Kannada NewsKarnataka News

ಬೆಳಗಾವಿ: ಕೊಳವೆ ಬಾವಿಯಲ್ಲಿ 2 ವರ್ಷದ ಕಂದಮ್ಮ

ಪ್ರಗತಿವಾಹಿನಿ ಸುದ್ದಿ, ಹಾರೂಗೇರಿ – ರಾಯಬಾಗ ತಾಲೂಕಿನ ಅಲಕನೂರಿನ 2 ವರ್ಷದ ಕಂದಮ್ಮ ಕೊಳವೆ ಬಾವಿಯಲ್ಲಿ ಸಿಕ್ಕಿಕೊಂಡಿದೆ.

ಶುಕ್ರವಾರವೇ ಬಾಲಕ ಶರತ್ ಸಿದ್ದಪ್ಪ ಹಸಿರೆ ನಾಪತ್ತೆಯಾಗಿದ್ದು, ಮಗುವಿನ ಅಪಹರಣವಾಗಿದೆ ಎಂದು ಶಂಕಿಸಲಾಗಿತ್ತು. ಈ ಕುರಿತು ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಾಗಿತ್ತು.

ಆದರೆ ಇಂದು ಬಾಲಕ ಕೊಳವೆ ಬಾವಿಯಲ್ಲಿ ಬಿದ್ದಿರುವುದು ಗೊತ್ತಾಗಿದೆ. ಇದೀಗ ಅಗ್ನಿಶಾಮಕ ದಳ ಕಾರ್ಯಾಚರಣೆ ನಡೆಸುತ್ತಿದೆ. ಸುಮಾರು 10 -12 ಅಡಿ ಆಳದಲ್ಲಿ ಮಗು ಸಿಕ್ಕಿಬಿದ್ದಿರಬಹುದು ಎಂದು ಶಂಕಿಸಲಾಗಿದೆ.

ಮಗುವಿನ ಪಾಲಕರ ಆಕ್ರಂದನ ಮುಗಿಲು ಮುಟ್ಟಿದೆ. ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಕಾರ್ಯಾಚರಣೆಗೆ ಕ್ರಮ ತೆಗೆದುಕೊಳ್ಳಲಾಗಿದೆ.

Home add -Advt

ತೀವ್ರ ಕಾರ್ಯಾಚರಣೆ ನಡೆಸಿ ಬಾಲಕನ ರಕ್ಷಣೆಗೆ ಎಲ್ಲ ರೀತಿ ಕ್ರಮ ತೆಗೆದುಕೊಳ್ಳುವಂತೆ ಸಂಸದ ಅಣ್ಣಾ ಸಾಹೇಬ ಜೊಲ್ಲೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಭೀಕರ ರಸ್ತೆ ಅಪಘಾತ; ಮಗು ಸೇರಿ ಒಂದೇ ಕುಟುಂಬದ ಮೂವರ ದುರ್ಮರಣ

Related Articles

Back to top button