Kannada NewsLatest

50 ಹೊಸ ವಾಲ್ ಮನ್ ಗಳ ಭರ್ತಿ; ನಿವೃತ್ತಿ ಹೊಂದಿದ ವಾಲ್ ಮನ್ ಗಳ ಸಹಾಯದಿಂದ ನೀರು ಸರಬರಾಜು

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕಳೆದ ಒಂದು ವಾರಗಳಿಂದ ಬೆಳಗಾವಿ ನಗರದಲ್ಲಿ ನೀರು ಸರಬರಾಜು ಮಾಡುವ ವಾಲ್‌ಮನ್‌ಗಳ ಧರಣಿ ಹಿನ್ನೆಲೆಯಲ್ಲಿ ನಗರದಲ್ಲಿ ನೀರು ಸರಬರಾಜಿನಲ್ಲಿ ತೀರ್ವ ಸಮಸ್ಯೆ ಆಗುತ್ತಿರುವುದನ್ನು ಮನಗಂಡು ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆರವರು ಶುಕ್ರವಾರ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಪಾಲಿಕೆ ಆಯುಕ್ತರು, ಜಲಮಂಡಳಿ ಅಧಿಕಾರಿಗಳು, ಎಲ್. & ಟಿ ಅಧಿಕಾರಿಗಳೊಡನೆ ಹಾಗೂ ನಗರ ಸೇವಕರ ಜೊತೆಗೆ ಮಹತ್ವದ ಸಭೆಯನ್ನು ನಡೆಸಿದರು.

ಈ ವೇಳೆ ಮಾತನಾಡಿದ ಶಾಸಕ ಅನಿಲ ಬೆನಕೆ ರವರು ಉತ್ತರ ಮತಕ್ಷೇತ್ರದಲ್ಲಿ ನೀರಿನ ಸಮಸ್ಯೆ ಆಗಬಾರದು ಎಂದು ನಗರ ಸೇವಕರು, ಪಾಲಿಕೆ ಆಯುಕ್ತರು, ಜಲಮಂಡಳಿ ಅಧಿಕಾರಿಗಳು, ಎಲ್. & ಟಿ ಅಧಿಕಾರಿಗಳೊಡನೆ ಹಾಗೂ ನಗರ ಸೇವಕರ ಜೊತೆಗೆ ಒಂದು ಮಹತ್ವದ ಸಭೆ ಮಾಡಿದ್ದೇವೆ. ನೀರು ಒಂದು ಜೀವನದ ಮಹತ್ವದ ಭಾಗವಾಗಿರುವುದರಿಂದ ಮುಷ್ಕರದಲ್ಲಿ ಪಾಲ್ಗೊಳ್ಳದ ವಾಲ್‌ಮನ್‌ಗಳನ್ನು ಹೊರತು ಪಡಿಸಿ ಆಯಾ ವಾರ್ಡಿನಲ್ಲಿ ನಿವೃತ್ತಿ ಹೊಂದಿದ ವಾಲ್‌ಮನ್‌ಗಳ ಸಹಾಯದೊಂದಿಗೆ ನಗರದಲ್ಲಿ ನೀರು ಸರಬರಾಜು ಆಗುವಂತೆ ನೋಡಿಕೊಂಡು ಒಂದು ನಿಶ್ಚಿತ ರೂಪುರೇಷೆಯನ್ನು ಹಾಕಲಾಗಿದೆ ಎಂದರು.

ನಿವೃತ್ತ ವಾಲ್‌ಮನ್‌ಗಳನ್ನು ಸಂಪರ್ಕಿಸಿ ಅವರನ್ನು ಹಾಗೂ ಇವರುಗಳ ಜೊತೆಗೆ 50 ಜನ ಹೊಸ ವಾಲ್‌ಮನ್‌ಗಳ ಭರ್ತಿಯನ್ನು ಮಾಡಿಕೊಂಡು ಅವರಿಗೆ ಇಂದೇ ತರಬೇತಿಯನ್ನು ನೀಡಿ ನಾಳೆಯಿಂದ ಅವರನ್ನು ವಿವಿಧ ಭಾಗದಲ್ಲಿ ನೀರು ಸರಬರಾಜು ಮಾಡುವ ಕರ್ತವ್ಯಕ್ಕೆ ಹಾಜರು ಪಡಿಸುವಂತೆ ಸಭೆಯಲ್ಲಿ ನಿರ್ದರಿಸಲಾಗಿದೆ ಎಂದರು.

ನಂತರದಲ್ಲಿ ಮಾತನಾಡಿದ ಅವರು ನಗರದಲ್ಲಿ ಯಾವುದೇ ಕಾರಣಕ್ಕೂ ನೀರಿನ ಸಮಸ್ಯೆ ಆಗದಂತೆ ನೋಡಿಕೊಂಡು ಉತ್ತರ ಮತಕ್ಷೇತ್ರದಲ್ಲಿ ಬರುವ ಎಲ್ಲ ಬೋರವೆಲ್‌ಗಳಿಂದ ಸುಗಮವಾಗಿ ನೀರು ಸರಬರಾಜು ಆಗುವಂತೆ ನೋಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರಲ್ಲದೆ ಮತಕ್ಷೇತ್ರದ ಎಲ್ಲ ಚುನಾಯಿತ ನಗರ ಸೇವಕರು ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು ಹಾಗೂ ಅವರ ಎಲ್ಲ ಸಮಸ್ಯೆಗಳನ್ನು ಆಲಿಸಿ ಸ್ಥಳದಲ್ಲಿಯೇ ಸೂಕ್ತ ಪರಿಹಾರ ಒದಗಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದರು.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಆಯುಕ್ತರು ಮುಷ್ಕರದಲ್ಲಿ ಪಾಲ್ಗೊಂಡ ವಲ್‌ಮನ್‌ಗಳು ಸರಿಯಾಗಿ ಸ್ಪಂದಿಸದಿರುವುದರಿAದ ಹಾಗೂ ಅವರ ಅಸಹಕಾರದಿಂದ ನಗರದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಶಾಸಕ ಅನಿಲ ಬೆನಕೆ, ಮಹಾನಗರ ಪಾಲಿಕೆ ಆಯುಕ್ತ ರುದ್ರೇಶ ಘಾಳಿ, ಜಲಮಂಡಳಿ ಅಧಿಕಾರಿಗಳು, ಎಲ್. & ಟಿ ಕಂಪನಿ ಮ್ಯಾನೇಜರ ಹಾರ್ದಿಕ ದೇಸಾಯಿ, ನಗರ ಸೇವಕರು ಉಪಸ್ಥಿತರಿದ್ದರು.
ಯಡೂರಿನ ಇತಿಹಾಸ ಪ್ರಸಿದ್ಧ ಶ್ರೀ ವೀರಭದ್ರೆಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಸಚಿವೆ ಶಶಿಕಲಾ ಜೊಲ್ಲೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Check Also
Close
Back to top button