Vikalachetanara Day
Cancer Hospital 2
Bottom Add. 3

*ರಾಜ್ಯಮಟ್ಟದ ಭಗವದ್ಗೀತೆ ಅಭಿಯಾನ: ಬೆಳಗಾವಿಯಲ್ಲಿ ಮಂಗಳವಾರ ಉದ್ಘಾಟನೆ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ರಾಜ್ಯಮಟ್ಟದ ಭಗವದ್ಗೀತೆ ಅಭಿಯಾನ ಬೆಳಗಾವಿಯಲ್ಲಿ ಮಂಗಳವಾರ ಉದ್ಘಾಟನೆಯಾಗಲಿದೆ.

ಕಳೆದ ಹದಿನೇಳು ವರ್ಷಗಳಿಂದ ನಿರಂತರವಾಗಿ ಭಗವದ್ಗೀತಾ ಅಭಿಯಾನ‌ ನಡೆಸಿಕೊಂಡು ಬರುತ್ತಿರುವ ಸೋಂದಾ ಸ್ವರ್ಣವಲ್ಲೀ‌ ಮಹಾ‌ಸಂಸ್ಥಾನವು ಬೆಳಗಾವಿಯ ಭಗವದ್ಗೀತಾ ಅಭಿಯಾನದ ಸಹಕಾರದಲ್ಲಿ ಗೀತಾ ಅಭಿಯಾನಕ್ಕೆ ಮಂಗಳವಾರ ಬೆಳಗ್ಗೆ 11 ಗಂಟೆಗೆ ಚಾಲನೆ‌ ನೀಡಲಿದೆ.


ಸಮಾರಂಭವು ಅನಗೋಳದ ಸಂತಮೀರಾ ಶಾಲೆಯ ‌ಮಾಧವ ಸಭಾಗೃಹದಲ್ಲಿ ನಡೆಯಲಿದೆ. ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಗಳು ಹಾಗೂ ನಿಡಸೋಸಿ ಶ್ರೀ ದುರದಿಂಡೀಶ್ವರ ಸಂಸ್ಥಾನ ಮಠದ ಡಾ. ಶ್ರೀನಿಜಲಿಂಗೇಶ್ವರ ಮಹಾಸ್ವಾಮೀಜಿಗಳು, ಬೆಳಗಾವಿ ಆರ್ಷ ವಿದ್ಯಾ ಕೇಂದ್ರದ ಶ್ರೀಚಿತ್ಪ್ರಕಾಶಾನಂದ‌ ಜೀ ಸಾನ್ನಿಧ್ಯ‌ ನೀಡುವರು.


ವಿಶೇಷ ಆಹ್ವಾನಿತರಾಗಿ ಮಹಿಳಾ‌ ಮತ್ತು ಮಕ್ಕಳ‌ ಕಲ್ಯಾಣ ಇಲಾಖೆ‌ ಸಚಿವೆ ಲಕ್ಷ್ಮೀ ಹೆಬ್ಬಾಳಕರ, ಲೋಕಸಭಾ ಸದಸ್ಯೆ ಮಂಗಲಾ ಸುರೇಶ ಅಂಗಡಿ ಪಾಲ್ಗೊಳ್ಳುವರು. ಅಧ್ಯಕ್ಷತೆಯನ್ನು ಗೀತಾ ಅಭಿಯಾನದ ಗೌರವಾಧ್ಯಕ್ಷರೂ ಆಗಿರುವ ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ವಹಿಸಿಕೊಳ್ಳಲಿದ್ದಾರೆ. ಉದ್ಯಮಿ ಗೋಪಾಲ ಜಿನಗೌಡ, ಮಠದ ಆಡಳಿತ ‌ಮಂಡಳಿ ಅಧ್ಯಕ್ಷ ವಿ.ಎನ್.ಹೆಗಡೆ ಬೊಮ್ಮನಳ್ಳಿ ಉಪಸ್ಥಿತರಿರಲಿದ್ದಾರೆ.

Bottom Add3
Bottom Ad 2

You cannot copy content of this page