Latest

ಹೆಚ್ಚಿದ ಶುಗರ್, ದೇಹದ ತೂಕ?; ಪ್ರಕೃತಿ ಚಿಕಿತ್ಸೆಗೆ ತೆರಳಲು ಮುಂದಾದ ಸಿದ್ದರಾಮಯ್ಯ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ಆಗಸ್ಟ್ 21ರಿಂದ ಜಿಂದಾಲ್ ಪ್ರಕೃತಿ ಚಿಕಿತ್ಸಾ ಕೇಂದ್ರಕ್ಕೆ ತೆರಳಲಿದ್ದಾರೆ ಎನ್ನಲಾಗಿದೆ. ಈ ಮೂಲಕ ಹತ್ತು ದಿನಗಳ ಕಾಲ ವಿಶ್ರಾಂತಿ ಪಡೆಯಲಿದ್ದಾರೆ.

ಕಳೆದ ಒಂದು ವರ್ಷದಿಂದ ಹಲವು ಬಾರಿ ಜಿಂದಾಲ್ ಪ್ರಕೃತಿ ಚಿಕಿತ್ಸೆಗೆ ಹೋಗಲು ನಿರ್ಧರಿಸಿದ್ದರೂ ನಾನಾ ಕಾರಣಗಳಿಂದ ಹೋಗಲು ಸಾಧ್ಯವಾಗಿಲ್ಲ. ಕೊರೊನಾ ಸೋಂಕು, ಚುನಾವಣಾ ಸಿದ್ಧತೆ, ಪಕ್ಷದ ಕಾರ್ಯಕ್ರಮಗಳಲ್ಲೇ ಬ್ಯುಸಿಯಾಗಿದ್ದ ಸಿದ್ದರಾಮಯ್ಯ ಈಗ ಪ್ರಕೃತಿ ಚಿಕಿತ್ಸೆ ಮೊರೆ ಹೋಗಲು ಮುಂದಾಗಿದ್ದಾರೆ.

ಪೋಸ್ಟ್ ಕೋವಿಡ್ ಸಮಸ್ಯೆಯಿಂದ ಬಳಲುತ್ತಿರುವ ಸಿದ್ದರಾಮಯ್ಯ ನವರಿಗೆ ಈ ಮೊದಲು ದೇಹದ ಶುಗರ್ ಲೆವಲ್ ಕಂಟ್ರೋಲ್ ನಲ್ಲಿತ್ತು. ಆದರೆ ಕೋವಿಡ್ ಚಿಕಿತ್ಸೆ ಬಳಿಕ ಶುಗರ್ ನಿಯಂತ್ರಣಕ್ಕೆ ಬರುತ್ತಿಲ್ಲ ಎನ್ನಲಾಗಿದೆ. ಅಲ್ಲದೇ ತೂಕ ಹೆಚ್ಚಳ ಸಮಸ್ಯೆಯಿಂದಲೂ ಚಿಂತಿತರಾಗಿದ್ದಾರೆ ಎನ್ನಲಾಗಿದೆ. ಪಕ್ಷದ ಕಾರ್ಯಕ್ರಮ, ಜಿಲ್ಲಾ ಪ್ರವಾಸಗಳ ನಡುವೆಯೇ ಈಗ ಬಿಡುವು ಮಾಡಿಕೊಂಡು ಪ್ರಕೃತಿ ಚಿಕಿತ್ಸೆಗೆ ತೆರಳಲಿದ್ದಾರೆ.

ಮಾತೃಭಾಷೆಯ ಮಹತ್ವ ಅರಿತ ಸಮುದಾಯ ಶ್ರೀಮಂತವಾಗಿ ಬೆಳೆಯುತ್ತದೆ :  ಬಸವರಾಜ ಬೊಮ್ಮಾಯಿ

Home add -Advt

Related Articles

Back to top button