Kannada NewsLatest

ಸಿಎಂ ಹುದ್ದೆ ಖಾಲಿ ಇದ್ರೆ ನೆಕ್ಸ್ಟ್ ನಾನೇ ಇದ್ದೇನೆ – ಉಮೇಶ ಕತ್ತಿ

ಪ್ರಗತಿವಾಹಿನಿ ಸುದ್ದಿ;  ಬೆಳಗಾವಿ: ಮುಖ್ಯಮಂತ್ರಿ ಬದಲಾವಣೆ ವದಂತಿ ಬೆನ್ನಲ್ಲೇ ಆಹಾರ ಸಚಿವ ಉಮೇಶ್ ಕತ್ತಿ ಹೊಸ ಬಾಂಬ್ ಸಿಡಿಸಿದ್ದು, ಸಿಎಂ ಹುದ್ದೆ ಖಾಲಿ ಇದ್ರೆ ನೆಕ್ಸ್ಟ್ ನಾನೇ ಇದ್ದೇನೆ ಎಂದು ಹೇಳುವ ಮೂಲಕ ಸಿಎಂ ಸ್ಥಾನದ ಆಸೆಯನ್ನು ತೇಲಿಬಿಟ್ಟಿದ್ದಾರೆ.

ಬೆಳಗಾವಿಯಲ್ಲಿ ಮಾತನಾಡಿದ ಸಚಿವ ಕತ್ತಿ, ಸಿಎಂ ಹುದ್ದೆ ಖಾಲಿಯಾದರೆ ನಂತರ ನಾನೇ ಇದ್ದೇನೆ. ಮುಖ್ಯಮಂತ್ರಿಯಾಗಲು ನನಗೆ ಎಲ್ಲಾ ಅರ್ಹತೆಗಳಿವೆ. ನನ್ನ ಮೇಲೆ ಯಾವುದೇ ಕಳಂಕದ ಆರೋಪಗಳು ಇಲ್ಲ, 8 ಬಾರಿ ಶಾಸಕನಾಗಿ ಕೂದ ಆಯ್ಕೆಯಾದವನು. ಪಕ್ಷ ಮನಸ್ಸು ಮಾಡಿದರೆ ಸಿಎಂ ಆಗಬೇಕೆಂಬ ಆಸೆಯಿದೆ ಎಂದರು.

ಸಿಎಂ ಬದಲಾವಣೆ ಯಾರು ಮಾಡುತ್ತಿದ್ದಾರೆ ಎಂಬುದು ನನ್ನ ಗಮನಕ್ಕೆ ಬಂದಿಲ್ಲ. ಹೈಕಮಾಂಡ್ ಮನಸ್ಸು ಮಾಡಿದರೆ ಸಿಎಂ ಆಗುವ ಆಸೆಯಿದೆ ಎಂದು ಹೇಳಿದ್ದಾರೆ.
2000 ಕೋಟಿ ಹೊಸ ಬಾಂಬ್ ಸಿಡಿಸಿದ ಯತ್ನಾಳ್…!

Home add -Advt

Related Articles

Back to top button