Kannada NewsLatest

*ಬೆಳಗಾವಿ: ಬೀದಿ ನಾಟಕ, ಕಾಲ್ನಡಿಗೆ ಜಾಥಾ ಮೂಲಕ ಮತದಾನದ ಜಾಗೃತಿ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿಯ ವಿವಿಧೆಡೆಗಳಲ್ಲಿ ಮತದಾನದ ಬಗ್ಗೆ ವಿಶೇಷವಾಗಿ ಜಾಗೃತಿ ಅಭಿಯಾನ ನಡೆಸಲಾಯಿತು. ಜಿಲ್ಲಾ ಸ್ವೀಪ್ ಸಮಿತಿ, ತಾಲ್ಲೂಕಾ ಸ್ವೀಪ್ ಸಮಿತಿ ಹಾಗೂ ಗ್ರಾಮ ಪಂಚಾಯತಿ ವತಿಯಿಂದ ರವಿವಾರ ಏಪ್ರಿಲ್.30 ರಂದು ಕಂಗ್ರಾಳಿ ಬಿ.ಕೆ ಗ್ರಾಮದ ಚಾವಟ ವೃತದಲ್ಲಿ ಕಾಲ್ನಡಿಗೆ ಮತದಾನ ಜಾಗೃತಿ ಮತ್ತು ಬೀದಿ ನಾಟಕಕ್ಕೆ ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕರಾದ ರವಿ ಬಂಗಾರೆಪ್ಪನವರ ಅವರು ಚಾಲನೆ ನೀಡಿದರು.

ಗ್ರಾಮದ ಚಾವಟ ವೃತ್ತದಿಂದ ಸರ್ಕಾರಿ ಹಿರಿಯ ಪ್ರಾಥಮೀಕ ಶಾಲೆವರೆಗೆ ಮತದಾನ ಜಾಗೃತಿ ಜಾಥಾ ಕಾರ್ಯಕ್ರವನ್ನು ಹಮ್ಮಿಕೊಳ್ಳಲಾಯಿತು. ನಂತರ ಶಾಲೆಯ ಆವರಣದಲ್ಲಿ ಚುನಾವಣೆಯ ಕುರಿತು ಬೀದಿ ನಾಟಕ ಪ್ರದರ್ಶನ ಮಾಡಲಾಯಿತು.

ಪ್ರಜಾಪ್ರಭುತ್ವ ಹಬ್ಬ ಮೇ.೧೦ ಮತದಾನ ಎಂಬ ದ್ಯೆಯ ವಾಕ್ಯವಳಗೊಂಡಿರುವ ದ್ವಜಾರೋಹಣ ಮಾಡಲಾಯಿತು. ನಮ್ಮ ನಡೆ ಮತಕಟ್ಟೆಯ ಕಡೆಗೆ. ಪ್ರತಿ ಮತಗಟ್ಟೆಯನ್ನು ಸಾರ್ಜನಿಕರಿಗೆ ಪರಿಚಯಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು.

ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಜೇಶ ದಾನವಾಡಕರ್, ಸಹಾಯಕ ನಿರ್ದೆಶಕರಾದ (ಪ.ರಾ) ಗಣೇಶ ಕೆ.ಎಸ್., ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಜಿ.ಐ.ಬರಗಿ ಜಿಲ್ಲಾ ಐಇಸಿ ಸಂಯೋಜಕ ಪ್ರಮೋದ ಗೋಡೆಕರ್, ಜಿಲ್ಲಾ ಎಸ್.ಬಿ.ಎಂ ಸಮಾಲೋಚಕ ಬಾಹುಬಲಿ ಮೆಳವಂಕಿ, ತಾಂತ್ರಿಕ ಸಂಯೋಜಕ ನಾಗರಾಜ ಯರಗುದ್ದಿ, ತಾಲ್ಲೂಕು ಐಇಸಿ ಸಂಯೋಜಕ ರಮೇಶ ಮಾದರ, ತಾಂತ್ರಿಕ ಸಹಾಯಕರು ಹಾಗೂ ಗ್ರಾಮ ಪಂಚಾಯತ ಸಿಬ್ಬಂದಿಗಳು ಇದ್ದರು.

ಕಾಲ್ನಡಿಗೆ ಮೂಲಕ ಜಾಗೃತಿ
ಜಿಲ್ಲಾ ಸ್ವೀಪ್ ಸಮಿತಿ, ತಾಲ್ಲೂಕಾ ಸ್ವೀಪ್ ಸಮಿತಿ ಹಾಗೂ ಗ್ರಾಮ ಪಂಚಾಯತಿ ವತಿಯಿಂದ ಶನಿವಾರ ಏಪ್ರಿಲ್.೨೯ ರಂದು ಬಸ್ತವಾಡ ಗ್ರಾಮ ಪಂಚಾಯತ ಆವರಣದಲ್ಲಿ ಕಾಲ್ನನಡಿಗೆ ಮತದಾನ ಜಾಗೃತಿ ಕಾರ್ಯಕ್ರಮಕ್ಕೆ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಾದ ಹರ್ಷಲ್ ಭೊಯರ್ ಅವರು ಚಾಲನೆ ನೀಡಿದರು.

ಕರ್ನಾಟಕ ಚುನಾವಣಾ ಆಯೋಗ ನಿರ್ದೇಶನದಂತೆ ಏಪ್ರಿಲ್ ೨೯ ರಂದು ಸಾರ್ವಜನಿಕರಿಗೆ ಮತಚಲಾವಾಣೆ ಪೂರ್ವದಲ್ಲಿ ಮತಗಟ್ಟೆಗಳ ವಿಕ್ಷಣೆ ಮತ್ತು ಮತಗಟ್ಟೆಗಳ ಮಾಹಿತಿ ನೀಡುವ ಕುರಿತು ವಿಶೇಷ ಕಾರ್ಯಕ್ರಮ ಆಯೋಜಿಸಲಾಯಿತು.

ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಾದ ಹರ್ಷಲ್ ಭೊಯರ್ ಅವರು ನರೇಗಾ ಕೂಲಿ ಕಾರ್ಮಿಕರೊಂದಿಗೆ ಸಂವಾಹದ ನಡೆಸಿ ಮಾತನಾಡಿದ ಅವರು : ಗ್ರಾಮದ ಸಾರ್ವಜನಿಕರು ಮತ್ತು ನರೇಗಾ ಕಾಯಕ ಬಂದು, ಕೂಲಿ ಕಾರ್ಮಿಕರು ಎಲ್ಲರೂ ತಪ್ಪದೇ ಮೇ ೧೦ ರಂದು ಮತದಾನ ಮಾಡಬೇಕು ಎಂದು ಹೇಳಿದರು.

ಪ್ರತಿ ವರ್ಷವು ಬೆಳಗಾವಿ ತಾಲ್ಲೂಕಿನಲ್ಲಿ ನರೇಗಾ ಕಾಮಗಾರಿ ಕೆಲಸಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಕೂಲಿ ಕಾರ್ಮಿಕರು ಭಾಗವಹಿಸುತ್ತಿದ್ದು, ಪ್ರಸಕ್ತ ಸಾಲಿನ ನರೇಗಾ ಕಾಮಗಾರಿಯಲ್ಲಿ ಭಾಗವಹಿಸಿ ನರೇಗಾ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.

ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕರಾದ ರವಿ ಬಂಗಾರೆಪ್ಪನವರ, ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಜೇಶ ದಾನವಾಡಕರ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಶ್ವೇತಾ ಡಿ.ಆರ್ , ಜಿಲ್ಲಾ ಐಇಸಿ ಸಂಯೋಜಕ ಪ್ರಮೋದ ಗೋಡೆಕರ್, ಜಿಲ್ಲಾ ಎಸ್.ಬಿ.ಎಂ ಸಮಾಲೋಚಕ ಬಾಹುಬಲಿ ಮೆಳವಂಕಿ, ತಾಲ್ಲೂಕು ಐಇಸಿ ಸಂಯೋಜಕ ರಮೇಶ ಮಾದರ, ತಾಂತ್ರಿಕ ಸಹಾಯಕಿ ಶ್ರೀಮತಿ ಜ್ಯೊತಿ ಯರಗುದ್ದಿ, ಗ್ರಾಮ ಪಂಚಾಯತ ಸಿಬ್ಬಂದಿಗಳು ಇದ್ದರು.

ಮತದಾರರ ನಡೆ ಮತಗಟ್ಟೆ ಕಡೆ
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನಲ್ಲಿ ತಾಲೂಕಾ ಸ್ವೀಪ್ ಸಮೀತಿ ಹಾಗೂ ತಾಲೂಕಾ ಆಡಳಿತದ ವತಿಯಿಂದ ನಗರದ ಕ್ಷೇತ್ರ ಸಮನ್ವಾಯಾಧಿಕಾರಿಗಳ ಕಾರ್ಯಲಯದ ಮತಗಟ್ಟೆ ಸಂಖ್ಯೆ ೭೧ ರ “ಸಖಿ ಮತಗಟ್ಟೆ” ಯಲ್ಲಿ ೧೦-ಮೇ ಪ್ರಜಾಪ್ರಭುತ್ವದ ಹಬ್ಬವನ್ನು ಮತದಾರರ ನಡೆ ಮತಗಟ್ಟೆಯ ಕಡೆ ಯ ಕಾರ್ಯಕ್ರಮದಡಿಯಲ್ಲಿ ಧ್ವಜಾರೋಹಣ ಕಾರ್ಯಕ್ರಮವನ್ನು ಎಪೀಲ್ .೩೦ ೨೦೨೩ ರಂದು ಮುಂಜಾನೆ ೮ ಗಂಟೆಗೆ ತಾಲೂಕಾ ಸ್ವೀಪ್ ಅಧ್ಯಕ್ಷರು ಹಾಗೂ ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ತಾಲೂಕಾ ಸ್ವೀಪ್ ಸಮೀತಿ ಅಧ್ಯಕ್ಷರಾದ ಶ್ರೀ ಸುಭಾಷ್ ಎಸ್ ಸಂಪಗಾAವಿ ರವರು ಧ್ವಜಾರೋಹಣವನ್ನು ನೇರವೆರಿಸಿದರು. ೧೬- ಬೈಲಹೊಂಗಲ ಮತಕ್ಷೇತ್ರದ ಎಲ್ಲಾ ಮತಗಟ್ಟೆಯಲ್ಲಿ ಧ್ವಜಾರೋಹಣ ಕಾರ್ಯಕ್ರಮವನ್ನು ಪ್ರಜಾಪ್ರಭುತ್ವದ ಹಬ್ಬದಂತೆ ಆಚರಣೆ ಮಾಡಲಾಗಿದೆ ಅದರಂತೆ ಎಲ್ಲಾ ಮತದಾರ ಭಾಂದವರು ತಪ್ಪದೆ ಮತದಾನ ದಿನ ಮೇ-೧೦ ರಂದು ಮತಗಟ್ಟೆಗೆ ಹೋಗಿ ತಮ್ಮ ಅಮೂಲ್ಯವಾದ ಮತವನ್ನು ಚಾಲಾಯಿಸುವ ಮೂಲಕ ಪ್ರಜಾಪ್ರಭುತ್ವದ ಹಕ್ಕು ಮತ್ತು ಕರ್ತವ್ಯವನ್ನು ನಿಭಾಯಿಸುಂತೆ ಕರೆ ನೀಡಿದರು.

ತದನಂತರ, ಧ್ವಜಾರೋಹಣ ನೇರವೆರಿಸಿ ತಾಲೂಕಾ ಪಂಚಾಯತ ಬೈಲಹೊಂಗಲದವರೆಗೆ ಕಾಲು ನಡೆಗೆ ಜಾಥಾ ಹಾಗೊ ಘೋಷವಾಕ್ಯಗಳನ್ನು ಕುಗುತ್ತಾ ಮತ್ತು ಮುದ್ದು ವಿದ್ಯಾರ್ಥಿಗಳಿಂದ ಭರತ್ಯನಾಟ್ಯ ವನ್ನು ಮಾಡುವ ಮೂಲಕ ಹಾಗೂ ರೈತಗೀತೆಯನ್ನು ಹಾಡುವ ಮೂಲಕ ಕಾರ್ಯಕ್ರಮಕ್ಕೆ ಮೇರಗನ್ನು ತರಲಾಯಿತು.

ತಾಲೂಕಾ ಸಹಾಯಕ ಚುನಾವಣಾಧಿಕಾರಿ ಸಂಗಮೇಶ ಮೇಳ್ಳಿಗೇರಿ, ವಿರೇಶ ಹಸಬಿ ಪುರಸಭೆ ಮುಖ್ಯಾಧಿಕಾರಿ, ಎಸ್ ಎಸ್ ಸಿದ್ಧಣ್ಣವರ ತಾಲೂಕಾ ಆರೋಗಾಧಿಕಾರಿ, ವಿಜಯ ಪಾಟೀಲ, ಕಮಲಾ ಬಸರಗಿ,ಬಿ ಎನ್ ಕಸಾಳೆ, ಎಸ್ ಎಸ್ ಅರಳಿಕಟ್ಟಿ, ಎಮ್ ಎ ಇಂಚಲಮಠ, ಮೇಳಂಕಿ, ಪೆಂಡಾರಿ, ತಾಲೂಕಿನ ಬಿ.ಆರ್ ಪಿ. ಮತ್ತು ಸಿ ಆರ್ ಪಿ ಗಳು ಐ.ಇ.ಆರ್ ಟಿ ಗಳು, ಬಿ ಎಲ್ ಓ ಗಳು ಆಶಾ/ಅಂಗನವಾಡಿ ಪುರಸಭೆ ಸಿಬ್ಬಂದಿಗಳು ಹಾಗೂ ಭರತನಾಟ್ಯ ವಿದ್ಯಾರ್ಥಿಗಳು ಲಕ್ಷ್ಮೀ ಹಿರೇಮಠ, ಅನನ್ಯಾ ಶೇಟ್ಟಿ, ಆರಾಧ್ಯ, ಯಶಸ್ವಿನಿ, ರೈತ ಗೀತೆ ಕುಮಾರ ಕಡೆಮನಿ, ನಿರೂಪಣೆ, ಎಸ್ ಬಿ ಸಂಗನಗೌಡರ ಪ್ರತಿಜ್ಞಾ ವಿಧಿ ಎಸ್ ವ್ಹಿ ಹಿರೇಮಠ ಸ್ವಾಗತ ಬಿ ಕೆ ಹರಿಜನ ವಂದನಾರರ್ಪಣೆ ಅಜ್ಜಪ್ಪ ಅಂಗಡಿ ನೆರೆವರೆಸಿದರು.

ನೈತಿಕ ಮತದಾನಕ್ಕೆ ಕರೆ
ಆಸೆ ಆಮಿಷಗಳಿಗೆ ಬಲಿಯಾಗದೇ ನೈತಿಕ ಮತದಾನ ಮಾಡುವಂತೆ ಕಾಗವಾಡ ಚುನಾವಣಾ ಅಧಿಕಾರಿ ಹರೀಶ ಬಿಕೆ ಹೇಳಿದರು.

ಕಾಗವಾಡ ಪಟ್ಟಣ ಪಂಚಾಯತ ಕಚೇರಿ ಆವರಣದಲ್ಲಿ “ನಮ್ಮ ನಡೆ ಮತಗಟ್ಟೆ ಕಡೆ” ಪ್ರಜಾಪ್ರಭುತ್ವ ಹಬ್ಬ ಅಭಿಯಾನ ಹಿನ್ನೆಲೆಯಲ್ಲಿ ರವಿವಾರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ತಹಶೀಲ್ದಾರ್ ಎಂ ಎನ್ ಬಳಿಗಾರ ಮಾತನಾಡಿ, ಪ್ರತಿಯೊಬ್ಬ ಯುವ ಮತದಾರರು ಕೂಡ ಕಡ್ಡಾಯವಾಗಿ ಮೇ ೧೦ ರಂದು ಮತದಾನ ಮಾಡಬೇಕು. ಈ ಬಾರಿ ಮತದಾನದ ವೇಳೆ ವಿಶೇಷ ಚೇತನರು, ವೃದ್ದರಿಗೆ ವಿಶೇಷ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಬಳಿಕ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಾರ್ವಜನಿಕರಿಗೆ ಮತದಾನದ ಕುರಿತು ಅರಿವು ಮೂಡಿಸಲಾಯಿತು. ಅಲ್ಲದೇ ಜುಗೂಳ, ಮಂಗಸೂಳಿ, ಮೋಳೆ,ಉಗಾರ ಬಿಕೆ, ಕುಸನಾಳ ಸೇರಿದಂತೆ ಕಾಗವಾಡ ಮತಕ್ಷೇತ್ರ ವ್ಯಾಪ್ತಿಯ ಪ್ರತಿ ಮತಗಟ್ಟೆ ಆವರಣದಲ್ಲಿಯೂ ಕೂಡ ಧ್ವಜಾರೋಹಣ ನೆರವೇರಿಸಲಾಯಿತು.

ತಾಪಂ ಸಹಾಯಕ ನಿರ್ದೇಶಕರಾದ ಗೋಪಾಲ ಮಾಳಿ, ವೈ ಪಿ ಬೋಳಶೆಟ್ಟಿ, ಆದಿನಾಥ ಚೌಗಲೇ, ಸತೀಶ, ಬಿಎಲ್ ಒ, ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಆಶಾ, ಅಂಗವಾಡಿ ಕಾರ್ಯಕರ್ತರು ಭಾಗಿಯಾಗಿದ್ದರು.

https://pragati.taskdun.com/vidhanasabha-electionvijayapurajdscandidatecongress-supportyatnal/


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button