ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಮಾರ್ಚ 27 ರಂದು ವಿಶ್ವರಂಗಭೂಮಿ ದಿನಾಚರಣೆ ಅಂಗವಾಗಿ ರಂಗಸಂಪದ ಬೆಳಗಾವಿ ವತಿಯಿಂದ ದಿ:26 -28ವರೆಗೆ ಬೆಳಗಾವಿಯಲ್ಲಿ ಮೂರು ದಿನಗಳ ಕಾಲ ನಾಟಕೋತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅರವಿಂದ ಕುಲಕರ್ಣಿ ತಿಳಿಸಿದ್ದಾರೆ.
ಇಂದು ನಗರದ ಚನ್ನಮ್ಮ ವೃತ್ತದಲ್ಲಿರುವ ಕನ್ನಡ ಸಾಹಿತ್ಯಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ ದಿ 26ರಂದು ಖ್ಯಾತ ಲೇಖಕರಾದ ಶಿರೀಷ ಜೋಶಿ ಅವರ “ಪ್ರಿಂಟಿಂಗ್ ಮಶೀನ್” ನಾಟಕ, ದಿ:27 ರಂದು ರಂಗಕರ್ಮಿ ಎಸ್.ಎನ್ ಸೇತುರಾಮ ಅವರ “ಉಚ್ಛಿಷ್ಟ” ನಾಟಕ, ದಿನಾಂಕ:28ರಂದು ದುಂಡಿರಾಜ್ ಅವರ “ಕಾಯುವ ಕಾಯಕ” ನಾಟಕಗಳು ನಗರದ ಲೋಕಮಾನ್ಯ ರಂಗ ಮಂದಿರದಲ್ಲಿ ಮೂರು ದಿನಗಳ ಕಾಲ ಸಂಜೆ 5:45ಕ್ಕೆ ಪ್ರದರ್ಶನಗೊಳ್ಳಲಿವೆ ಎಂದು ಹೇಳಿದರು.
ಪ್ರತಿ ವರ್ಷ ರಂಗಸಂಪದ ನೀಡುವ “ರಂಗಸಖ” ಪ್ರಶಸ್ತಿಯನ್ನು 2022ರ ಸಾಲಿಗೆ ರಂಗಕರ್ಮಿ ಪ್ರಾಚಿ ದೇಶಪಾಂಡೆ, ಬೆಂಗಳೂರು ಅವರಿಗೆ ನೀಡಲಾಗುತ್ತಿದೆ. ಅಲ್ಲದೆ ಅಂದು ಹಿರೀಯ ಕಲಾವಿದರಾದ ರವಿ ಆಚಾರ್ಯ, ರುದ್ರಾಂಬಿಕಾ ಯಾಳಗಿ, ಇವರುಗಳಿಗೆ ಸನ್ಮಾನ ಮಾಡಲಾಗುವದು ಎಂದರು.
ಅಂದು ಈ ಕಾರ‍್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ರಂಗಕರ್ಮಿ ಎಸ್.ಎನ್.ಸೇತುರಾಮ, ಆಗಮಿಸಲಿದ್ದು, ಎಲ್.ಐ.ಸಿ ಹಿರಿಯ ವಿಭಾಗಾಧಿಕಾರಿಗಳಾದ ಶ್ರೀ ಅಜೀತ ವಾರಕರಿ ಹಾಗೂ ರಂಗಕರ್ಮಿ ಮಂಜನಬೈಲು ಅವರುಗಳು ಉಪಸ್ಥಿತರಿರುವರು ಎಂದು ಹೇಳಿದರು.
ಅನಂತ ಪಪ್ಪು ಅವರು ಮಾತನಾಡಿ ಪತ್ರಿಕೆಗಳಲ್ಲಿ ನಾಟಕಗಳ ಕುರಿತು ವಿಮರ್ಶಾತ್ಮಕ ಲೇಖನಗಳು ವಿರಳವಾಗುತ್ತಿವೆ. ಮಾಧ್ಯಮ ಮಿತ್ರರು ಸಮಯಾವಕಾಶ ಮಾಡಿಕೊಂಡು ಬಂದು ನಾಟಕಗಳನ್ನು ನೋಡಿ ನಾಟಕಗಳ ಕುರಿತು ವಿಮರ್ಶೆ ಮಾಡಬೇಕೆಂದು ಕೋರಿದರು. ಅವರು ಮುಂದುವರೆದು ಮಾತನಾಡಿ ಕಳೆದ 45 ವರ್ಷಗಳಿಂದ ರಂಗಸಂಪದ ಗಡಿನಾಡಾದ ಬೆಳಗಾವಿಯಲ್ಲಿ ನಾಟಕಗಳನ್ನು ಪ್ರದರ್ಶಿಸುವ ಮೂಲಕ ರಂಗಭೂಮಿಯನ್ನು ಶ್ರೀಮಂತಗೊಳಿಸಿದೆ ಎಂದ ಅವರು ರಂಗಸAಪದ 45 ವರ್ಷಗಳ ರಂಗಭೂಮಿಯ ಸೇವೆಗೆ ಕರ್ನಾಟಕ ನಾಟಕ ಅಕ್ಯಾಡಮಿ 2021-22ರ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಗುರುನಾಥ ಕುಲಕರ್ಣಿ, ರಾಮಚಂದ್ರ ಕಟ್ಟಿ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ