Latest

ಬೆಳಗಾವಿ ಉದ್ದಗಲಕ್ಕೂ ಕನ್ನಡ ಬಾವುಟ ಹಾರಿಸುತ್ತೇವೆ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿ, ಕಾರವಾರ ಕರ್ನಾಟಕದ ಅವಿಭಾಜ್ಯ ಅಂಗ. ಶಿವಸೇನೆ ಕಾರ್ಯಕರ್ತರು ಕರ್ನಾಟಕ ಗಡಿಗೆ ನುಗ್ಗಿ ಪುಂಡಾಟ ಮೆರೆಯುವವರೆಗೂ ರಾಜ್ಯ ಸರ್ಕಾರ ಕಣ್ಮುಚ್ಚಿ ಕುಳಿತಿರುವುದೇಕೆ. ಶಿವಸೇನೆ ಪುಂಡರ ವಿರುದ್ಧ ರಾಜ್ಯ ಸರ್ಕಾರ ಕಠಿಣ ಕ್ರಮಕೈಗೊಳ್ಳಬೇಕು ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಆಗ್ರಹಿಸಿದ್ದಾರೆ.

ಬೆಳಗಾವಿಯಲ್ಲಿ ಮಾತನಾಡಿದ ಅವರು, ಬೆಳಗಾವಿ ಪಾಲಿಕೆ ಮುಂದೆ ಕನ್ನಡ ಬಾವುಟ ಹಾರಿಸಲು ಅಡ್ಡಿ ಪಡಿಸಿರುವುದು ಅಗೌರವವಾಗಿದೆ. ಎಂಇಎಸ್ ನ್ನು ಸಂಪೂರ್ಣ ರದ್ದು ಮಾಡಬೇಕು. ಮಹಾರಾಷ್ಟ್ರ ಏಕಿಕರಣ ಎಂಬುದು ಇರಬಾರದು. ಕರ್ನಾಟಕ ಏಕಿಕರಣ ಎಂಬುದು ಇರಬೇಕು. ಮುಂದಿನ ದಿನಗಳಲ್ಲಿ ಬೆಳಗಾವಿ ಉದ್ದಗಲಕ್ಕೂ ಕನ್ನಡ ಬಾವುಟ ಹಾರಿಸುತ್ತೆವೆ ಎಂದು ಹೇಳಿದರು.

Home add -Advt

Related Articles

Back to top button