ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಹೃದಯಾಘಾತದಿಂದ ನಿಧನರಾಗಿರುವ ಆಹಾರ ಸಚಿವ ಉಮೇಶ್ ಕತ್ತಿ ಅವರ ಅಂತ್ಯಕ್ರಿಯೆ ಸಚಿವರ ಸ್ವಗ್ರಾಮ ಬೆಳಗಾವಿಯ ಬೆಲ್ಲದ ಬಾಗೇವಾಡಿಯಲ್ಲಿ ನೆರವೇರಲಿದೆ. ಈಗಾಗಲೇ ಪಾರ್ಥಿವ ಶರೀರ ಸ್ವಗ್ರಾಮಕ್ಕೆ ಆಗಮಿಸಿದೆ.
ನಿನ್ನೆ ಬೆಂಗಳೂರಿನ ಡಾಲರ್ಸ್ ಕಾಲೋನಿ ನಿವಾಸದಲ್ಲಿ ಹೃದಯಾಘಾತದಿಂದ ವಿಧಿವಶರಾಗಿದ್ದ ಸಚಿವ ಉಮೇಶ್ ಕತ್ತಿ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿನ ಹೆಚ್ ಎ ಎಲ್ ನಿಂದ ಬೆಳಗಾವಿಗೆ ವಿಶೇಷ ವಿಮಾನದ ಮೂಲಕ ಏರ್ ಲಿಫ್ಟ್ ಮಾಡಲಾಗಿತ್ತು. ಬಳಿಕ ಬೆಳಗಾವಿ ಸಾಂಬ್ರಾ ನಿಲ್ದಾಣದಿಂದ ಅಲಂಕೃತಗೊಂಡ ಸೇನಾ ವಾಹನದಲ್ಲಿ ಮೆರವಣಿಗೆ ಮೂಲಕ ಸಚಿವರ ಪಾರ್ಥಿವ ಶರೀರವನ್ನು ಬೆಲ್ಲದ ಬಾಗೇವಾಡಿಯ ಸ್ವಗ್ರಾಮಕ್ಕೆ ತರಲಾಯಿತು.
ಸ್ವಗ್ರಾಮದಲ್ಲಿ ವಿಶ್ವರಾಜ ಶುಗರ್ ಫ್ಯಾಕ್ಟರಿ ಆವರಣದಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದ್ದು, ಸಾಗರೋಪಾದಿಯಲ್ಲಿ ಸಾರ್ವಜನಿಕರು, ಸಚಿವರ ಬೆಂಬಲಿಗರು ಆಗಮಿಸಿ ಮೃತದೇಹದ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.
ಕುಟುಂಬದವರಿಂದ ಪೂಜೆ, ಅಂತಿಮ ವಿಧಿವಿಧಾನದ ಬಳಿಕ ಬೆಲ್ಲದ ಬಾಗೇವಾಡಿಯ ತೋಟದ ಮನೆಯಲ್ಲಿ ಉಮೇಶ್ ಕತ್ತಿ ತಂದೆ ವಿಶ್ವನಾಥ ಕತ್ತಿ ಅವರ ಸಮಾಧಿ ಪಕ್ಕದಲ್ಲಿಯೇ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಲಿದೆ.
https://pragati.taskdun.com/latest/bjp-janotsavacanclledpostpone/
ರಾಜ್ಯಾದ್ಯಂತ 3 ದಿನ ಶೋಕಾಚರಣೆ ಘೋಷಣೆ
https://pragati.taskdun.com/politics/umesh-kattideath3-days-mourning/
ಮತ್ತೆರಡು ವಿಶೇಷ ವಿಮಾನ ಬೆಳಗಾವಿಯತ್ತ
https://pragati.taskdun.com/latest/cm-basavaraj-bommaisiddaramaiahspecial-flightbelagaviumesh-katti-death/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ