ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ದಶಕಗಳಿಗೂ ಹೆಚ್ಚು ಕಾಲದ ಬೇಡಿಕೆಯಾಗಿದ್ದ ಬೆಳಗಾವಿ – ಧಾರವಾಡ ನೇರ ರೈಲ್ವೆ ಮಾರ್ಗಕ್ಕೆ ಕೇಂದ್ರ ಸರಕಾರ ಅನುಮೋದನೆ ನೀಡಿರುವುದಕ್ಕೆ ಉದ್ಯಮಿ, ಎಂ ಸ್ಯಾಂಡ್ ಅಸೋಸಿಯೇಶನ್ ಅಧ್ಯಕ್ಷ ಪಾಂಡುರಂಗ ರಡ್ಡಿ ಹರ್ಷ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಈ ರೈಲ್ವೆ ಮಾರ್ಗದಿಂದ ಆರ್ಥಿಕ ಉಳಿತಾಯದ ಜೊತೆಗೆ ಸಮಯವೂ ಉಳಿತಾಯವಾಗಲಿದೆ. ಮುಖ್ಯವಾಗಿ ಉದ್ಯಮಗಳ ಬೆಳವಣಿಗೆಗೆ ಶರವೇಗ ದೊರೆಯಲಿದೆ ಎಂದಿದ್ದಾರೆ.
ಈ ಬೃಹತ್ ಯೋಜನೆಗೆ ಶ್ರಮಿಸಿರುವ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರಿಗೆ ಕೃತಜ್ಞತೆ ಸಲ್ಲಿಸಿರುವ ರಡ್ಡಿ, ಆದಷ್ಟು ಬೇಗ ಯೋಜನೆ ಜಾರಿಯಾಗಲಿ ಎಂದು ಆಶಿಸಿದ್ದಾರೆ.
ಬೆಳಗಾವಿ -ಕಿತ್ತೂರು – ಧಾರವಾಡ ರೈಲ್ವೆ ಯೋಜನೆಗೆ ಕೇಂದ್ರ ಒಪ್ಪಿಗೆ – ಸುರೇಶ ಅಂಗಡಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ