Belagavi NewsBelgaum NewsKarnataka News
*ಬೆಳಗಾವಿಯಲ್ಲಿ ಘೋರ ದುರಂತ: ಕೆಲಸದಿಂದ ತೆಗೆದಿದ್ದಕ್ಕೆ ನೊಂದ ಯುವಕ ಆತ್ಮಹತ್ಯೆ*

ಪ್ರಗತಿವಾಹಿನಿ ಸುದ್ದಿ: ಕೆಲಸದಿಂದ ತೆಗೆದಿದ್ದಕ್ಕೆ ಮನನೊಂದ ಯುವಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಮೊದಗಾ ಗ್ರಾಮದ ನಿವಾಸಿ ರವಿ ವೀರನಗೌಡ ಹಟ್ಟಿಹೊಳಿ (24) ಆತ್ಮಹತ್ಯೆಗೆ ಶರಣಾದ ಯುವಕ. ಎಂಸಿಎ ಪದವೀಧರನಾಗಿದ್ದ ರವಿ ಹಟ್ಟಿಹೊಳಿ, ಕಳೆದೊಂದು ವರ್ಷದಿಂದ ಪುಣೆಯ ಗ್ಲೋಬಲ್ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ.
ಕಂಪನಿಯವರು 15 ದಿನಗಳ ಹಿಂದೆ ಕೆಲಸದಿಂದ ತೆಗೆದಿದ್ದರು. ಇದರಿಂದ ಮನನೊಂದು ಸ್ವಗ್ರಾಮಕ್ಕೆ ಬಂದಿದ್ದ ರವಿ ಮಾನಸಿಕವಾಗಿ ಕುಗ್ಗಿದ್ದರು. ಕೆಲಸ ಹೋಗಿದ್ದಕ್ಕೆ ಮನನೊಂದ ರವಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಘಟನಾ ಸ್ಥಳಕ್ಕೆ ಮಾರಿಹಾಳ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.