Kannada NewsLatest

ರಿಂಕು ಶರ್ಮಾ ಹತ್ಯೆ ಪ್ರಕರಣ; ವಿಶ್ವ ಹಿಂದು ಪರಿಷತ್ ಬಜರಂಗದಳ ಕಾರ್ಯಕರ್ತರಿಂದ ಖಂಡನೆ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ರಿಂಕು ಶರ್ಮಾ ಹತ್ಯೆ ಖಂಡಿಸಿ ವಿಶ್ವ ಹಿಂದು ಪರಿಷತ್ ಬಜರಂಗದಳ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಮೂಲಕ  ರಾಷ್ಟ್ರಪತಿಯವರಿಗೆ ಮತ್ತು ಗೃಹ ಮಂತ್ರಿ ಅವರಿಗೆ ಮನವಿ ಅರ್ಪಿಸಿದರು.

ಈ ವೇಳೆ ಮಾತನಾಡಿದ ವಿಶ್ವ ಹಿಂದು ಪರಿಷತ್ ಸಹ ಕೋಶಾಧ್ಯಕ್ಷ ಕೃಷ್ಣ ಭಟ್, ದೇಶದಲ್ಲಿ ಭಕ್ತಿ ಭಾವದಿಂದ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣಕ್ಕೆ ನಿಧಿ ಸಮರ್ಪಣಾ ಅಭಿಯಾನ ಶಾಂತವಾಗಿ ನಡೆದಿದೆ ಅನ್ನುವಾಗಲೇ ಜಿಹಾದಿ ಮನಸ್ಥಿತಿಯುಳ್ಳವರು ದಿಲ್ಲಿಯಲ್ಲಿ ನಿಧಿ ಸಮರ್ಪಣೆ ಸಂಪರ್ಕ ಅಭಿಯಾನದಲ್ಲಿ ಭಾಗವಹಿಸಿದ  ಹಿಂದು ಕಾರ್ಯಕರ್ತ ರಿಂಕು ಶರ್ಮಾ ಅವರನ್ನು ಬರ್ಬರವಾಗಿ ಹತ್ಯೆ ಮಾಡಿದ್ದು, ಇದನ್ನು ವಿಶ್ವ ಹಿಂದು ಪರಿಷತ್ ಬಜರಂಗದಳ ಖಡಾಖಂಡಿತವಾಗಿ ಖಂಡಿಸುತ್ತದೆ. ಅವರನ್ನು ಹತ್ಯೆ ಮಾಡಿದ ಅಪರಾಧಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.

ರಿಂಕು ಶರ್ಮ ಕುಟುಂಬಕ್ಕೆ ಆರ್ಥಿಕ ಭದ್ರತೆ ಒದಗಿಸಬೇಕು. ಕೇವಲ ಒಬ್ಬ ವ್ಯಕ್ತಿ ಜೈ ಶ್ರೀ ರಾಮ ಎಂದರೆ ಹತ್ಯೆ ಮಾಡುವ ವಿಕೃತ ಧರ್ಮಾಂಧರೆ ಗಲ್ಲಿ ಗಲ್ಲಿಯಲ್ಲಿ, ಮನೆ ಮನೆಯಲ್ಲಿ, ಪ್ರತಿ ಊರಿನಲ್ಲಿ ಜೈ ಶ್ರೀ ರಾಮ ಜೈ ಶ್ರೀರಾಮ ಎನ್ನುವ ಲಕ್ಷಾಂತರ ದೇಶ ಭಕ್ತರಿದ್ದಾರೆ ಎಚ್ಚರ ಇರಲಿ ಎಂಬ ದಿಟ್ಟ ಸಂದೇಶವನ್ನು ವಿಶ್ವ ಹಿಂದು ಪರಿಷತ್ ಬಜರಂಗದಳದ ಮೂಲಕ ಎಚ್ಚರಿಸುತ್ತಿದ್ದೇವೆ ಎಂದರು.

ಕಾಯ್ದೆ ಕಾನೂನಿಗೆ ಗೌರವ ಕೊಡುವ ಸಲುವಾಗಿ, ದೇಶಕ್ಕೆ ಗೌರವ ಕೊಡುವ ಸಲುವಾಗಿ, ಧರ್ಮ ರಕ್ಷಣೆ ಸಲುವಾಗಿ ಸದಾ ಹೋರಾಡುವ ಬಜರಂಗದಳದಳಕ್ಕೆ ದೇಶದ್ರೋಹಿ ಧರ್ಮದ್ರೋಹಿ ಜಿಹಾದಿಗಳನ್ನು ಮಟ್ಟಹಾಕುವದು ಗೊತ್ತಿದೆ ಎಂದು ಬಜರಂಗದಳ ಜಿಲ್ಲಾ ಸಂಯೋಜಕ ಬಾವಕಣ್ಣ ಕಟ್ಟೆಚ್ಚರ ಕೊಟ್ಟರು.

ಡಾ ಭಾಗೋಜೀ ನಗರ ಅಧ್ಯಕ್ಷರು, ವಿಜಯ ಜಾದವ,ಅಚ್ಯುತಮ್ ಕುಲಕರ್ಣಿ ವಿಭಾಗ ಸಹ ಕಾರ್ಯದರ್ಶಿ,ಬಜರಂಗದಳ ನಗರ ಸಂಯೋಜಕ ಆದಿನಾಥ ಗಾವಡೆ ಮುಂತಾದ ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button