Kannada NewsLatest
ನದಿಯಲ್ಲಿ ಕೊಚ್ಚಿ ಹೋಗಿ ಮರವೇರಿ ಕುಳಿತಿದ್ದ ಯುವಕ; ಎನ್ ಡಿ ಆರ್ ಎಫ್ ನಿಂದ ರಕ್ಷಣೆ (ವಿಡೀಯೋ ಸಹಿತ ವರದಿ)

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಭಾರಿ ಮಳೆಯಿಂದಾಗಿ ಬೆಳಗಾವಿಯಲ್ಲಿ ಪ್ರವಾಹ ಭೀತಿ ಉಂಟಾಗಿದ್ದು, ಈ ನಡುವೆ ವೇದಗಂಗಾ ನದಿಯಲ್ಲಿ ಕೊಚ್ಚಿ ಹೋಗಿದ್ದ ಯುವಕನನ್ನು ಎನ್ ಡಿ ಆರ್ ಎಫ್ ತಂಡ ರಕ್ಷಿಸಿದೆ.
ಜಿಲ್ಲೆಯ ನಿಪ್ಪಾಣಿ ತಾಲೂಕಿನ ಸಿದ್ನಾಳ ಗ್ರಾಮದ ಬಳಿ ವೇದಗಂಗಾ ನದಿ ದಾಟುತ್ತಿದ್ದಾಗ ಸಿದ್ನಾಳ ಗ್ರಾಮದ ಬಳಿ ದಿಗ್ವಿಜಯ್ ಕುಲ್ಕರ್ಣಿ ಎಂಬ ಯುವಕ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದ. ನದಿ ಮಧ್ಯೆ ಸಿಕ್ಕ ಮರದ ದಿಣ್ಣೆಯನ್ನು ಏರಿ ಕುಳಿತು ಜೀವ ರಕ್ಷಿಸಿಕೊಂಡಿದ್ದ. ಸತತ 5 ಗಂಟೆಗಳ ಕಾರ್ಯಾಚರಣೆ ಬಳಿಕ ಇದೀಗ ಎನ್ ಡಿಆರ್ ಎಫ್ ತಂಡ ಯುವಕನನ್ನು ರಕ್ಷಿಸಿದೆ. ಯುವಕನಿಗೆ ಹಗ್ಗವನ್ನು ಕಟ್ಟಿ, ಟ್ಯೂಬ್ ಸಹಾಯದಿಂದ ದಡಕ್ಕೆ ತರಲಾಗಿದೆ.
ಈ ನಡುವೆ ಮಲಪ್ರಭಾ ನದಿಯಲ್ಲಿ ಕೊಚ್ಚಿಹೋಗಿದ್ದ ಯಕ್ಕುಂಡಿಯ ಹುಸೇನ್ ಸಾಬ್ ಅತ್ತಾರ ಎಂಬುವವರ ಮೃತದೇಹ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ಕೋವಿಡ್ 3ನೇ ಅಲೆ ಎಚ್ಚರಿಕೆ; ಮಕ್ಕಳು ಅನುಸರಿಸಬೇಕಾದ ಗೈಡ್ ಲೈನ್ ಇಲ್ಲಿದೆ