National

*ವಿಮಾನ ಟೇಕ್ ಆಫ್ ಆಗುವ ವೇಳೆ ಬಾಂಬ್ ಬೆದರಿಕೆ ಕರೆ: ಕೆಲ ಕಾಲ ಆಂತಕ ಸೃಷ್ಟಿ*

ಪಗ್ರತಿವಾಹಿನಿ ಸುದ್ದಿ: ಒಂದು ಕಡೆ ಗಡಿಯಲ್ಲಿ ಭಾರತ ಪಾಕಿಸ್ತಾನದ ನಡುವೆ ಉದ್ವಿಗ್ನತೆ ನಿರ್ಮಾಣವಾಗಿದೆ. ಆದರೆ ರೇಲ್ವೆ ನಿಲ್ದಾಣ, ಶಾಲಾ ಕಾಲೇಜು, ಅಧಿಕಾರಿಗಳು, ಕಚೇರಿಗಳಿಗೆ, ವಿಮಾನಯಾನ ಸಂಸ್ಥೆಗಳಿಗೆ ಬಾಂಬ್ ಬೆದರಿಕೆ ಕರೆಗಳು ಮಾತ್ರ ನಿಲ್ಲುತ್ತಿಲ್ಲ. 

ಇನ್ನೇನು ವಿಮಾನ ಟೇಕ್ ಆಫ್ ಆಗುವ ವೇಳೆ, ವಿಮಾನದಲ್ಲಿ ಬಾಂಬ್ ಇರಿಸಲಾಗಿದೆ ಎಂಬ ಬೆದರಿಕೆ ಕರೆ ಬಂದಿದ್ದು ಕೆಲ ಕಾಲ ಆತಂಕಕ್ಕೆ ಕಾರಣವಾಗಿರುವ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ. 

Home add -Advt

ಕೋಲ್ಕತ್ತಾದಿಂದ ಮುಂಬೈಗೆ ಹಾರಲು ಸಜ್ಜಾಗಿದ್ದ ವಿಮಾನಕ್ಕೆ ಈ ರೀತಿ ಬಾಂಬ್ ಬೆದರಿಕೆ ಕರೆ ಬಂದಿದೆ. ಈ ರೀತಿ ಬಾಂಬ್ ಬೆದರಿಕೆ ಕರೆ ಬಂದ ಕೂಡಲೇ ಅಲರ್ಟ್ ಆದ ವಿಮಾನಯಾನ ಸಿಬ್ಬಂದಿ, ರಕ್ಷಣಾ ಸಿಬ್ಬಂದಿ ಕೂಡಲೇ ವಿಮಾನದ ಟೇಕ್ ಆಫ್ ಸ್ಥಗಿತಗೊಳಿಸಿ ಸಂಪೂರ್ಣ ವಿಮಾನವನ್ನು ಪರಿಶೀಲನೆಗೆ ಒಳಪಡಿಸಿದ್ದಾರೆ.

ಇಂಡಿಗೋ ವಿಮಾನ (6E 5227) ಕೋಲ್ಕತ್ತಾದಿಂದ ಮುಂಬೈಗೆ ಹೊರಟು ಟೇಕಾಫ್ ಆಗುವ ಕೆಲವೇ ಕ್ಷಣಗಳ ಮುನ್ನ ಈ ಬಾಂಬ್ ಬೆದರಿಕೆ ಬಂದಿದ್ದು ಕೂಡಲೇ ಅಗತ್ಯ ಮುನ್ನೆಚ್ಚರಿಕೆ ವಹಿಸಲಾಗಿದೆ.

Related Articles

Back to top button