ಪ್ರಗತಿವಾಹಿನಿ ಸುದ್ದಿ: ಎರಡು ವಿವಾಹವಾಗಿದ್ದರೂ ಮಹಿಳೆಯೊಬ್ಬರು ಯುವಕನೊಂದಿಗೆ ಪ್ರೇಮದಲ್ಲಿ ಬಿದ್ದಿರುವ ಆರೋಪ ಕೇಳಿಬಂದಿದೆ. ಪ್ರಿಯತಮೆ ನೋಡಲೆಂದು ಮನೆಗೆ ಬಂದ ಯುವಕನ ಮೇಲೆ ಮಹಿಳೆ ಪತಿಯೊಂದಿಗೆ ಸೇರಿ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಶೋಭಾ ಎಂಬ ಮಹಿಳೆ ಅದಾಗಲೇ ಎರಡು ಮದುವೆಯಾಗಿದ್ದು, 2ನೇ ಪತಿಯೊಂದಿಗೆ ವಾಸವಾಗಿದ್ದಾಳೆ. ಆದರೆ ಒಂದೂವರೆ ವರ್ಷದಿಂದ ಆನಂದ್ ಎಂಬ ಯುವಕನ ಜೊತೆ ಮತ್ತೆ ಪ್ರೀತಿ-ಪ್ರೇಮದಲ್ಲಿ ಬಿದ್ದಿದ್ದು, ಇತ್ತೀಚೆಗೆ ಯುವಕನ ಕರೆ ಸ್ವೀಕರಿಸದೇ ನಿರ್ಲಕ್ಷ್ಯ ಮಾಡಿದ್ದಾಳೆ. ಯುವಕ ಆನಂದ್ ಬೆಂಗಳೂರಿನಲ್ಲಿ ಕೆಲಸ ಮಾಡುತಿದ್ದ. ಕಳೆದ 15 ದಿನಗಳಿಂದ ಆನಂದ್ ಕರೆಯನ್ನು ಶೋಭಾ ಸ್ವೀಕರಿಸುತ್ತಿರಲಿಲ್ಲ, ನಿರ್ಲಕ್ಷ್ಯ ಮಾಡಿದ್ದಳಂತೆ.
ಇದರಿಂದ ನಿನ್ನೆ ರಾತ್ರಿ ಬೆಂಗಳೂರಿನಿಂದ ನೇರವಾಗಿ ಬೆಳಗಾವಿಯ ಶೋಭಾ ಮನೆಗೆ ಆನಂದ್ ಬಂದಿದ್ದಾನೆ. ಶೋಭಾ ತನ್ನ ಎರಡನೇ ಪತಿ ಮಂಜುನಾಥ್ ಜೊತೆ ಇರುವುದನ್ನು ಕಂಡು ಆನಂದ್ ಶಾಕ್ ಆಗಿದ್ದಾನೆ. ಇದರಿಂದ ಸಿಟ್ಟಿಗೆದ್ದ ಆನಂದ್ ಚಾಕುವಿನಿಂದ ಶೋಭಾಳ ಕೈಗೆ ಇರಿದಿದ್ದಾನೆ. ಆನಂದ್ ಕೈಲಿದ್ದ ಚಾಕುವನ್ನು ಕಸಿದುಕೊಂಡ ಶೋಭಾ ಹಾಗೂ ಆಕೆ ಪತಿ ಮಂಜುನಾಥ್ ಆನಂದ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲಿಸರು ಆನಂದ್ ನನ್ನು ರಕ್ಷಿಸಿ ಬೆಳಗಾವಿ ವೈದ್ಯಕೀಲ ಕಾಲೇಜು ಐಸಿಯುಗೆ ದಾಖಲಿಸಿದ್ದಾರೆ.
ಆನಂದ್ ನಿಂದ ಹಲ್ಲೆಗೊಳಗಾದ ಶೋಭಾಳನ್ನು ಗೋಕಾಕ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗೋಕಾಕ್ ಟೌನ್ ಪೊಲೀಸ್ ಠಾಣೆಯಲ್ಲಿ ದೂರು, ಪ್ರತಿದೂರು ದಾಖಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ