
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ನಾನು 8 ಬಾರಿ ಶಾಸಕನಾಗಿದ್ದೇನೆ. ರಾಜ್ಯದ ಚುಕ್ಕಾಣಿ ಹಿಡಿಯಲು ನಾನು ಸಮರ್ಥನಿದ್ದೇನೆ. ಉತ್ತರ ಕರ್ನಾಟಕದ ಸುಪುತ್ರ ರಾಜ್ಯದ ಸಿಎಂ ಆಗಿ ಆಯ್ಕೆಯಾಗಿ ಬರಲಿ ಎಂದು ಹಾರೈಸಿ ಎಂದಿದ್ದಾರೆ.
ಬೆಳಗಾವಿಯ ಹುಕ್ಕೇರಿಯಲ್ಲಿ ಮಾತನಾಡಿದ ಉಮೇಶ್ ಕತ್ತಿ ತಾವು ಮುಖ್ಯಮಂತ್ರಿಯಾಗಬೇಕು ಎಂಬ ಇಂಗಿತವನ್ನು ಮತ್ತೊಮ್ಮೆ ವ್ಯಕ್ತಪಡಿಸಿದ್ದಾರೆ. ಹಿಂದೊಮ್ಮೆ ಉಮೇಶ್ ಕತ್ತಿ ತಾನೊಬ್ಬ ಹಿರಿಯ ಶಾಸಕ. ತನಗೂ ರಾಜ್ಯದ ಸಿಎಂ ಆಗುವ ಅರ್ಹತೆ ಇದೆ ಎಂಬ ಹೇಳಿಕೆ ನೀಡಿದ್ದರು.
ಇದೀಗ ಶಾಸಕ ಉಮೇಶ್ ಕತ್ತಿ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ತಾವು ವಿಧಾನಸಭೆಗೆ 8 ಬಾರಿ ಆಯ್ಕೆಯಾಗಿದ್ದೇನೆ. ಮುಖ್ಯಮಂತ್ರಿಯಾಗುವ ಅರ್ಹತೆ ತನಗೂ ಇದೆ. ಹಾಗಾಗಿ ನಾನು ಈ ರಾಜ್ಯದ ಸಿಎಂ ಆಗಿ ಆಯ್ಕೆಯಾಗಿ ಬರಲೆಂದು ನನಗೆ ಹಾರೈಸಿ ಎಂದು ಕೇಳಿದ್ದಾರೆ. ಕತ್ತಿ ಅವರ ಈ ಹೇಳಿಕೆ ಇದೀಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ