Belagavi NewsBelgaum NewsElection NewsKannada NewsKarnataka NewsNationalPolitics

*ಮೇ 25ಕ್ಕೆ ಗ್ರಾ.ಪಂ ಉಪ ಚುನಾವಣೆ*

ಪ್ರಗತಿವಾಹಿನಿ ಸುದ್ದಿ: ಸದ್ಯದಲ್ಲೇ ರಾಜ್ಯದಲ್ಲಿ ಜಿಲ್ಲಾ ಪಂಚಾಯತ, ತಾಲೂಕು ಪಂಚಾಯತ ಚುನಾವಣೆಗಳು ಘೋಷಣೆ ಆಗಲಿದೆ.‌ ಆದರೆ ಅದಕ್ಕಿಂತ ಮುಂಚೆ ಖಾಲಿ ಇರುವ ಗ್ರಾಮ ಪಂಚಾಯತ ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ ನಡೆಯಲಿದೆ.

ಪಂಚಾಯಿತಿಗಳಲ್ಲಿ ಖಾಲಿ ಇರುವ ಸದಸ್ಯ ಸ್ಥಾನಗಳಿಗೆ ಇದೇ ಮೇ 25ಕ್ಕೆ ಉಪ ಚುನಾವಣೆ ನಡೆಯಲಿದೆ. 31 ಜಿಲ್ಲೆಯ, 135 ತಾಲೂಕಿನ, 223 ಗ್ರಾಮ ಪಂಚಾಯಿತಿಗಳ 265 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. 

Home add -Advt

ಮೇ 25ರಂದು ಮತದಾನ ನಡೆಯಲಿದ್ದು, ಮೇ 28ರಂದು ರಿಸಲ್ಟ್ ಹೊರಬೀಳಲಿದೆ. ಈಗಾಗಲೇ ಚುನಾವಣಾ ಆಯೋಗ ಸಿದ್ಧತೆ ನಡೆಸಿದ್ದು, ಸುಸೂತ್ರ ಮತದಾನಕ್ಕೆ ತಯಾರಿ ನಡೆಸಿದೆ.

ಭಾನುವಾರ ಬೆಳಗ್ಗೆ 7 ರಿಂದ ಸಂಜೆ 5 ಗಂಟೆಯ ತನಕ ನಡೆಯಲಿದೆ. ಮತ ಎಣಿಕೆ 28/5/2025ರ ಬುಧವಾರ ನಡೆಯಲಿದೆ. ಗ್ರಾಮ ಪಂಚಾಯಿತಿಗಳ ಉಪ ಚುನಾವಣೆಯಲ್ಲಿ NOTA ಮತ ಚಲಾವಣೆ ಮಾಡಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

Related Articles

Back to top button