*ವಂಟಮುರಿ ಕೇಸ್; ಮಹಿಳೆ ರಕ್ಷಿಸಿದ ನಾಗರಿಕರು, ಪೊಲೀಸ್ ಸಿಬ್ಬಂದಿಗಳಿಗೆ ಸನ್ಮಾನ*
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕಾಕತಿ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸ ವಂಟಮುರಿ ಗ್ರಾಮದಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ತ ಮಹಿಳೆಯನ್ನು ರಕ್ಷಿಸಿದ ಅಲ್ಲಿನ ನಾಗರೀಕರು ಹಾಗೂ ಪೊಲೀಸರಿಗೆ ಬೆಳಗಾವಿ ಪೊಲೀಸ ಆಯುಕ್ತ ಸಿದ್ದರಾಮಪ್ಪ ಕವಾಯತು ಮೈದಾನದಲ್ಲಿ ನಡೆದ ಪರೇಡ್ ನಲ್ಲಿ ಸನ್ಮಾನಿಸಿದರು.
ಮುಖ್ಯವಾಗಿ ಆ ಘಟನೆ ನಡೆದಾಗ ವಾಸಿಮ ಮಕಾನದಾರ ಹಾಗೂ ಸಿದ್ದಪ್ಪ ಹೊಳೆಕರ್ ಅಧ್ಯಕ್ಷರು ಗ್ರಾಮ ಪಂಚಾಯತ್ ಹೊಸವಂಟಮುರಿ ಇವರು ಕೂಡಲೇ ಕಂಟ್ರೋಲ್ ರೂಂಗೆ ಮಾಹಿತಿ ನೀಡಿದ್ದು, ಹಾಗೂ ಇನ್ನೊಬ್ಬ ನಾಗರಿಕರಾದ ಜಹಾಂಗೀರ್ ತಹಶೀಲ್ದಾರ್ ರವರು ಪೊಲೀಸರು ಬರುವ ಮುಂಚೆ ಮಹಿಳೆಯನ್ನ ರಕ್ಷಣೆ ಮಾಡಲು ಪ್ರಯತ್ನಿಸಿರುತ್ತಾರೆ. ಬೆಳಗಾವಿ ನಗರ ಕಂಟ್ರೋಲ್ ರೂಂ, ಸಿಬ್ಬಂದಿ ಮಂಜುನಾಥ್ ತೆಕ್ಕಕರ ತಕ್ಷಣ ಕಾಕತಿ ERSS ಗೆ ಕಾಲ್ ಮಾಡಿ ತಿಳಿಸಿದ ನಂತರ ಕೇವಲ 10 ನಿಮಿಷಕ್ಕೆ ಘಟನಾ ಸ್ಥಳಕ್ಕೆ ಧಾವಿಸಿದ ಕಾಕತಿ ಪೊಲೀಸ್ ಠಾಣೆ ಪಿಎಸ್ಐ ಮಂಜುನಾಥ ಹುಲಕುಂದ ಹಾಗೂ ಸಿಬ್ಬಂದಿಯವರಾದ, ಸುಭಾಷ್ ಬಿಲ್ ಸಿಪಿಸಿ ಬ.ನಂ.1129, ವಿಠ್ಠಲ್ ಪಟ್ಟೇದ,ಸಿಪಿಸಿ ಬ.ನಂ.1466, ನಾರಾಯಣ ಚಿಪ್ಪಲಕಟ್ಟಿ ಸಿಪಿಸಿ ಬ.ನಂ.1608, ಹಾಗೂ ಬೆಳಗಾವಿ ಅಧಿವೇಶನದ ಬಂದೋಬಸ್ತ ಕರ್ತವ್ಯಕ್ಕೆ ಆಗಮಿಸಿದ್ದ, ಕೋಲಾರ ಜಿಲ್ಲೆಯ ಡಿಎಆರ್ ಘಟಕದ ಮುತ್ತಪ್ಪ ಕ್ವಾನಿ ಎಪಿಸಿ ಬ ನಂ. 382 ಇವರೆಲ್ಲ ಸೇರಿ ಮಹಿಳೆಯನ್ನು ರಕ್ಷಿಸಿದ್ದಾರೆ.
ವಾಸಿಮ ಮಕಾನದಾರ ಹಾಗೂ ಸಿದ್ದಪ್ಪ ಹೊಳೆಕರ್, ಜಹಾಂಗೀರ್ ತಹಶೀಲ್ದಾರ ಇವರುಗಳಿಗೆ ಪೊಲೀಸ್ ಗ್ರೌಂಡ್ ನಲ್ಲಿ ತಲಾ 5000 ಸಾವಿರ ರೂಪಾಯಿ ಹಾಗೂ ಕಾಕತಿ ಠಾಣೆಯ ಪಿಎಸ್ ಐ ಮಂಜುನಾಥ ಹುಲಕುಂದ ರವರಿಗೆ 5000 ರೂ. ಹಾಗೂ ಸಿಬ್ಬಂದಿಯವರಾದ, ಸುಭಾಷ್ ಬಿಲ್, ಸಿಪಿಸಿ ಬ.ನಂ.1129 , ವಿಠ್ಠಲ್ ಪಟ್ಟೇದ,ಸಿಪಿಸಿ ಬ.ನಂ.1466, ನಾರಾಯಣ ಚಿಪ್ಪಲಕಟ್ಟಿ ಸಿಪಿಸಿ ಬ.ನಂ.1608 ಹಾಗೂ ಕೋಲಾರ ಜಿಲ್ಲೆಯ ಡಿಎಆರ್ ಘಟಕದ ಮುತ್ತಪ್ಪ ಕ್ವಾನಿ ಎಪಿಸಿ ಬ ನಂ. 382 ಕಂಟ್ರೋಲ್ ಸಿಬ್ಬಂದಿ ಮಂಜುನಾಥ್ ತೆಕ್ಕೆಕರ ರವರಿಗೆ ತಲಾ 4000 ರೂ. ಬಹುಮಾನ ನೀಡಿ ಸನ್ಮಾನಿಸಿದರು.
ಇದರೊಂದಿಗೆ ಸಂತ್ರಸ್ತ ಮಹಿಳೆಯ ರಕ್ಷಣೆ ಮಾಡಲು ಪ್ರಯತ್ನಿಸಿದ ಜಹಾಂಗೀರ್ ಖಾಸಿಂಸಾಬ್ ತಹಶೀಲ್ದಾರ್ ಹೊಸವಂಟಮುರಿ ಗ್ರಾಮ ಇವರಿಗೆ ದಿನಾಂಕ 20.12.2023ರ, ಮಾನ್ಯ ಉಚ್ಛ ನ್ಯಾಯಾಲಯ ಬೆಂಗಳೂರುರವರ ಪ್ರಶಂಸನೆ ಮಾಡಿರುವ ಆದೇಶದ ಪ್ರತಿಯನ್ನು ಸಹ ಪೊಲೀಸ್ ಆಯುಕ್ತರು ನೀಡಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ