Kannada NewsLatest

ಯಡೂರು ಶ್ರೀ ವೀರಭದ್ರ ದೇವಸ್ಥಾನದ ವಿಶಾಳಿ ಮಹಾರಥೋತ್ಸವ

ಪ್ರಗತಿವಾಹಿನಿ ಸುದ್ದಿ; ಚಿಕ್ಕೋಡಿ:ಕರ್ನಾಟಕ ಮತ್ತು ಮಹಾರಾಷ್ಟ್ರಾಜ್ಯದ ಹಲವಾರು ಭಕ್ತಾದಿಗಳ ಆರಾಧ್ಯ ದೈವರಾದ ಚಿಕ್ಕೋಡಿ ತಾಲೂಕಿನ ಯಡೂರು ಗ್ರಾಮದ ಶ್ರೀ ವೀರಭದ್ರ ದೇವಸ್ಥಾನದ ವಿಶಾಳಿ ಮಹಾರಥೋತ್ಸವನ್ನು ಇಂದು ಶ್ರೀಶೈಲ ಪೀಠದ ಜಗದ್ಗುರು ಹಾಗೂ ಯಡೂರಿನ ಕಾಡಸಿದ್ಧೇಶ್ವರ ಸಂಸ್ಥಾನಮಠ , ವೀರಭದ್ರ ದೇವಸ್ಥಾನದ ಧರ್ಮಾಧಿಕಾರಿಗಳಾದ ಡಾಕ್ಟರ್ ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ದಿವ್ಯ ಸಾನಿಧ್ಯದಲ್ಲಿ ಲಕ್ಷಾಂತರ ಭಕ್ತರ ಉಪಸ್ಥಿತಿಯಲ್ಲಿ ಜರಗಿತು

ದೇಶದಲ್ಲಿ ಉಲ್ಬಣವಾಗಿರುವ ಕೊರೋನ ಮಹಾಮಾರಿ ನಿರ್ಬಂಧಕ್ಕೆ ರಾಜ್ಯ ಸರಕಾರ ನೀಡುವ ಸಲಹೆ ಹಾಗೂ ನಿಯಮಾನುಸಾರ ಇಂದು ಸಾಯಂಕಾಲ ಯಡೂರಿನ ವೀರಭದ್ರ ದೇವಸ್ಥಾನದ ವಿಶಾಳಿ ಮಹಾರಥೋತ್ಸವನ್ನು ಜರುಗಿತು.

ವಿಧಾನ ಪರಿಷತ್ತಿನ ಮಾಜಿ ಸದಸ್ಯ ಹಾಗೂ ಕೆಎಲ್ ಇ ಶಿಕ್ಷಣ ಸಂಸ್ಥೆಯ ನಿರ್ದೇಶಕ ಮತ್ತು ಚಿದಾನಂದ ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯ ನಿರ್ದೇಶಕರಾದ ಮಹಾಂತೇಶ ಕವಟಗಿಮಠ ಪಂಡರಪುರದ ಗಹಿನಿನಾಥ ಮಹಾರಾಜ ಮತ್ತು ರಬಕವಿ ಬನಹಟ್ಟಿ ಜಮಖಂಡಿ ಶಹಾಪೂರ್ ಅಂಬಿಕಾನಗರ ಹೂಲಿ ಬೆಳ್ಳಂಕಿ ಮಠದ ಶಿವಾಚಾರ್ಯ ಸ್ವಾಮೀಜಿಗಳ ದಿವ್ಯ ಉಪಸ್ಥಿತಿಯಲ್ಲಿ ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷರಾದ ವೈ ಎಸ್ ಪಾಟೀಲ್ ಮತ್ತು ಮಾಜಿ ಅಧ್ಯಕ್ಷರಾದ ಸದಾಶಿವ ಡಂಗಣವರ್ ಅವರ ಉಪಸ್ಥಿತಿಯಲ್ಲಿ ಶ್ರೀಶೈಲ ಜಗದ್ಗುರುಗಳಾದ ಡಾ ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.

ಮಹಾರಥೋತ್ಸವಕ್ಕೆ ಹಲವಾರು ಭಕ್ತಾದಿಗಳು ಮಹಾರಥೋತ್ಸವ ಮೆಲೆ ಬಾಳೆ ಕೊಬ್ಬರಿ ಖಾರೀಕು ಎಸೆದು ತಮ್ಮ ಹರಕೆಯನ್ನು ತೀರಿಸಿದರು ಮಹಾರಥೋತ್ಸವ ಮುಂದೆ ಇಂದು ಪುರವಂತರು ತಮ್ಮ ಕಲೆಗಳನ್ನು ಪ್ರದರ್ಶಿಸುವ ಮುಖಾಂತರ ಭಕ್ತರನ್ನು ಆಕರ್ಷಣೆ ಮಾಡಲಾಯಿತು ಇಂದು ನಡೆದ ಮಹಾರಥೋತ್ಸವದಲ್ಲಿ ಯಾವುದೇ ಅನಾಹುತ ಅಹಿತಕರ ಘಟನೆ ನಡೆಯಬಾರದೆಂದು ಅಲ್ಲಲ್ಲಿ ಪೊಲೀಸ್ ಠಾಣೆಯ ಸಿಬ್ಬಂದಿಗಳು ಸೂಕ್ತ ಪೋಲೀಸ್ ಬಂದೋಬಸ್ತನ್ನು ಏರ್ಪಡಿಸಲಾಗಿತ್ತು.

2nd ಪಿಯು ಮಾದರಿ ಪ್ರಶ್ನೆ ಪತ್ರಿಕೆ ಬಿಡುಗಡೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button