ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಸಾರಿಗೆ ನೌಕರರ ಕುಟುಂಬಸ್ಥರ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂದಿದ್ದು, ಮುಷ್ಕರದ ನಡುವೆಯೂ ಬಸ್ ಓಡಿಸಲು ಮುಂದಾದ ಚಾಲಕನನ್ನು ತಡೆದ ಮಹಿಳೆಯರು ಆತನಿಗೆ ಹಾರ ಹಾಕಿ, ಮಾಂಗಲ್ಯ ಸರ ಹಾಕಲು ಮುಂದಾದ ಘಟನೆ ನಡೆದಿದೆ.
ಯುಗಾದಿ ಹಬ್ಬದ ನಡುವೆಯೂ ಸಾರಿಗೆ ನೌಕರರು ತಮ್ಮ ಕುಟುಂಬ ಸಮೇತ ಮುಷ್ಕರ ಮುಂದುವರೆಸಿದ್ದು, ಹಲವೆಡೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ತಟ್ಟೆ ಲೋಟ ಬಡಿದು ಪ್ರತಿಭಟನೆ ನಡೆಸಿದ್ದರೆ, ಇನ್ನು ಹಲವೆಡೆ ಭಿಕ್ಷೆ ಬೇಡುವ ಮೂಲಕ ಪ್ರತಿಭಟನೆ ನಡೆಸಿದ್ದಾರೆ.
ಈ ನಡುವೆ ಬೆಳಗಾವಿಯಲ್ಲಿ ಬಸ್ ಚಾಲಕನೊಬ್ಬ ಮುಷ್ಕರದಲ್ಲಿ ಭಾಗಿಯಾಗದೇ ಬಸ್ ಓಡಿಸಲು ಮುಂದಾಗಿದ್ದಾನೆ. ಇದರಿಂದ ರೊಚ್ಚಿಗೆದ್ದ ಪ್ರತಿಭಟನಾ ನಿರತ ಸಾರಿಗೆ ಸಿಬ್ಬಂದಿ ಮಹಿಳೆಯರು ಬಸ್ ತಡೆದು ಬಸ್ ನಲ್ಲಿ ಹತ್ತಿ ಚಾಲಕನಿಗೆ ಹೂವಿನ ಹಾರ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೀದಿಯಲ್ಲಿ ನಾವು ಮಕ್ಕಳೊಂದಿಗೆ ತಟ್ಟೆ ಹಿಡಿದು ಪ್ರತಿಭಟನೆ ನಡೆಸುತ್ತಿದ್ದರೆ ನೀನು ಬಸ್ ಓಡಿಸುತ್ತಿದ್ದೀಯಾ ಎಂದು ಕಿಡಿಕಾರಿದ್ದಾರೆ. ಅಲ್ಲದೇ ಮಹಿಳೆಯೊಬ್ಬರು ಮಂಗಲ್ಯಸರವನ್ನು ಚಾಲಕನಿಗೆ ಹಾಕಲು ಯತ್ನಿಸಿದ್ದಾರೆ.
ಒಟ್ಟಾರೆ ರಾಜ್ಯ ಸರ್ಕಾರ ಹಾಗೂ ಸಾರಿಗೆ ನೌಕರರ ನಡುವಿನ ಸಮರ ತಾರಕಕ್ಕೇರಿದ್ದು, ಪ್ರತಿಭಟನೆಗಳು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ.
ಕೋವಿಡ್ ಟೆಸ್ಟ್ ಹೆಚ್ಚಿಸಲು ನಿರ್ದೇಶನ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ