Vikalachetanara Day
Cancer Hospital 2
Bottom Add. 3

*ಬೆಳಗಾವಿ: ಸುವರ್ಣ ವಿಧಾನಸೌಧದ ಹೊರಗೆ ಹೆಬ್ಬಾವು ಪ್ರತ್ಯಕ್ಷ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿ ಸುವರ್ಣ ವಿಧಾನಸೌಧದ ಹೊರ ಆವರಣದಲ್ಲಿ ಹೆಬ್ಬಾವುಗಳು ಪ್ರತ್ಯಕ್ಷವಾಗಿದ್ದು, ಆತಂಕಕ್ಕೆ ಕಾರಣವಾಗಿದೆ.

ಸುವರ್ಣವಿಧಾನಸೌಧದಲ್ಲಿ ಡಿಸೆಂಬರ್ 4ರಿಂದ 15ರವರೆಗೆ ವಿಧಾನಮಂಡಲ ಅಧಿವೇಶನ ಆರಂಭವಾಗಲಿದ್ದು, ಈ ನಿಟ್ಟಿನಲ್ಲಿ ಭರ್ಜರಿ ಸಿದ್ಧತೆ ನಡೆದಿದೆ. ಇನ್ನೊಂದೆಡೆ ಸ್ವಚ್ಛತಾ ಕಾರ್ಯಗಳು ನಡೆಯುತ್ತಿವೆ. ಈ ನಡುವೆ ಸುವರ್ಣ ವಿಧಾನಸೌಧದ ಮುಂಭಾಗದಲ್ಲಿ 2-3 ಹೆಬ್ಬಾವುಗಳು ಕಂಡು ಬಂದಿದ್ದು, ಬೆಚ್ಚಿ ಬೀಳಿಸಿದೆ.

ಸುವರ್ಣ ವಿಧಾನಸೌಧದ ಉದ್ಯಾನವನದಲ್ಲಿ ಸ್ವಚ್ಛತೆ ನಡೆಸುತ್ತಿದ್ದ ವೇಳೆ ಮುಖ್ಯ ರಸ್ತೆಯಲ್ಲಿ ಪಾರ್ಕಿಂಗ್ ಸ್ಥಳಕ್ಕೆ ತಿರುವು ತೆಗೆದುಕೊಳ್ಳುವ ಪ್ರದೇಶದಲ್ಲಿ ಹುತ್ತದಿಂದ ಹೆಬ್ಬಾವುಗಳು ಹೊರಬಂದಿದ್ದು, ನಂತರ ಅಕ್ಕಪಕ್ಕದ ಪೊದೆಗಳಲ್ಲಿ ಮಾಯವಾಗಿವೆ.


Bottom Add3
Bottom Ad 2

You cannot copy content of this page