ್ಯಾತೆ ವಿಚಾರವಾಗಿ ಯಾವುದೇ ಖಾತೆ ದೊಡ್ಡದು, ಸಣ್ಣದು ಎಂದು ಇರುವುದಿಲ್ಲ. ಕೊಟ್ಟ ಖಾತೆಯನ್ನು ನಿಭಾಯಿಸಿಕೊಂಡು ಹೋಗಬೇಕು ಎಂದು ಸಲಹೆ ನೀಡಿದರು.

 

Home add -Advt

Related Articles

Back to top button