Latest

ಕೊರೋನಾ: ಶಿರಸಿಗೆ ಇಂದು ಬಿಗ್ ಶಾಕ್?

ಪ್ರಗತಿವಾಹಿನಿ ಸುದ್ದಿ, ಶಿರಸಿ – ಉತ್ತರ ಕನ್ನಡ ಜಿಲ್ಲೆಯಲ್ಲಿ ಕೇವಲ ಭಟ್ಕಳದಲ್ಲಿ ಮಾತ್ರ ಕಾಣಿಸಿಕೊಂಡಿದ್ದ ಕೊರೋನಾ ವೈರಸ್ ನಿಧಾನವಾಗಿ ಇಡೀ ಜಿಲ್ಲೆಯನ್ನು ಆಕ್ರಮಿಸುತ್ತ ಸಾಗಿದೆ.

ಭಟ್ಕಳದ ನಂತರ ಕುಮಟಾ, ಮುರಡೇಶ್ವರ, ಹೊನ್ನಾವರ, ನಂತರದಲ್ಲಿ ಮುಂಡಗೋಡ, ಯಲ್ಲಾಪುರಕ್ಕೂ ಕಾಲಿಟ್ಟಿರುವ ಕೊರೋನಾ ವೈರಸ್ ಇಂದು ಶಿರಸಿಗೆ ದೊಡ್ಡ ಶಾಕ್ ನೀಡಲಿದೆ ಎನ್ನುವ ದಟ್ಟ ವದಂತಿ ಜಿಲ್ಲೆಯಲ್ಲಿ ಹರಡಿದೆ.

ಶಿರಸಿಯಲ್ಲಿ ಹೊರರಾಜ್ಯದ ಸಂಪರ್ಕದಿಂದಾಗಿ 9 ಪ್ರಕರಣ ದೃಢಪಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಮಹಾರಾಷ್ಟ್ರದಿಂದ ಬಂದ 9 ಜನರಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ.

ಇದು ನಿಜವೇ ಆಗಿದ್ದಲ್ಲಿ ಉತ್ತರ ಕನ್ನಡ ಜಿಲ್ಲೆಗೆ ದೊಡ್ಡ ಶಾಕ್ ಆಗಲಿದೆ. ಇಡೀ ಉತ್ತರ ಕನ್ನಡ ಜಿಲ್ಲೆ ರೆಡ್ ಝೋನ್ ನತ್ತ ಸರಿದಿದ್ದು, ದೊಡ್ಡ ಆತಂಕ ಮನೆ ಮಾಡಿದೆ. ಗುರುವಾರ ಮಧ್ಯಾಹ್ನದ ಹೊತ್ತಿಗೆ ಬರಲಿರುವ ಹೆಲ್ತ್ ಬುಲಿಟಿನ್ ಈ ಬಗ್ಗೆ ಸ್ಪಷ್ಟತೆ ನೀಡಲಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button