Kannada NewsLatest

ಬೆಳಗಾವಿ: ಬೀದಿನಾಯಿಗಳ ಅಟ್ಟಹಾಸ; 14,000ಕ್ಕೂ ಹೆಚ್ಚು ಜನರಿಗೆ ಕಡಿತ!

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೀದಿನಾಯಿಗಳ ಹಾವಳಿಗೆ ಬೆಳಗಾವಿಯ ಜನತೆ ತತ್ತರಿಸಿದ್ದು, ಕಳೆದ 6 ತಿಂಗಳಲ್ಲಿ ಬರೋಬ್ಬರಿ 14,000ಕ್ಕೂ ಹೆಚ್ಚು ಜನರಿಗೆ ನಾಯಿಗಳು ಕಚ್ಚಿವೆ.

ಆರೋಗ್ಯ ಇಲಾಖೆಯಿಂದಲೇ ಈ ಸ್ಫೋಟಕ ಮಾಹಿತಿ ಲಭ್ಯವಾಗಿದೆ. ಬೆಳಗಾವಿ ನಗರ, ಗ್ರಾಮೀಣ ಪ್ರದೇಶದ ಭಾಗಗಳಲ್ಲಿ ಶ್ವಾನಗಳ ಅಟ್ಟಹಾಸ ಮಿತಿಮೀರಿದ್ದು, ಕಳೆದ 6 ತಿಂಗಳಲ್ಲಿ ಜಿಲ್ಲೆಯಲ್ಲಿ 14,278 ಜನರಿಗೆ ನಾಯಿಗಳು ಕಚ್ಚಿ ರಕ್ತಹೀರಿವೆ.

ಜನವರಿ 1ರಿಂದ ಜುಲೈವರೆಗೂ ನಾಯಿ ಕಡಿತದ ಕೇಸ್ ದಾಖಲಾಗಿದ್ದು, ಕಳೆದ ವರ್ಷ 1360 ಜನರಿಗೆ ನಾಯಿ ಕಡಿತವಾಗಿರುವುದಾಗಿ ಪ್ರಕರಣ ದಾಖಲಾಗಿತ್ತು. ಆದರೆ ಈ ವರ್ಷ ಕೇವಲ 6 ತಿಂಗಳಲ್ಲಿ 14 ಸಾವಿರಕ್ಕೂ ಹೆಚ್ಚು ಜನರಿಗೆ ನಾಯಿ ಕಚ್ಚಿರುವುದು ಆರೋಗ್ಯ ಇಲಾಖೆಯೇ ಶಾಕ್ ಆಗಿದೆ.

ಜನೆವರಿಯಲ್ಲಿ 2461 ಜನರಿಗೆ, ಫೆಬ್ರವರಿಯಲ್ಲಿ 2150 ಜನರಿಗೆ, ಮಾರ್ಚ್ ನಲ್ಲಿ 2374 ಜನರಿಗೆ, ಏಪ್ರಿಲ್ ನಲ್ಲಿ 2321 ಜನರಿಗೆ, ಮೇ ತಿಂಗಳಲ್ಲಿ 2569 ಜನರಿಗೆ, ಜೂನ್ ತಿಂಗಳಲ್ಲಿ 2403 ಜನರಿಗೆ ನಾಯಿ ಕಡಿದಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಹೇಶ ಕೋಣಿ ಪ್ರಗತಿವಾಹಿನಿಗೆ ಮಾಹಿತಿ ನೀಡಿದ್ದಾರೆ.

ಬೆಳಗಾವಿ ಜಿಲ್ಲೆಯಲ್ಲಿ ನಾಯಿ ಕಡಿತ ಕೇಸ್ ಗಳು ಹೆಚ್ಚುತ್ತಿವೆ.  ಸಧ್ಯ ನಾಯಿ ಕಡಿತಕ್ಕೆ ಲಸಿಕೆ ಲಭ್ಯವಿದ್ದು, 1548 ಲಸಿಕಾ ಡೋಸ್ ಗಳು ಸ್ಟಾಕ್ ಇದೆ. ನಾಯಿಗಳ ಸಂತಾನ ಹರಣ ಮಾಡಿದರೆ ಇದಕ್ಕೆ ಕಡಿವಾಣ ಹಾಕಬಹುದಾಗಿದೆ. ಇಲ್ಲವೇ ಎಲ್ಲ ನಾಯಿಗಳನ್ನು ಬೇರೆಡೆ ಸ್ಥಳಾಂತರ ಮಾಡಬೇಕಿದೆ ಎಂದು ಡಿಹೆಚ್ ಒ ಡಾ.ಮಹೇಶ್ ಕೋಣಿ ತಿಳಿಸಿದ್ದಾರೆ.
ಉಚಿತ ಆರೋಗ್ಯ ತಪಾಸಣೆ ಶಿಬಿರ; ಇಲ್ಲಿದೆ ಮಾಹಿತಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Check Also
Close
Back to top button