ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಜಿಲ್ಲಾಡಳಿತ, ಬೆಳಗಾವಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಫೆ ೨೮ ಮತ್ತು ೨೯ ರಂದು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಬೆಳವಡಿ ಗ್ರಾಮದಲ್ಲಿ ಬೆಳವಡಿ ಮಲ್ಲಮ್ಮನ ಉತ್ಸವ ನಡೆಯಲಿದೆ.
ಫೆ.೨೮ ರಂದು ಸಂಜೆ ೭ ಗಂಟೆಗೆ ವೇದಿಕೆ ಕಾರ್ಯಕ್ರಮ ನಡೆಯಲಿದ್ದು, ಬೆಳವಡಿ ಸಂಸ್ಥಾನದ ರಾಜಗುರುಗಳು, ಹೂಲಿ ಹಿರೇಮಠದ ಶ್ರೀ ಶಿವಮಹಾಂತ ಶಿವಾಚಾರ್ಯ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಲಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲಿಕರಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರು ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ತಂಗಡಗಿ ಶಿವರಾಜ್ ಸಂಗಪ್ಪ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ ಅಧ್ಯಕ್ಷರು ಹಾಗೂ ಬೈಲಹೊಂಗಲ ಶಾಸಕರಾದ ಮಹಾಂತೇಶ ಎಸ್. ಕೌಜಲಗಿ ಅವರು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.
ವಿಧಾನಸಭೆ ಸರ್ಕಾರಿ ಮುಖ್ಯ ಸಚೇತಕರಾದ ಅಶೋಕ ಪಟ್ಟಣ, ಕರ್ನಾಟಕ ಸರ್ಕಾರದ ನವದೆಹಲಿ ವಿಶೇಷ ಪ್ರತಿನಿಧಿ-೨ ಪ್ರಕಾಶ ಹುಕ್ಕೇರಿ, ವಾಯವ್ಯ ಸಾರಿಗೆ ನಿಗಮ ನಿಯಮಿತ ಅಧ್ಯಕ್ಷರು ಹಾಗು ಕಾಗವಾಡ ಶಾಸಕರಾದ ಭರಮಗೌಡ ಕಾಗೆ, ಆಮಂತ್ರಣರಾಗಿ ಆಗಮಿಸಲಿದ್ದಾರೆ.
ಉತ್ತರ ಕನ್ನಡ ಸಂಸದರಾದ (ಲೋಕ ಸಭೆ) ಅನಂತಕುಮಾರ ಹೆಗಡೆ, ಚಿಕ್ಕೋಡಿ ಸಂಸದರಾದ (ಲೋಕ ಸಭೆ) ಅಣ್ಣಾಸಾಹೇಬ ಜೊಲ್ಲೆ, ಸಂಸದಾರದ (ರಾಜ್ಯ ಸಭೆ) ಈರಣ್ಣ ಕಡಾಡಿ, ಬೆಳಗಾವಿ ಸಂಸದರಾದ (ಲೋಕ ಸಭೆ) ಮಂಗಲ ಸುರೇಶ ಅಂಗಡಿ ಗೌರವಾನ್ವಿತ ಅಥಿತಿಗಳಾಗಿ ಆಗಮಿಸಲಿದ್ದಾರೆ.
ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ ಅಧ್ಯಕ್ಷರು ಹಾಗೂ ಬೈಲಹೊಂಗಲ ಶಾಸಕರಾದ ಮಹಾಂತೇಶ ಎಸ್. ಕೌಜಲಗಿ ಅವರು ವೀರರಾಣಿ ಬೆಳವಡಿ ಮಲ್ಲಮ್ಮ ವೃತ್ತದಲ್ಲಿ ಫೆ ೨೮ ರಂದು ಬೆಳಿಗ್ಗೆ ೧೦ ಗಂಟೆಗೆ ಬೆಳವಡಿ ಸಂಸ್ಥಾನದ ಮಲ್ಲಮ್ಮನ ವಿಜಯ ಜ್ಯೋತಿಯನ್ನು ಬರಮಾಡಿಕೊಂಡು ಬಳಿಕ ಧ್ವಜಾರೋಹಣ ನೆರವೇರಿಸದ್ದಾರೆ.
ಬೆಳಿಗ್ಗೆ ೧೦-೧೫ ಗಂಟೆಗೆ ವೀರರಾಣಿ ಬೆಳವಡಿ ಮಲ್ಲಮ್ಮ ವೃತ್ತದಲ್ಲಿ ಜಾನಪದ ಕಲಾವಾಹಿನಿ ಉದ್ಘಾಟನೆಯನ್ನು ಬೆಳಗಾವಿ ಸಂಸದೆ ಮಂಗಲ ಸುರೇಶ ಅಂಗಡಿ ಉದ್ಘಾಟಿಸಲಿದ್ದಾರೆ. ಮುಖ್ಯ ವೇದಿಕೆ ಎಡ ಭಾಗದಲ್ಲಿ ಬೆಳಿಗ್ಗೆ ೧೦.೩೦ ಗಂಟೆಗೆ ಬೈಲಹೊಂಗಲ ಶಾಸಕ ಮಾಹಂತೇಶ ಕೌಜಲಗಿ ಅವರು ವಸ್ತು ಪ್ರದರ್ಶನ ಉದ್ಘಾಟನೆ ಮಾಡಲಿದ್ದಾರೆ.
ಪುಸ್ತಕ ಬಿಡುಗಡೆ:
ವೀರರಾಣಿ ಬೆಳವಡಿ ಮಲ್ಲಮ್ಮ ವೆಧಿಕೆಯಲ್ಲಿ ಸಂಜೆ ೭ ಗಂಟೆಗೆ ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ತಂಗಡಗಿ ಶಿವರಾಜ್ ಸಂಗಪ್ಪ ಅವರು ಪುಸ್ತಕ ಬಿಡುಗಡೆ ಮಾಡಲಿದ್ದಾರೆ.
ಪ್ರಶಸ್ತಿ ಸಮಾರಂಭ:
ವೀರರಾಣಿ ಬೆಳವಡಿ ಮಲ್ಲಮ್ಮ ವೇದಿಯಲ್ಲಿ ಸಂಜೆ ೭ ಗಂಟೆಗೆ ಬೈಲಹೊಂಗಲದ ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆಯ ಪ್ರಾಚರ್ಯರಾದ ರೀತಾ ಪಿಂಟೋ ಅವರಿಗೆ ವೀರರಾಣಿ ಮಲ್ಲಮ್ಮ ಪ್ರಶಸ್ತಿ ಪ್ರಾದಾನ ಮಾಡಲಾಗುವುದು.
ವೀರರಾಣಿ ಬೆಳವಡಿ ಮಲ್ಲಮ್ಮಳ ವಿಚಾರ ಸಂಕಿರಣ ಫೆ.೨೯ ರಂದು ಬೆಳಿಗ್ಗೆ ೧೧ ಗಂಟೆಗೆ ಬೆಳವಡಿ ಮಲ್ಲಮ್ಮ ಸ್ಮಾರಕ ಭವನದಲ್ಲಿ ನಡೆಲಿದ್ದು, ಬೆಳವಡಿ ಸಂಸ್ಥಾನದ ರಾಜಗುರುಗಳು, ಹೂಲಿ ಹಿರೇಮಠದ ಶ್ರೀ ಶಿವಮಹಾಂತ ಶಿವಾಚಾರ್ಯ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಲಿದ್ದಾರೆ.
ವೀರರಾಣಿ ಬೆಳವಡಿ ಮಲ್ಲಮ್ಮಳ ವಿಚಾರ ಸಂಕಿರಣವನ್ನು ಗದಗ ನಿವೃತ್ತ ಪ್ರಾಧ್ಯಾಪಕ ಡಾ. ಶಕುಂತಲಾ ಸಿಂಧೂರ ಅವರು ಉದ್ಘಾಟಿಸಿ, ಉಪನ್ಯಾಸ ನಿಡಲಿದ್ದಾರೆ. ಹಿರೇಮಲ್ಲೂರ ಈಶ್ವರನ್ ಪಿ.ಯು. ವಿಜ್ಙಾನ ಮಹಾವಿದ್ಯಾಲಯ ಪ್ರಾಚಾರ್ಯರಾದ ಶಶಿಧರ ತೋಡಕರ ಅವರು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.
ಬೆಳವಡಿ ಈಶ ಪ್ರಭು ಶಿಕ್ಷಣ ಸಂಸ್ಥೆ ಆವರಣದಲ್ಲಿ ಫೆ ೨೯ ರಂದು ಬೆಳಿಗ್ಗೆ ೧೨ ಗಂಟೆಗೆ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ ಅಧ್ಯಕ್ಷರು ಹಾಗೂ ಬೈಲಹೊಂಗಲ ಶಾಸಕರಾದ ಮಹಾಂತೇಶ ಎಸ್. ಕೌಜಲಗಿ ಅವರು ಕ್ರೀಡಾ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಬೆಳವಡಿ ಮಲ್ಲಮ್ಮನ ಸಂಸ್ಥಾನದ ಮಹಿಳಾ ಸಬಲೀಕರಣ ವಿಷಯದ ಕುರಿತು ಹೊಸೂರು ವಕೀಲರಾದ ಎಫ್.ಎಸ್.ಸಿದ್ದನಗೌಡ್ರು ಉಪನ್ಯಾಸ ನೀಡಲಿದ್ದಾರೆ. ಅದೇ ರೀತಿಯಲ್ಲಿ ಬೆಳವಡಿ ಉತ್ಸವ ನಡೆದು ಬಂದ ದಾರಿ ವಿಷಯದ ಕುರಿತು ಬಳ್ಳಾರಿ ಎಸ್.ಜಿ.ಪಿ.ಯು ಕಾಲೇಜ ಅರ್ಥಶಾಸ್ತ್ರ ಉಪನ್ಯಾಸಕ ಸಂತೋಷ ಯಕ್ಕುಂಡಿ ಅವರು ಉಪನ್ಯಾಸ ನೀಡಲಿದ್ದಾರೆ.
ಪಬ್ಲಿಕ ನೋಟರಿ ವಕೀಲರಾದ ಸಿ.ಎಸ್.ಚಿಕ್ಕನಗೌಡರ ಅವರು ಸ್ವಾಗತವನ್ನು ಕೋರಲಿದ್ದಾರೆ. ಸವದತ್ತಿ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ವಾಯ್. ಎಮ್.ಯಾಕೊಳ್ಳಿ ಅವರು ಆಶಯ ನುಡಿಯನ್ನಾಡಲಿದ್ದಾರೆ. ಬೆಳವಡಿ ಈಶ ಪ್ರಭು ಶಿಕ್ಷಣ ಸಂಸ್ಥೆಯ ಸಹ ಶಿಕ್ಷಕರಾದ ವಿರೇಶ ಕಾಡೇಶನವರ ನಿರೂಪಿಸಲಿದ್ದಾರೆ.
ಬೆಳವಡಿ ಶಿಕ್ಷಕರಾದ ಶಿವಪ್ಪ ಹುಂಬಿ ವರು ಗೌರವ ಉಪಸ್ಥಿತಿಯನ್ನು ವಹಿಸಲಿದ್ದಾರೆ. ಬೈಲಹೊಂಗಲ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎ.ಎನ್.ಪ್ಯಾಟಿ ಅವರು ವಂದನಾರ್ಪಣೆ ಸಲ್ಲಿಸಲಿದ್ದಾಆರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ವೀರರಾಣಿ ಬೆಳವಡಿ ಮಲ್ಲಮ್ಮನ ಉತ್ಸವ: ವೀರ ಜ್ಯೋತಿ ಯಾತ್ರೆ ವೇಳಾ ಪಟ್ಟಿ
ವೀರರಾಣಿ ಬೆಳವಡಿ ಮಲ್ಲಮ್ಮನ ಉತ್ಸವದ ವೀರ ಜ್ಯೋತಿಯನ್ನು ಫೇ ೨೬ ರಂದು ಬೆಳಿಗ್ಗೆ ೧೦ ಗಂಟೆಗೆ ಸೋಂದಾದಿಂದ ಪ್ರಾರಂಭಿಸಿ ಮೆರವಣಿಗೆ ಮೂಲಕ ಬೀಳೊಡಲಾಗುವದು.
ಅದೇ ದಿನ ಮಧ್ಯಾಹ್ನ ೧೨ ಗಂಟಗೆ ಯಲ್ಲಾಪೂರ, ಹಳಿಯಾಳ, ಅಳ್ನಾವರ ನಂದಗಡ ಮಾರ್ಗವಾಗಿ ಸಂಜೆ ೭ ಗಂಟೆಗೆ ಖಾನಾಪೂರಕ್ಕೆ ಜ್ಯೋತಿ ಆಗಮಿಸಿ ವಾಸ್ತವ್ಯ ಮಾಡಲಿದೆ.
ಫೆ ೨೭ ರಂದು ಬೆಳಿಗ್ಗೆ ೧೦ ಗಂಟೆಗೆ ಖಾನಾಪೂರದಿಂದ ಬೀಳ್ಕೊಡಲಾಗುವುದು ಬಳಿಕ ೧೨ ಗಂಟೆಗೆ ಆಗಮಿಸಲಿದೆಬೆಳಗಾವಿಯಿಂದ ಬೈಲಹೊಂಗಲ ಅನಿಗೋಳ-ನಯಾನಗರ-ಸಂಗೊಳ್ಳಿ-ಪಟ್ಟಿಹಾಳ.ಕೆ.ಬಿ ಮಾರ್ಗವಾಗಿ ಸಿದ್ದಸಮುದ್ರ ಮಠಕ್ಕೆ ಜ್ಯೋತಿ ಆಗಮಿಸಿ, ವಾಸ್ತವ್ಯ ಇರಲಿದೆ.
ಫೆ ೨೮ ಬೆಳಿಗ್ಗೆ ೧೦ ಗಂಟೆಗೆ ಬೆಳವಡಿಗೆ ಜ್ಯೋತಿಯ ಆಗಮನವಾಲಿದ್ದು, ಎಂದು ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ ಅವರು ಜ್ಯೋತಿಗೆ ಸ್ವಾಗತಿಸಲಿದ್ದಾರೆ ಎಂದು ಬೈಲಹೊಂಗಲ ಉಪವಿಭಾಗಾಧಿಕಾರಿಗಳು ಹಾಗೂ ಜ್ಯೋತಿ ಉಪಸಮಿತಿ ಅಧ್ಯಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಳವಡಿ ಮಲ್ಲಮ್ಮನ ಉತ್ಸವ: ಸಾಂಸ್ಕೃತಿಕ ಕಾರ್ಯಕ್ರಮಗಳು
ಜಿಲ್ಲಾಡಳಿತ, ಬೆಳಗಾವಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಫೆ ೨೮ ಮತ್ತು ೨೯ ರಂದು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಬೆಳವಡಿ ಗ್ರಾಮದಲ್ಲಿ ಬೆಳವಡಿ ಮಲ್ಲಮ್ಮನ ಉತ್ಸವದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ವೀರರಾಣಿ ಬೆಳವಡಿ ಮಲ್ಲಮ್ಮನ ವೇದಿಕೆಯಲ್ಲಿ ಸಂಜೆ ೫ ಗಂಟೆಯಿಂದ ೭.೩೦ ಗಂಟೆಯವರೆಗೆ ಚೌಡಕಿ ಪದ, ಭಜನಾ ಪದ, ರಿವಾಯತ ಪದ, ಜನಪದ ಸಂಗೀತ, ಭಜನಾ, ಬಯಲಾಟ ಪದಗಳು, ವಚನ ಸಂಗೀತ, ಗೀತ ರೂಪಕ, ಶಿವ ಭಜನಾ, ಶಹನಾಯಿ, ಸುಗಮ ಸಂಗೀತ, ನೃತ್ಯ ವೈವಿಧ್ಯ ಕಾರ್ಯಕ್ರಮಗಳು ನಡೆಯಲಿವೆ.
ಅದೇ ರೀತಿಯಲ್ಲಿ ಖ್ಯಾತ ಸಂಗೀತ ನಿರ್ದೇಶಕರಾದ ಗುರುಕಿರಣ ಹಾಗೂ ತಂಡದಿಂದ ರಾತ್ರಿ ೮.೩೦ ಗಂಟೆಯಿಂದ ೧೧ ಗಂಟೆಯವರೆಗೆ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.
ಫೆ.೨೯ರ ವೇದಿಕೆಯ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು:
ವೀರರಾಣಿ ಬೆಳವಡಿ ಮಲ್ಲಮ್ಮನ ವೇದಿಕೆಯಲ್ಲಿ ಸಂಜೆ ೫ ಗಂಟೆಯಿಂದ ರಾತ್ರಿ ೮ ಗಂಟೆಯವರೆಗೆ ಸಂಗೀತ, ರಂಗ ಗೀತೆಗಳು, ವಚನ ಸಂಗೀತ, ಜಾನಪದ ಸಂಗೀತ, ನೃತ್ಯ, ಭರತ ನಾಟ್ಯ, ಜಾದು ಪ್ರದರ್ಶನ, ನಗೆ ಹಬ್ಬ, ಕಂಗೀಲು ವಿವಿಧ ನೃತ್ಯ ವೈವಿಧ್ಯ ಕಾರ್ಯಕ್ರಮಗಳು ನಡೆಯಲಿವೆ.
ಖ್ಯಾತ ಗಾಯಕಿ ಶಮಿತಾ ಮಲ್ನಾಡ ಹಾಗೂ ತಂಡದವರಿಂದ ರಾತ್ರಿ ೮.೩೦ ಗಂಟೆಯಿಂದ ೧೦.೩೦ ಗಂಟೆಯವರೆಗೆ ರಸಮಂಜರಿ, ಹೆಲೇನ್ ಮೈಸೂರ ನಿರ್ದೇನದ ಎಲ್ಲರಂತಲ್ಲ ನಾ ಅವ್ವ ನಾಟಕ ಪ್ರರ್ದಶನ ನಡೆಯಲಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ