2022-23 ನೇ ಸಾಲಿನ ಬೆಳಗಾವಿ ಮಹಾನಗರ ಪಾಲಿಕೆಯ ಬಜೆಟ್ ಮಂಡನೆ: ಇಲ್ಲಿದೆ ಸಮಗ್ರ ವಿವರ
ಪ್ರಮುಖ ವೃತ್ತಗಳಲ್ಲಿ ಪ್ರತಿಮೆ ಸ್ಥಾಪನೆಗಾಗಿ ರೂ.100 ಲಕ್ಷಗಳನ್ನು ಕಾಯ್ದಿರಿಸಲಾಗಿದೆ. ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ನಿರ್ವಹಣೆಗಾಗಿ ರೂ.60 ಲಕ್ಷಗಳನ್ನು ಕಾಯ್ದಿರಿಸಲಾಗಿದೆ. ಜಿಲ್ಲಾಡಳಿತ ಕಚೇರಿಯ ಆವರಣದಲ್ಲಿ ಮೂಲಭೂತ ಸೌಕರ್ಯಕ್ಕಾಗಿ ರೂ.50 ಲಕ್ಷಗಳನ್ನು ಮೀಸರಿಸಲಾಗಿದೆ.
ಪತ್ರಕರ್ತರ ಕ್ಷೇಮನಿಧಿ ಸಲುವಾಗಿ ರೂ.30 ಲಕ್ಷಗಳನ್ನು ಮರು ನಿಗಧಿಪಡಿಸಲಾಗಿದೆ.
ವಿವಿಧ ಸ್ಮಶಾನಗಳ ನಿರ್ವಹಣೆಗಾಗಿ ಶಾಸಕರುಗಳ ಹಾಗೂ ಸಾರ್ವಜನಿಕರ ಸಲಹೆಯಂತೆ ಪರಿಸರ ಸ್ನೇಹಿ (ಕುಳ್ಳು) ಗಳಿಂದ ದಹನ ಕ್ರಿಯೆ ನಡೆಸಲು ರೂ.50 ಲಕ್ಷಗಳಷ್ಟು ನಿಗಧಿಪಡಿಸಲಾಗಿದೆ.
ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಸಾಂಕ್ರಾಮಿಕ ರೋಗ ತಡೆಗಟ್ಟಲು ರೂ.50.00 ಲಕ್ಷಗಳನ್ನು ಮೀಸಲಿರಿಸಲಾಗಿದೆ. ಪಾಲಿಕೆಯ ಆದಾಯದಲ್ಲಿ ಶೇ 1 ರಷ್ಟು ಮೊತ್ತದಲ್ಲಿ ರೂ.13.61 ಲಕ್ಷಗಳನ್ನು ಕ್ರೀಡೆಗಳಗಾಗಿ ಮೀಸಲಿರಿಸಲಾಗಿದೆ.
ಮಹಾನಗರ ಪಾಲಕೆಯ ಒಡೆತನದ ಕ್ರೀಡಾ ಚಟುವಟಿಕೆಗಳಗಾಗಿ ನಿರ್ಮಿಸಲಾದ ಈಜುಕೊಳ, ಬ್ಯಾಡ್ಮಿಂಟನ್ ಹಾಲ್ ಹಾಗೂ ಹೈಟೆಕ್ ಜಿಮ್ ನಿರ್ವಹಣೆಗಾಗಿ ರೂ.50 ಲಕ್ಷಗಳನ್ನು ಮೀಸಲಿಡಲಾಗಿದೆ.
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಂದೇಸಲ ಉಪಯೋಗಿಸುವಂತಹ ಪ್ಲಾಸ್ಟಿಕ ಮುಕ್ತ ನಗರವನ್ನಾಗಿಸಲು ಸ್ವಸಹಾಯ ಸಂಘಗಳ ಮೂಲಕ ಪರ್ಯಾಯ ವಸ್ತುಗಳಾದ ಪೇಪರ್ ಬ್ಯಾಗ್, ಬಟ್ಟೆ ಬ್ಯಾಗ್‌ಗಳು ಹಾಗೂ ಇತರೆ ಬ್ಯಾಗಗಳ ತಯಾರಿಕೆಗೆ ರೂ.10 ಲಕ್ಷಗಳನ್ನು ಮೀಸಲಿರಿಸಿದೆ.
ಮಹಾನಗರ ಪಾಲಿಕೆಯ ನಾಲ್ಕು ಉಪ ವಿಭಾಗ ಕೇಂದ್ರಗಳನ್ನು ಬಲಪಡಿಸಲು ಉದ್ದೇಶಿಸಿದ್ದು ಹಾಗೂ ಆಡಳಿತ ವಿಕೇಂದ್ರಿಕರಣಗೊಳಸಿ, ಸಾರ್ವಜನಿಕ ಸೇವೆಗಳಾದ ಪಹಣಿ ವಿತರಣಿ, ಆಸ್ತಿ ತೆರಿಗೆ ಪಾವತಿಸುವ ವ್ಯವಸ್ಥೆ, ಜನನ-ಮರಣ ಪ್ರಮಾಣ ಪತ್ರ ವಿತರಣಿ, ಖಾತೆ ಬದಲಾವಣಿ (ಇ-ಆಸ್ತಿ), ಉದ್ಯಮ ಪರವಾನಿಗೆ ಹಾಗೂ ನವೀಕರಣ, ಇತ್ಯಾದಿ ಮೂಲಭೂತ ಸೇವೆಗಳನ್ನು ಒದಗಿಸಲು ರೂ.20 ಲಕ್ಷಗಳನ್ನು ಮೀಸಲಿರಿಸಲಾಗಿದೆ.
ಸಾರ್ವಜನಿಕರ ಅನುಕೂಲಕ್ಕಾಗಿ ಆಸ್ತಿ ತೆರಿಗೆ, ನೀರಿನ ಕರ ಬಾಕಿ ಇರುವ ಕುರಿತು ತಂತ್ರಜ್ಞಾನವನ್ನು ಬಳಸಿ ಎಸ್.ಎಂ.ಎಸ್. ಮೂಲಕ ತೆರಿಗೆ ವಿವರದ ಮಾಹಿತಿ ನೀಡುವ ವ್ಯವಸ್ಥೆ ಕಲ್ಪಿಸಲಾಗುವುದು. ಬೆಳಗಾವಿ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಎಲ್ಲ 58 ವಾರ್ಡುಗಳ ಸರ್ವತೋಮುಖ ಅಭಿವೃದ್ಧಿ ಸೃಜಿಸಿ ಕಾಪಾಡುವದು ಹಾಗೂ ಸಮಸ್ತ ನಾಗರೀಕರಿಗೆ ಉತ್ಕೃಷ್ಟವಾದ ಸೇವೆ ಒದಗಿಸಲು ಮಹಾನಗರ ಪಾಲಿಕೆ ಸದಾ ಶ್ರಮಿಸುತ್ತಿದೆ. ಆಯವ್ಯಯದಲ್ಲಿ ಅಳವಡಿಸಿದ ಎಲ್ಲ ಕಾರ್ಯಕ್ರಮಗಳು ನಿಗಧಿತ ವೇಳೆಯಲ್ಲಿ ಅನುಷ್ಠಾನಗೊಳಿಸಲಾಗುವುದೆಂಬ ಆಶಾಭಾವನೆ ಹೊಂದಿದ್ದು, 2022-23 ನೇ ಸಾಲಿನಲ್ಲಿ ಬೆಳಗಾವಿ ನಗರದ ಸಮಗ್ರ ಮೂಲಭೂತ ಸೌಕರ್ಯಗಳನ್ನು ಹಾಗೂ ನಾಗರೀಕರ ನಿರೀಕ್ಷೆಯನ್ನು ತಲುಪಲು ಮತ್ತು ಅನುಷ್ಠಾನಗೊಳಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಪಾಲಿಕೆ ಆಯುಕ್ತ ರುದ್ರೇಶ ಗಾಳಿ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ