Belagavi NewsBelgaum NewsKannada NewsKarnataka NewsLatest

*ತಂಬಾಕು ಮಾರಾಟ ಅಂಗಡಿಗಳ ಮೇಲೆ ದಾಳಿ: 26 ಪ್ರಕರಣ ದಾಖಲು*


ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಹಾಗೂ ಪೊಲೀಸ್ ಇಲಾಖೆಯ ಸಹಯಗದೊಂದಿಗೆ ಬೆಳಗಾವಿಯ ಡಿಸಿ ಕಚೇರಿ ಆವರಣದಲ್ಲಿ ತಂಬಾಕು ಮಾರಾಟ ಅಂಗಡಿಗಳ ಮೇಲೆ ದಾಳಿ ನಡೆಸಿ, ಪ್ರಕರಣ ದಾಖಲಿಸಲಾಯಿತು.


ಜಿಲ್ಲಾಧಿಕಾರಿಗಳು ಹಾಗೂ ದಂಡಾಧಿಕಾರಿಗಳು ಬೆಳಗಾವಿ ಜಿಲ್ಲೆ ಇವರ ಮೌಖಿಕ ಆದೇಶದನ್ವಯ ಜಿಲ್ಲಾ ತಂಬಾಕು ನಿಯಂತ್ರಣಾಧಿಕಾರಿಗಳ ಮಾರ್ಗದರ್ಶನದಡಿಯಲ್ಲಿ ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸಿ ಕಾನೂನು ಉಲ್ಲಂಘನೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲಾಯಿತು.


ಇದೇ ಸಂದರ್ಭದಲ್ಲಿ 2003 ಕಾಯ್ದೆ ಅಡಿಯಲ್ಲಿ ಒಟ್ಟು 26 ಪ್ರಕರಣಗಳನ್ನು ದಾಖಲಿಸಿ ದಂಡ ವಿಧಿಸಿ, ಸೆಕ್ಷನ್-4 ನಾಮಫಲಕವನ್ನು ವಿತರಿಸಲಾಯಿತು


2003 ಕಾಯ್ದೆ ಪ್ರಕಾರ ಸಾರ್ವಜನಿಕ ಸ್ಥಳಗಳಲ್ಲಿ ದೂಮಪಾನ ಮಾಡುವ ಮತ್ತು ನೇರ ಪರೋಕ್ಷವಾಗಿ ತಂಬಾಕು ಜಾಹಿರಾತು ಪ್ರದರ್ಶನ, ಶೈಕ್ಷಣಿಕ ಆವರಣದ ೧೦೦ ಮೀಟರ ಅಂತರದೋಳಗೆ ತಂಬಾಕು ಉತ್ಪನ್ನ ಮಾರಾಟ ಮಾಡುವ ಅಂಗಡಿ ಮಾಲಿಕರಿಗೆ ಜಾಗೃತಿ ಮೂಡಿಸಲಾಯಿತು.


ರಾಜ್ಯ ತಂಬಾಕು ನಿಯಂತ್ರಣ ಘಟಕ ವಿಭಾಗೀಯ ಸಂಯೋಜಕರಾದ ಮಹಾಂತೇಶ ಉಳ್ಳಾಗಡ್ಡಿ, ಜಿಲ್ಲಾ ಸಲಹೆಗಾರರಾದ ಡಾ.ಶ್ವೇತಾ ಪಾಟೀಲ, ಸಮಾಜ ಕಾರ್ಯಕರ್ತೆಯಾದ ಕವಿತಾ ರಾಜನ್ನವರ, ಪೊಲೀಸ್ ಇಲಾಖೆಯ ಉಮೇಶ ಪಡೆನಾವರ, ಆರೋಗ್ಯ ನೀರಿಕ್ಷಕರಾದ ಮಂಜುನಾಥ ಬೆರಕಿನಾಳ, ರಮೇಶ ಹುಲಿಕೇರಿ ದಾಳಿಯಲ್ಲಿ ಪಾಲಗ್ಗೋಂಡಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button